ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕನ್ನಡದ ಮತ್ತೊಬ್ಬ ಖ್ಯಾತ ಕಿರುತೆರೆ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಇದೀಗ ವೈವಾಹಿಕ ಬದುಕಿಗೆ ಹೆಜ್ಜೆ ಇಡುತ್ತಿದ್ದಾರೆ, ಅದಕ್ಕೆ ಪೂರಕವಾಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿರುವ ನಟಿ ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ಬಾಳ ಸಂಗಾತಿಯನ್ನ ಪರಿಚಯ ಮಾಡಿಕೊಟ್ಟಿದ್ದಾರೆ. ಇತ್ತೀಚೆಗೆ ಕನ್ನಡ ಕಿರುತೆರೆ ಲೋಕದ ಬಹಳಷ್ಟು ನಟಿಯರು ಸಿಂಗಲ್ ಲೈಫ್ ಇಂದ ಮ್ಯಾರೇಜ್ ಲೈಫ್ ಗೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿಯರಾದ ಪ್ರಿಯಾಂಕಾ ಚಿಂಚೋಳಿ, ತ್ರಿನಯನಿ ಧಾರಾವಾಹಿ ಖ್ಯಾತಿಯ ನಟಿ ಆಶಿಕಾ ಪಡುಕೋಣೆ ಮತ್ತು ಆಶಿತಾ ಚಂದ್ರಪ್ಪ ದಾಂಪತ್ಯ ಬದುಕಿಗೆ ಪ್ರವೇಶ ಪಡೆದಿದ್ದಾರೆ.

ಇದೀಗ ಅವರ ಸಾಲಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಧಾರಮಣ ಮತ್ತು ಗಾಂಧಾರಿ ಸೀರಿಯಲ್ ಖ್ಯಾತಿಯ ನಟಿ ಕಾವ್ಯಾಗೌಡ ಕೂಡ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಸಹಜವಾಗಿ ಮದುವೆ ಆಗುವ ಮುಂಚೆ ಎಲ್ಲಾ ಯುವಕ ಯುವತಿಯರು ಅಂತಿಮವಾಗಿ ಬ್ಯಾಚ್ಯೂಲರ್ ಪಾರ್ಟಿ ಮಾಡುತ್ತಾರೆ ಅಂತೆಯೇ ನಟಿ ಕಾವ್ಯಾಗೌಡ ಕೂಡ ತಮ್ಮ ಸ್ನೇಹಿತರ ಜೊತೆಗೂಡಿ ಬ್ಯಾಚ್ಯೂಲರ್ ಪಾರ್ಟಿ ಎಂಜಾಯ್ ಮಾಡಿದ್ದಾರೆ. ಇನ್ನು ನಟಿ ಕಾವ್ಯಾಗೌಡ ಅವರು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಿರುವುದು ಸೋಮಶೇಖರ್ ಎಂಬುವರನ್ನು. ಇದೇ ಡಿಸೆಂಬರ್ ತಿಂಗಳ ಒಂದರಂದು ಆರತಕ್ಷತೆ ಕಾರ್ಯಕ್ರಮವನ್ನು ಎರಡರಂದು ಧಾರಾ ಮುಹೂರ್ತ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಕಾವ್ಯಗೌಡ ಮತ್ತು ಸೋಮಶೇಖರ್ ಕುಟುಂಬ ಅದ್ದೂರಿಯಾಗಿ ಮದುವೆ ಮಾಡಲು ಸಕಲ ಸಿದ್ದತೆ ನಡೆಸುತ್ತಿದೆಯಂತೆ. ಈ ಮೊದಲೇ ಇವರಿಬ್ಬರ ಮದುವೆ ಜರುಗಬೇಕಾಗಿತ್ತಂತೆ. ಆದರೆ ಕೋವಿಡ್ ಎರಡನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿತ್ತಂತೆ. ಇದೀಗ ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಯತ್ತ ಮರಳಿದ ಕಾರಣ ಅದ್ದೂರಿಯಾಗಿ ತಮ್ಮ ಮಕ್ಕಳ ಮದುವೆಯನ್ನು ಮಾಡಲು ಇವರ ಕುಟುಂಬ ನಿರ್ಧಾರ ಮಾಡಿದ್ದಾರಂತೆ. ನಟಿ ಕಾವ್ಯ ಗೌಡ ಮನೆಯಲ್ಲಿ ಈಗಾಗಲೇ ಆಪ್ತರು ಬಂಧು ಬಳಗ ದಂಡೇ ಸೇರಿದ್ದು, ಮಹಂದಿ ಶಾಸ್ತ್ರ ಮತ್ತು ಅರಿಶಿನ ಶಾಸ್ತ್ರಗಳ ಸಂಭ್ರಮ ಮನೆ ಮಾಡಿದೆ.

%d bloggers like this: