ಭಾರತೀಯ ಚಿತ್ರರಂಗವು ಸ್ಯಾಂಡಲ್ವುಡ್ ನ್ನು ನೋಡುವ ದಿಕ್ಕನ್ನೇ ಬದಲಾಯಿಸಿದ ಸಿನೆಮಾ ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್. ಕೆಜಿಎಫ್ ಸಿನೆಮಾ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲಗು ಹೀಗೆ ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಕೆಜಿಎಫ್ ಸಿನೆಮಾದ ಹಿಂದಿ ಅವತರಣಿಕೆಯಲ್ಲಿ ಮೂಡಿ ಬಂದ ಗಲಿ ಗಲಿ ಹಾಡು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿದ ಬೆಡಗಿ ಮೌನಿ ರಾಯ್. ನಾಗಿಣಿ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟ ಮೌನಿ ರಾಯ್ ಸದ್ಯಕ್ಕೆ ಬಾಲಿವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡವರು. ತಮ್ಮ ಕ್ಯೂಟ್ ಆಕ್ಟಿಂಗ್ ಹಾಗೂ ನೃತ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮೌನಿ ರಾಯ್ ಇದೀಗ ಸದ್ದಿಲ್ಲದೇ ಮದುವೆ ತಯಾರಿ ನಡೆಸಿದ್ದಾರೆ.

ಹೌದು ಇತ್ತೀಚೆಗೆ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಸುತ್ತಾಡುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಇದೀಗ ಮದುವೆ ತಯಾರಿ ನಡೆಸಿದ್ದಾರೆ ಎಂದು ಸುದ್ದಿಯಲ್ಲಿದ್ದಾರೆ. 2022 ರಲ್ಲಿ ಇವರಿಬ್ಬರೂ ವಿವಾಹವಾಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಮೌನಿ ರಾಯ್ ಮತ್ತು ಸೂರಜ್ ಜೋಡಿ ಡೆಸ್ಟಿನೇಶನ್ ವೆಡ್ಡಿಂಗ್ ಗೆ ಪ್ಲಾನ್ ಮಾಡಿತ್ತು. ಸೂರಜ್ ಅವರು ದುಬೈ ಮೂಲದವರಾದ್ದರಿಂದ ದುಬೈನಲ್ಲಿಯೇ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ ಸುದ್ದಿ ಹರಡಿತ್ತು. ಆದರೆ ಇದೀಗ ಇವರಿಬ್ಬರು ಅವರ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ದುಬೈನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಬದಲು ಭಾರತದಲ್ಲಿಯೇ ಸಮುದ್ರ ತೀರದಲ್ಲಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

ವಿವಾಹಕ್ಕಾಗಿ ಅವರು ಗೋವಾದ ಪಂಚತಾರಾ ಹೋಟೆಲ್ ಒಂದನ್ನು ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಮೌನಿ ರಾಯ್ ಗೋವಾ ಹಾಗೂ ಮುಂಬೈ ನಡುವೆ ಓಡಾಡುತ್ತಿದ್ದಾರೆ. ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇದೇ ಜನವರಿ 27 ರಂದು ಮೌನಿ ರಾಯ್ ಹಾಗೂ ಸೂರಜ್ ಅವರು ಹಸೆಮಣೆ ಏರಲಿದ್ದಾರೆ. ಈಗಾಗಲೇ ಮದುವೆಗೆ ಅಥಿತಿಗಳನ್ನು ಆಹ್ವಾನಿಸಲಾಗಿದ್ದು, ಸೂರಜ್ ಅವರೂ ಕೂಡ ಭಾರತಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ ಪಶ್ಚಿಮ ಗೋವಾದ ವೆಗೇಟರ್ ಬೀಚ್ ನಲ್ಲಿ ವಿವಾಹ ಸಮಾರಂಭವು ನಡೆಯಲಿದ್ದು, ಅನೇಕ ಕಾರ್ಯಕ್ರಮಗಳು ನಡೆಯಲಿದೆ.

ಡಾನ್ಸ್ ಮೂಲಕವೇ ಎಲ್ಲರ ಮನೆಮಾತಾಗಿರುವ ಮೌನಿ ರಾಯ್ ವಿವಾಹ ಸಮಾರಂಭದಲ್ಲಿ ಕೂಡ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದೆ. ಜನೆವರಿ 27 ರಂದು ವಿವಾಹ ನಡೆಯಲಿದ್ದು 28 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಶೇಷ ನೃತ್ಯ ಕಾರ್ಯಕ್ರಮವನ್ನು ಮೌನಿ ರಾಯ್ ಅವರು ಅವರ ಸ್ನೇಹಿತರಾದ ಪ್ರತೀಕ್ ಉಟೇಕರ್ ಹಾಗೂ ರಾಹುಲ್ ಶೆಟ್ಟಿ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಸದ್ಯಕ್ಕೆ ದೊರಕಿರುವ ಮಾಹಿತಿಯ ಪ್ರಕಾರ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್, ಏಕ್ತಾ ಕಪೂರ್ ಹಾಗೂ ವಸ್ತ್ರ ವಿನ್ಯಾಸಕ ಮನಿಷ್ ಮಲ್ಹೊತ್ರ ಸೇರಿದಂತೆ ಹಲವರು ವಿವಾಹದಲ್ಲಿ ಭಾಗವಹಿಸಲಿದ್ದಾರೆ. ಆದರೆ ಹೊರಗೆ ಸಾರ್ವಜನಿಕವಾಗಿ ಹೆಚ್ಚು ಸುದ್ದಿ ಮಾಡದಂತೆ ಸೂಚಿಸಲಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.