ದಶಕಗಳ ನಂತರ ಮತ್ತೆ ಕನ್ನಡದತ್ತ ಮುಖ ಮಾಡಿದ ಖ್ಯಾತ ನಟಿ

ದಶಕಗಳ ನಂತರ ಮತ್ತೆ ಕಿರುತೆರೆಗೆ ಪ್ರವೇಶ ಪಡೆದ ಸ್ಯಾಂಡಲ್ ವುಡ್ ಖ್ಯಾತ ನಟಿ, ಕನ್ನಡ ಚಿತ್ರರಂಗದಲ್ಲಿ ಇಂದು ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಅನೇಕ ನಟ-ನಟಿಯರು ಕಿರುತೆರೆ ಧಾರಾವಾಹಿಗಳ ಮೂಲಕವೇ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅಂತೆಯೇ ಬಾಲ್ಯದಿಂದಾನೇ ಕಿರುತೆರೆ ವಾಹಿನಿಗಳಲ್ಲಿ ಜಾಹೀರಾತು ಮತ್ತು ಬದುಕು, ಬೆಳ್ಳಿ ಚುಕ್ಕಿ ಮತ್ತು ಅವಳ ಮನೆ ಅಂತಹ ಧಾರಾವಾಹಿಗಳ ಮೂಲಕ ಮನೆ ಮಾತಾಗಿ ತದ ನಂತರ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಅವಕಾಶ ಪಡೆದು ಇಂದು ಜನಪ್ರಿಯ ನಟಿಯಾಗಿ ಮಿಂಚುತ್ತಿರುನ ನಟಿ ರೂಪಿಕಾ ಇದೀಗ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೌದು ನಟಿ ರೂಪಿಕಾ ಅವರು ಕಲಾ ಸಾಮ್ರಾಟ್ ಎಸ್. ನಾರಾಯಣ ಅವರ ನಿರ್ದೇಶನದ ಚೆಲುವಿನ ಚಿಲಿಪಿಲಿ ಚಿತ್ರದ ಮೂಲಕ ನಾಯಕಿ ನಟಿಯಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

ಅದಕ್ಕೂ ಮುನ್ನ ಅವರು ರೂಪಿಕಾ ಜಾಹೀರಾತು ಸೇರಿದಂತೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಪಂಕಜ್ ಮತ್ತು ರೂಪಿಕಾ ಅವರ ಚೊಚ್ಚಲ ಚೆಲುವಿನ ಚಿಲಿಪಿಲಿ ಸಿನಿಮಾ ಇಬ್ಬರಿಗೂ ಕೂಡ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿತು. ನಟಿ ರೂಪಿಕಾ ಈ ಚಿತ್ರದ ಬಳಿಕ ರುದ್ರಾಕ್ಷಿ ಪುರ, ಮಜ್ಜಿಗೆ ಹುಳಿ, ಮಂಜರಿ, 3rd ಕ್ಲಾಸ್ ಎಂಬ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಾಣದ ರೂಪಿಕಾ ಅವರಿಗೆ ಜಾಹೀರಾತು ಮತ್ತು ಇವೆಂಟ್ ಗಳು ಕೈ ಬಿಡಲಿಲ್ಲ‌. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲು ಸಿದ್ದವಾಗಿರುವ ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಚ್ಚ ಹೊಸ ಧಾರಾವಾಹಿ ದೊರೆಸಾನಿ ಎಂಬ ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಈ ದೊರೆಸಾನಿ ಧಾರಾವಾಹಿಯಲ್ಲಿ ಹೊಸ ಪ್ರತಿಭೆ ನಟ ಪೃಥ್ವಿರಾಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಜೋಡಿಯಾಗಿ ರೂಪಿಕಾ ನಟಿಸುತ್ತಿದ್ದಾರೆ. ಈ ದೊರೆಸಾನಿ ಧಾರಾವಾಹಿಯಲ್ಲಿ ನಟ ಪೃಥ್ವಿರಾಜ್ ವಿಶ್ವನಾಥನ್ ಆನಂದ್ ಎಂಬ ಯುವ ಉದ್ಯಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವನಾಥ್ ಆನಂದ್ ಆಫೀಸಿನಲ್ಲಿ ಕಥಾ ನಾಯಕಿಯ ದೀಪಿಕಾಳ ತಂದೆ ಕೆಲಸ ಮಾಡುತ್ತಿರುತ್ತಾರೆ. ಹೀಗೆ ದೀಪಿಕಾಳಿಗೆ ಉದ್ಯಮಿ ವಿಶ್ವನಾಥ್ ಆನಂದ್ ಅವರ ಮೇಲೆ ಲವ್ ಆಗುತ್ತದೆ. ಈ ವಿಶ್ವನಾಥ್ ತನ್ನ ಅಪ್ಪ ದ್ವೇಷ ಮಾಡುವ ಕಂಪನಿಯ ಮಾಲೀಕ ವಿಶ್ವನಾಥ್ ಆನಂದ್ ಇವರೇ ಎಂಬುದು ದೀಪಿಕಾಳಿಗೆ ತಿಳಿದಿರುವುದಿಲ್ಲ. ಈ ಒಂದು ರೀತಿಯ ಪ್ರೇಮಾ ಕಥಾಹಂದರ ಹೊಂದಿರುವ ದೊರೆಸಾನಿ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ ಎಂದು ತಿಳಿದು ಬಂದಿದೆ.

%d bloggers like this: