ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಅನೇಕ ಯುವ ಕಲಾವಿದರು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಅವರ ಸಾಲಿಗೆ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮಿ ಬಾರಮ್ಮ ಸೀರೀಯಲ್ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಅವರು ಬ್ಯಾಚುಲರ್ ಲೈಫ್ ಇಂದ ದಾಂಪತ್ಯದ ಬಂಧನದ ಬದುಕಿಗೆ ಪ್ರವೇಶ ಮಾಡಿದ್ದಾರೆ. ಹೌದು ಕನ್ನಡದಲ್ಲಿ ಇರುವ ಒಂದಷ್ಟು ಬ್ಯೂಟಿಫುಲ್ ಚೆಲುವೆಯರಲ್ಲಿ ನಟಿ ರಶ್ಮಿ ಪ್ರಭಾಕರ್ ಅವರು ಸಹ ಒಬ್ಬರಾಗಿದ್ದರು. ತಮ್ಮ ಮುದ್ದಾದ ಅಭಿನಯದ ಮೂಲಕ ನಾಡಿನಾದ್ಯಂತ ಮನೆ ಮನಗಳಲ್ಲಿ ಹೆಸರಾಗಿದ್ದ ರಶ್ಮಿ ಪ್ರಭಾಕರ್ ಅವರು ಕನ್ನಡ ಮಾತ್ರವಲ್ಲದೆ ತೆಲುಗು ಕಿರುತೆರೆ ಲೋಕದಲ್ಲಿ ಸಹ ಹೆಸರು ಗಳಿಸಿದ್ದಾರೆ. ಪ್ರತಿಯೊಂದರಲ್ಲಿ ವಿಭಿನ್ನತೆ ಇಷ್ಟ ಪಡುವ ರಶ್ಮಿ ಅವರು ತಮ್ಮ ಬಾಳ ಸಂಗಾತಿ ಆಗಿ ಬರುವ ವ್ಯಕ್ತಿಯನ್ನ ಕೂಡ ಅದೇ ರೀತಿ ಆಯ್ಕೆ ಮಾಡಿಕೊಂಡಿದ್ದಾರೆ.

ಹೌದು ನಿಖಿಲ್ ಭಾರ್ಗವ್ ಎಂಬುವರನ್ನ ರಶ್ಮಿ ಪ್ರಭಾಕರ್ ಅವರು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಹೌದು ನಿಖಿಲ್ ಭಾರ್ಗವ್ ಅವರು ತಮ್ಮ ಬಾಳ ಸಂಗಾತಿ ರಶ್ಮಿ ಪ್ರಭಾಕರ್ ಅವರಿಗೆ ಇತ್ತೀಚೆಗೆ ಬ್ರೈಟ್ ಟು ಬಿ ಅಂತ ಬರೆಸಿ ಕೇಕ್ ಕಟ್ ಮಾಡಿ ಸಂತೋಷ ಪಡಿಸಿದ್ದರು. ಅದರ ಒಂದಷ್ಟು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು. ಇದೀಗ ಮೊನ್ನೆ ತಾನೇ ಅಂದರೆ ಏಪ್ರಿಲ್ 25ರಂದು ಬೆಂಗಳೂರಿನ ಬಸವನಗುಡಿಯ ಕಲ್ಯಾಣ ಮಂಟಪವೊಂದರಲ್ಲಿ ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟಿದ್ದಾರೆ. ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ವರ ಪೂಜೆ ಹೀಗೆ ಎಲ್ಲಾ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಅನುಸರಿಸಿ ಹೊಸ ಬಾಳಿಗೆ ರಶ್ಮಿ ಮತ್ತು ನಿಖಿಲ್ ಭಾರ್ಗವ್ ಅವರು ಹೆಜ್ಜೆ ಇಟ್ಟಿದ್ದಾರೆ.

ನೀಲಿ ಬಣ್ಣದ ರೇಷ್ಮೆ ಸೀರೆ ಉಟ್ಟು ಮಧು ಮಗಳಾಗಿ ರಶ್ಮಿ ಮಿಂಚಿದರೆ, ಮಧು ಮಗನಾಗಿ ನಿಖಿಲ್ ಅವರು ಬಿಳಿ ಬಣ್ಣದ ಶಲ್ಯ ಪೇಟ ಧರಿಸಿ ಕಂಗೊಳಿಸಿದ್ದಾರೆ. ನಟಿ ರಶ್ಮಿ ಪ್ರಭಾಕರ್ ಅವರ ಮದುವೆ ಸಂಭ್ರಮಕ್ಕೆ ಕಿರುತೆರೆ ಕಲಾವಿದರಾದ ಕವಿತಾ, ಚಂದನ್ ದಂಪತಿ, ಲಕ್ಷ್ಮಿ ಸಿದ್ದಯ್ಯ, ನೇಹಾ ಚಂದು ದಂಪತಿ ಸೇರಿದಂತೆ ಅವರ ಎಲ್ಲಾ ಆಪ್ತ ಸ್ನೇಹಿತ ವರ್ಗ ನೆರೆದಿತ್ತು. ಇದರ ಒಂದಷ್ಟು ಫೋಟೋಗಳನ್ನು ರಶ್ಮಿ ಪ್ರಭಾಕರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿದ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇನ್ನು ನಟಿ ರಶ್ಮಿ ಪ್ರಭಾಕರ್ ಅವರು ಕನ್ನಡ ಧಾರಾವಾಹಿಯಲ್ಲಿ ಮಾತ್ರ ಅಲ್ಲದೆ ತೆಲುಗಿನಲ್ಲಿ ಕಾವ್ಯಾಂಜಲಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ಇದೀಗ ರಶ್ಮಿ ಪ್ರಭಾಕರ್ ಅವರು ಮಿಸ್ ಇಂದ ಮಿಸಸ್ ನಿಖಿಲ್ ಭಾರ್ಗವ್ ಆಗಿದ್ದಾರೆ.