ಭಾರತೀಯ ಚಿತ್ರರಂಗದ ಖ್ಯಾತ ನಟಿ ಬಾಲಿವುಡ್ ನಟ ಕಮ್ ನಿರ್ಮಾಪಕನೊಟ್ಟಿಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರಂತೆ, ಇತ್ತೀಚೆಗೆ ಇಂಡಿಯನ್ ಸಿನಿಮಾ ದುನಿಯಾದಲ್ಲಿ ಬರೀ ಮದುವೆಗಳ ಸುದ್ದಿ ವಿಚಾರವೇ ಆಗಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಜೊತೆಗೆ ಹಿಂದಿ ಭಾಷೆಯ ಒಬ್ಬರ ನಂತರ ಒಬ್ಬರಂತೆ ಬಹುತೇಕ ಕಲಾವಿದರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಮೂಲಕ ಸುದ್ದಿಯಾಗುತ್ತಲೇ ಇದ್ದಾರೆ. ಅಂತೆಯೇ ದಕ್ಷಿಣ ಭಾರತ ಮಾತ್ರ ಅಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ಮಿಂಚುತ್ತಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ತಮ್ಮ ಬಹು ಕಾಲದ ಗೆಳೆಯನೊಟ್ಟಿಗೆ ವಿವಾಹ ಬಂಧನಕ್ಕೆ ಸಜ್ಜಾಗಿದ್ದಾರಂತೆ.

ಆದರೆ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ಸಿಗುತ್ತಿಲ್ಲ. ಆದರೆ ಇದೀಗ ಬಾಲಿವುಡ್ ನಲ್ಲಿ ಈ ಲವ್ ಬರ್ಡ್ಸ್ ಗಳದ್ದೇ ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಕಳೆದ ಕೆಲವು ತಿಂಗಳ ಹಿಂದೆ ಅಕ್ಟೋಬರ್ ತಿಂಗಳಿನಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು ತಮ್ಮ ಒಂದಷ್ಟು ಫೋಟೋ ಶೇರ್ ಮಾಡಿಕೊಂಡಿದ್ದರು. ನಟ ಜಾಕಿ ಭಗ್ನಾನಿತೋ ಅವರೊಂದಿಗಿರುವ ಫೋಟೋ ಶೇರ್ ಮಾಡಿಕೊಂಡಿದ್ದನ್ನ ನೋಡಿದ ಬಾಲಿವುಡ್ ಮಂದಿ ಇವರಿಬ್ಬರ ನಡುವೆ ಏನೋ ಇದೆ ಎಂದು ಗುಸು ಗುಸು ಮಾತಾಡಿಕೊಂಡಿದ್ದರು.

ನಟಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ 31 ನೇ ಹುಟ್ಟು ಹಬ್ಬ ದಿನದಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಥ್ಯಾಂಕ್ಯೂ ಲವ್ ಈ ವರ್ಷದ ದೊಡ್ಡ ಗಿಫ್ಟ್ ಗಳಲ್ಲಿ ನೀನು ನನಗೆ ಸ್ಪೆಷಲ್ ನನ್ನ ಬದುಕಿಗೆ ಬಣ್ಣ ತುಂಬಿ, ಸದಾ ನಾನು ನಗುವಿನಿಂದ ಇರಲು ಕಾರಣವಾಗಿರುವ ನೀನು ನನಗೆ ಸಿಕ್ಕಿರುವುದು ಅದ್ಭುತವೇ ಸರಿ ಮತ್ತೊಮ್ಮೆ ಲವ್ ಯೂ ಸೋ ಮಚ್ ಜಾಕಿ ಭಗ್ನಾನಿ ಎಂದು ಬರೆದುಕೊಂಡು ತಮ್ಮ ಪ್ರಿಯಕರನ ಕೈ ಹಿಡಿದು ನಡೆದು ಹೋಗುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಮೂಲಕವೇ ಇವರಿಬ್ಬರ ರಿಲೇಶನ್ ಶಿಪ್ ಬಗ್ಗೆ ಖಚಿತವಾಗಿತ್ತು.

ಅಷ್ಟೇ ಅಲ್ಲದೆ ಈ ಜೋಡಿ ಕೆಲವೇ ದಿನಗಳಲ್ಲಿ ಮದುವೆ ಆಗಲಿದ್ದಾರೇ ಎಂಬ ಸುದ್ದಿ ಭಾರಿ ಆಗಿದೆ. ನಟ ಹಾಗೂ ನಿರ್ಮಾಪಕರಾಗಿಯೂ ತೊಡಗಿಸಿಕೊಂಡಿರುವ ಜಾಕಿ ಭಗ್ನಾನಿ ಅವರು ಖ್ಯಾತ ಹಿರಿಯ ನಿರ್ಮಾಪಕರಾದ ವಾಸು ಭಗ್ನಾನಿ ಅವರ ಪುತ್ರರಾಗಿದ್ದಾರೆ. ಇನ್ನು ಕನ್ನಡದ ಖ್ಯಾತ ನಟ ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್ ಅವರ ಮೊದಲ ಚಿತ್ರ ಗಿಲ್ಲಿ ಸಿನಿಮಾದ ಮೂಲಕ ನಟಿ ರಾಕುಲ್ ಪ್ರೀತ್ ಸಿಂಗ್ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟರು. ಇದಾದ ಬಳಿಕ ತೆಲುಗು,ಹಿಂದಿ ಸಿನಿಮಾಗಳಲ್ಲಿ ಇಂದು ಬಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ಇದ್ದಕ್ಕಿದ್ದಂತೆ ತಮ್ಮ ಮದುವೆಯ ಬಗ್ಗೆ ಸುದ್ದಿ ಹಬ್ಬಿಸಿರುವ ಜನರ ವಿರುದ್ದ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಕೆಂಡ ಕಾರಿದ್ದಾರೆ. ಕೈ ತುಂಬಾ ಸಿನಿಮಾಗಳಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಅವರಿಗೆ,ಸದ್ಯಕ್ಕೆ ಮದುವೆ ಆಗುವ ಆಲೋಚನೆ ಇಲ್ಲವಂತೆ. ಹಾಗಾಗಿ ಇಲ್ಲ ಸಲ್ಲದ ಗಾಳಿಸುದ್ದಿ ಹಬ್ಬಿಸಬೇಡಿ ಎಂದು ನಟಿ ರಾಕುಲ್ ಪ್ರೀತ್ ಸಿಂಗ್ ಗರಂ ಆಗಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ ನಟರಾದ ಅಜಯ್ ದೇವಗನ್ ನಿರ್ದೇಶನ ದ ತಾವೇ ಸ್ವತಃ ನಿರ್ಮಾಣ ಮಾಡುತ್ತಿರುವ ಮೇಡೇ ಚಿತ್ರದಲ್ಲಿ ನಟಿಸಿದ್ದಾರೆ.