ಡಾರ್ಲಿಂಗ್ ಕೃಷ್ಣ ಅವರ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪಾತ್ರಕ್ಕೆ ಧ್ವನಿ ಕೊಡುತ್ತಿರುವ ಕಲಾವಿದ ಇವರೇ ನೋಡಿ

ಸ್ಯಾಂಡಲ್ ವುಡ್ ಡಾರ್ಲಿಂಗ್ ಕೃಷ್ಣ ಅವರು ಅಭಿನಯಿಸಿರುವ ಲಕ್ಕಿ ಮ್ಯಾನ್ ಚಿತ್ರ ತಂಡದಿಂದ ಅಗಲಿದ ಅಪ್ಪು ಅವರ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಸಜ್ಜಾಗಿದೆ. ಹೌದು ಡಾರ್ಲಿಂಗ್ ಕೃಷ್ಣ ನಟನೆಯ ಲಕ್ಕಿ ಮ್ಯಾನ್ ಚಿತ್ರದಲ್ಲಿ ದಿ.ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ‌. ಇದು ಅವರ ಕೊನೆಯ ಚಿತ್ರವಾಗಿದೆ. ಈ ಲಕ್ಕಿ ಮ್ಯಾನ್ ಚಿತ್ರದ ಹಾಡೊಂದರಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವ ಅವರೊಟ್ಟಿಗೆ ಅಪ್ಪು ಸಖತ್ ಸ್ಟೆಪ್ ಹಾಕಿದ್ದಾರೆ. ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳಿರುವ ಈ ಲಕ್ಕಿ ಮ್ಯಾನ್ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಕಂಠದಾನ ಕಾರ್ಯಗಳು ಇತ್ತೀಚೆಗೆ ನಡೆದಿವೆ. ನಟ ಡಾರ್ಲಿಂಗ್ ಕೃಷ್ಣ ಈ ಚಿತ್ರದಲ್ಲಿ ತಮ್ಮ ಪಾತ್ರದ ಡಬ್ಬಿಂಗ್ ಮಾಡುವಾಗ ಅಪ್ಪು ಅವರ ಜೊತೆಗೆ ಕಾಣಿಸಿಕೊಂಡಿರುವ ದೃಶ್ಯಗಳನ್ನ ಕಂಡು ಭಾವುಕರಾಗಿದ್ದರು‌.

ಅಷ್ಟೇ ಅಲ್ಲದೇ ಅಪ್ಪು ಅವರ ಜೊತೆಗೆ ನಟಿಸಿರುವ ಒಂದಷ್ಟು ದೃಶ್ಯ ಸನ್ನಿವೇಶಗಳ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಪುನೀತ್ ಅವರ ಬಗ್ಗೆ ಅಪ್ಪು ಸರ್ ಜೊತೆಗಿನ ಈ ಚಿತ್ರದ ಚಿತ್ರೀಕರಣ ತುಂಬಾ ವಿಶೇಷವಾಗಿತ್ತು. ಮತ್ತು ಇದು ಎಂದೆಂದಿಗೂ ವಿಶೇಷವಾಗಿಯೇ ಉಳಿಯುತ್ತದೆ ಎಂದು ಭಾವುಕ ನುಡಿಗಳನ್ನು ಬರೆದುಕೊಂಡಿದ್ದರು. ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ಮಾರ್ಚ್ 17ರಂದು ಅಪ್ಪು ಅವರ ಹುಟ್ಟು ಹಬ್ಬ. ಅಂದು ಅವರಿಗೆ ವಿಶೇಷವಾಗಿ ನಮನ ಸಲ್ಲಿಸುವುದರ ಜೊತೆಗೆ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಲಕ್ಕಿ ಮ್ಯಾನ್ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಮಾರ್ಚ್ 17ರಂದು ಅಪ್ಪು ಅವರ ಜನ್ಮದಿನದ ಪ್ರಯುಕ್ತ ಅಂದೇ ಲಕ್ಕಿ ಮ್ಯಾನ್ ಚಿತ್ರ ರಿಲೀಸ್ ಮಾಡಿ ಈ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಿದ್ದಾರಂತೆ.

ಲಕ್ಕಿ ಮ್ಯಾನ್ ಸಿನಿಮಾ ಅಪ್ಪು ನಟಿಸಿದ ಕೊನೆಯ ಚಿತ್ರವಾದ ಕಾರಣ ಚಿತ್ರತಂಡ ಈ ನಿರ್ಧಾರ ಮಾಡಿದೆ. ಇನ್ನು ಈ ಚಿತ್ರದ ಶೂಟಿಂಗ್ ನಲ್ಲಿ ರೆಕಾರ್ಡಿಂಗ್ ಆಗಿರುವ ಅಪ್ಪು ಧ್ವನಿಯನ್ನೇ ಆದಷ್ಟು ಬಳಸಿಕೊಂಡಿದ್ದು, ಕೆಲವು ದೃಶ್ಯ ಸನ್ನಿವೇಶಗಳಲ್ಲಿ ಸ್ಪಷ್ಟವಾಗಿಲ್ಲದ ದೃಶ್ಯಗಳಿಗೆ ಮಿಮಿಕ್ರಿ ಗೋಪಿ ಅವರಿಂದ ಅಪ್ಪು ಅವರ ರೀತಿ ಕಂಠದಾನ ಮಾಡಿಸುವ ಯೋಜನೆ ಹಾಕಿಕೊಂಡಿದೆ ಎಂದು ನಟ ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದು, ನಟಿ ರೋಶಿನಿ ಪ್ರಕಾಶ್ ಎರಡನೇ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇನ್ನು ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಮಾಳವಿಕಾ ಅವಿನಾಶ್, ಸುಧಾ ಬೆಳವಾಡಿ,ಸುಂದರ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ 17ರಂದೇ ಅಪ್ಪು ಅವರ ಜೇಮ್ಸ್ ಚಿತ್ರ ಕೂಡ ಅಂದೇ ರಿಲೀಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

%d bloggers like this: