ಡಾರ್ಲಿಂಗ್ ಕೃಷ್ಣ ಅವರ ಹೊಸ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪುನೀತ್ ರಾಜ್‍ಕುಮಾರ್ ಅವರು

ಆದಷ್ಟು ಬೇಗ ದೇವರು ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪೋಸ್ಟ್ ಮಾಡಿದ ಡಾರ್ಲಿಂಗ್ ಕೃಷ್ಣ, ಕನ್ನಡ ಚಿತ್ರರಂಗದ ಧೃವತಾರೆ ಭಾಗ್ಯವಂತ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನ ದೈಹಿಕವಾಗಿ ಅಗಲಿ ಎರಡು ತಿಂಗಳು ಕಳೆದಿವೆ. ಆದರೂ ಕೂಡ ಪುನೀತ್ ರಾಜ್ ಕುಮಾರ್ ಅವರು ಇಲ್ಲ ಎಂಬ ಕರುನಾಡಿಗೆ ಕನಸಾಗಿಯೇ ಉಳಿದಿದೆ. ಅಪ್ಪು ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದ್ದು ಇತಿಹಾಸದ ಪುಟ ಸೇರಿದೆ. ಅಪ್ಪು ಅಗಲಿ ಎರಡು ತಿಂಗಳು ಆಗಿದ್ದರು ಕೂಡ ಅವರ ಸಮಾಧಿ ನೋಡಲು ರಾಜ್ಯ ಸೇರಿದಂತೆ ಇತರೆ ರಾಜ್ಯದ ಮೂಲೆ ಮೂಲೆಗಳಿಂದ ಬಹುತೇಕರು ಸಕುಟುಂಬ ಸಮೇತ ಬಂದು ಪುನೀತ್ ಅವರ ಪುಣ್ಯಭೂಮಿ ದರ್ಶನ ಮಾಡುತ್ತಿದ್ದಾರೆ.

ಇದೀಗ ಅಪ್ಪು ಅವರ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಹೊರ ಬಿದ್ದಿದೆ. ಹೌದು ಈ ಸುದ್ದಿ ನೀಡಿರುವುದು ಬೇರಾರು ಅಲ್ಲ ಅಪ್ಪು ಅವರ ಆಪ್ತಿಷ್ಟರಲ್ಲಿ ಒಬ್ಬರಾಗಿರುವ ಸ್ಯಾಂಡಲ್ ವುಡ್ ಡಾರ್ಲಿಂಗ್ ಕೃಷ್ಣ ಅವರೇ ಅಪ್ಪು ಅವರ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು ಅಪ್ಪು ಅವರು ನಿಧನ ಆಗುವ ಮುನ್ನ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದರು‌. ಭರ್ಜರಿ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ಮತ್ತು ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಈ ಎರಡು ಚಿತ್ರಗಳ ಪೈಕಿ ಜೇಮ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಗಳಲ್ಲಿ ಬಿಝಿ಼ ಆಗಿದ್ದರೆ, ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಈ ಚಿತ್ರದ ಪೋಸ್ಟರ್ ವೊಂದನ್ನ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟರ್ ಜೊತೆಗೆ ತಲೆ ಬರಹವಾಗಿ ಆದಷ್ಟು ಬೇಗ ದೇವರು ನಿಮ್ಮೆದುರಿಗೆ ಬರಲಿದ್ದಾರೆ ಎಂದು ಅಪ್ಪು ಅವರನ್ನು ನೆನೆಯುತ್ತ ಭಾವುಕತೆಯಿಂದ ತಮ್ಮನಟನೆಯ ಲಕ್ಕಿ ಮ್ಯಾನ್ ಸಿನಿಮಾದ ಪೋಸ್ಟರ್ ಶೇರ್ ಮಾಡಿದ್ದಾರೆ. ಪುನೀತ್ ಅವರು ಈ ಲಕ್ಕಿ ಮ್ಯಾನ್ ಸಿನಿಮಾದ ಹಾಡೊಂದರಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ನಟ, ನಿರ್ದೇಶಕ ಪ್ರಭುದೇವ ಅವರೊಟ್ಟಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಲಕ್ಕಿ ಮ್ಯಾನ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದು,ನಟಿ ರೋಶಿನಿ ಪ್ರಕಾಶ್ ಎರಡನೇ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇನ್ನು ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಮಾಳವಿಕಾ ಅವಿನಾಶ್, ಸುಧಾ ಬೆಳವಾಡಿ,ಸುಂದರ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಲಕ್ಕಿ ಮ್ಯಾನ್ ಸಿನಿಮಾ ಜನವರಿ ತಿಂಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿದು ಬಂದಿದೆ.

%d bloggers like this: