ದರ್ಶನ್ ನಮ್ಮ ಸಂಸ್ಥೆಯ ಕೊಡುಗೆ ಅವರಿಗೆ ಮೊದಲು ಬಣ್ಣ ಹಚ್ಚಿದ್ದೆ ನಾನು, ಹೀಗೆ ಅಂದದ್ದು ಕನ್ನಡದ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಹಾಗೂ ಚಿತ್ರಸಾಹಿತಿ ಹೀಗೆ ಬಹುಮುಖ ಪ್ರತಿಭೆಯಾದ ಕಲಾಸಾಮ್ರಾಟ್ ಎಂದೇ ಕರೆಯುವ ಎಸ್.ನಾರಾಯಣ್ ಬೆರಳೆಕೆಯ ಶಿಸ್ತಿನ ಸಿಪಾಯಿ ನಿರ್ದೇಶಕರಲ್ಲಿ ಇವರು ಮೊದಲಿಗರು ಎಂದರೆ ತಪ್ಪಾಗುವುದಿಲ್ಲ ಮತ್ತು ಅತಿಶಯೋಕ್ತಿ ಆಗುವುದಿಲ್ಲ. ಎಸ್.ನಾರಾಯಣ್ ಅವರು ಚಿತ್ರರಂಗದಲ್ಲಿ ತಮ್ಮ ಮೂವತ್ತು ವರ್ಷಗಳ ಸುಧೀರ್ಘ ಪಯಣವನ್ನು ಹಂಚಿಕೊಂಡಿದ್ದಾರೆ. ನಾನು ನಿರ್ದೇಶಕ ಆಗುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ, ಕಾರಣ ಅಂದಿನ ಕಾಲಘಟ್ಟದ ಚಿತ್ರರಂಗದಲ್ಲಿ ನಿರ್ದೇಶಕರು ಭೀಷ್ಮರಂತೆ ಘಟಾನುಗಟಿ ಪ್ರತಿಭಾವಂತರು ಇದ್ದರು ಇವರ ನಡುವೆ ನಾನು ನಿರ್ದೇಶಕ ನಾಗುತ್ತೇನೆ ಎಂಬ ನಂಬಿಕೆ ನನಗಿರಲಿಲ್ಲ.

ಚೈತ್ರದ ಪ್ರೇಮಾಂಜಲಿ ಚಿತ್ರ ಮಾಡುವಾಗ ನಾನು ಭಯದಲ್ಲಿ ಚಿತ್ರ ನಿರ್ದೇಶನ ಮಾಡಿದೆ, ಆದರೆ ಭವಿಷ್ಯದಲ್ಲಿ ನಾನು ನನ್ನ ವೃತ್ತಿ ಬದುಕಿನಲ್ಲಿ ರೂಡಿಸಿ ಕೊಂಡ ಬದ್ದತೆ, ಶಿಸ್ತು ನನ್ನನ್ನು ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡುವ ಹಂತಕ್ಕೆ ಕರೆದೋಯ್ತು ಅದು ನನ್ನ ಸೌಭಾಗ್ಯ ಅಣ್ಣಾವ್ರ ಜೊತೆ ಶಬ್ಧವೇದಿ ಚಿತ್ರ ಮಾಡುವಾಗ ನನಗೆ 36 ವರ್ಷ ಅವರಿಗೆ 72 ವರ್ಷವಾಗಿತ್ತು. ನನ್ನ ಅದೃಷ್ಟ ಎಂದರೆ ಒಂದೇ ವರ್ಷದಲ್ಲಿ ಚಿತ್ರರಂಗದ ದಿಗ್ಗಜರಾದ ರಾಜ್ ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಈ ನಾಲ್ವರಿಗೂ ಚಿತ್ರ ನಿರ್ದೇಶನ ಮಾಡಿರುವುದು ನನ್ನ ಅದೃಷ್ಟ ಯೋಗ ಎಂದು ಭಾವಿಸುತ್ತೇನೆ. ವಿಶೇಷ ಅಂದರೆ ಅಣ್ಣಾವ್ರ ಕುಟುಂಬದ ಶಿವಣ್ಣ, ರಾಘಣ್ಣ, ಪುನೀತ್, ವಿಜಯ್ರಾಘವೇಂದ್ರ, ಮುರುಳಿ, ರಾಮ್ ಕುಮಾರ್ ಹೀಗೆ ಎಲ್ಲಾ ನಟರಿಗೂ ನಾನು ಚಿತ್ರ ನಿರ್ದೇಶನ ಮಾಡಿದ್ದೇನೆ. ಅಷ್ಟೇ ಅಲ್ಲದೆ ಆ ಚಿತ್ರಗಳು ಎಲ್ಲವೂ ಹಿಟ್ ಚಿತ್ರಗಳಾಗಿವೆ.

ನಟ ದರ್ಶನ್ ನಮ್ಮ ಸಂಸ್ಥೆಯ ಕೊಡುಗೆ! ನಮ್ಮ ಸಂಸ್ಥೆಯ ಧಾರವಾಹಿಯಲ್ಲಿ ಒಂದೂವರೆ ವರ್ಷ ಕೆಲಸಮಾಡಿದ್ದಾರೆ, ನಾನುನಿರ್ದೇಶಿಸಿದ ಮಹಾಭಾರತ ಚಿತ್ರದ ಮೂಲಕ ದರ್ಶನ್ ಮೊದಲ ಭಾರಿಗೆ ಚಿತ್ರರಂಗ ಪ್ರವೇಶ ಮಾಡಿದರು ದರ್ಶನ್ ನಮ್ಮ ಸಂಸ್ಥೆಯಿಂದ ಬಂದವರು ಎಂದು ಹೇಳುವುದಕ್ಕೆ ನಮಗೆಹೆಮ್ಮೆ ಆಗುತ್ತದೆ. ಸಿಂಹಾದ್ರಿಯ ಸಿಂಹ ಚಿತ್ರದ ಹಾಡು ತಯಾರಾಗುತ್ತಿದ್ದವು ನಾನು ಹಾಗೇ ಬರೆದಿದ್ದ ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿ ಇರುವೆ ಸಾಹಿತ್ಯವನ್ನು ಸಂಗೀತ ನಿರ್ದೇಶಕರಾದ ದೇವ್ ಅವರಿಗೆ ನೀಡಿ ಟ್ಯುನ್ ಮಾಡಲು ಹೇಳಿದೆ.

ಈ ಸಾಹಿತ್ಯಕ್ಕೆ ಅವರು ಹಾಕಿದ ಟ್ಯುನ್ ಅನ್ನು ವಿಷ್ಣುವರ್ಧನ್ ಅವರಿಗೆ ಕೇಳಿಸಿದೆವು ಆಗ ಅವರು ಪರ್ವ ಚಿತ್ರದ ಶೂಟಿಂಗ್ ಸೆಟ್ ನಲ್ಲಿದ್ದರು, ಈ ಸಾಹಿತ್ಯದ ಜೊತೆಗೆ ಟ್ಯುನ್ ಕೇಳಿದೊಡನೆ ಪರ್ವ ಚಿತ್ರದ ಸೆಟ್ ನಿಂದ ನೇರವಾಗಿ ನಾವಿದ್ದ ಸ್ಟುಡಿಯೋ ಬಂದು ಹಾಡನ್ನು ಮತ್ತೊಮ್ಮೆ ಹಾಡಿಸಿ ಚಿಕ್ಕ ಮಗುವಿನಂತೆ ಕುಣಿದು ಕುಪ್ಪಳಿಸಿದರು. ನಾನು ಕಲಾವಿದನಾಗಿದ್ದಕ್ಕೆ ನನ್ನ ಬದುಕು ಸಾರ್ಥಕವಾಯಿತು ನನಗೆ ಒಂದು ಅದ್ಭುತವಾದ ಗೀತೆ ಸಿಕ್ಕಿತು ಎಂದು ನನ್ನ ಕೆನ್ನೆಗೆ ಮುತ್ತು ನೀಡಿದರು ಎಂದು ಕಲಾಸಾಮ್ರಾಟ್ ಎಸ್.ನಾರಾಯಣ್ ಅವರು ತಮ್ಮ ಚಿತ್ರರಂಗದ ವೃತ್ತಿಬದುಕಿನ ಅನುಭವ ಹಂಚಿಕೊಂಡು ದಿಗ್ಗಜರ ಜೊತೆಯ ಒಡನಾಟವನ್ನು ಮೆಲುಕು ಹಾಕಿದರು.

%d bloggers like this: