ದತ್ತು ಮಗುವನ್ನು ಪಡೆಯಲು ಮುಂದಾದ ಖ್ಯಾತ ನಟಿ

ಹಿಂದಿ ಚಿತ್ರರಂಗದ ಅವಿವಾಹಿತ ಖ್ಯಾತ ನಟಿಯೊಬ್ಬರು ಇದೀಗ ತಾಯಿಯಾಗಲು ಮನಸ್ಸು ಮಾಡಿದ್ದಾರೆ. ಆದರೆ ಮದುವೆಯನ್ನೇ ಆಗದೇ ಈ ನಟಿ ತಾಯಿಯಾಗುವ ಇಚ್ಚೆಯನ್ನ ವ್ಯಕ್ತಪಡಿಸಿರುವುದಕ್ಕೆ ಅನೇಕರು ಇವರ ಬಗ್ಗೆ ಅನಗತ್ಯ ತಪ್ಪು ಅರ್ಥ ಮಾಡಿಕೊಂಡು ವ್ಯಂಗ್ಯ ಟೀಕೆ ಮಾಡುತ್ತಿದ್ದಾರೆ. ಆದರೆ ಅಸಲಿ ಕಹಾನಿಯೇ ಬೇರೆಯದ್ದಾಗಿದೆ. ಅಷ್ಟಕ್ಕೂ ಈಗ ಈ ವಿಚಾರವಾಗಿ ಸುದ್ದಿ ಆಗಿರುವುದು ಬೇರಾರು ಅಲ್ಲ ಬಾಲಿವುಡ್ ನ ಜನಪ್ರಿಯ ನಟಿಯಾಗಿರುವ ಸ್ವರಾಭಾಸ್ಕರ್. ನಟಿ ಸ್ವರಾ ಭಾಸ್ಕರ್ ಅವರ ಬಗ್ಗೆ ಕೊಂಚ ತಿಳಿದುಕೊಳ್ಳುವುದಾದರೆ. ಸ್ವರಾ ಭಾಸ್ಕರ್ ಒಮ್ಮೆಲೆ ನಟಿಯಾಗಿ ಮಿಂಚಿದವರಲ್ಲ, ಅವರು ಮೊದಲು ಪ್ರೊಡಕ್ಷನ್ ಹೌಸ್ ಗಳಲ್ಲಿ ಕೆಲಸ ಮಾಡಿ, ತದ ನಂತರ ಸಣ್ಣ ಪುಟ್ಟ ಪೋಷಕ ಪಾತ್ರಗಳಲ್ಲಿ ನಟಿಸಿ ನಂತರ ಪ್ರಧಾನ ಪಾತ್ರಗಳಲ್ಲಿ ನಟಿಸಲು ಅವಕಾಶ ಪಡೆದು ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆಯುತ್ತಾರೆ.

ತಮ್ಮ ಪ್ರತಿಭೆಗೆ ತಕ್ಕ ಎರಡು ಪ್ರಶಸ್ತಿಯನ್ನು ಕೂಡ ಪಡೆದಿರುವ ಸ್ವರಾ ಭಾಸ್ಕರ ಮೂರು ಭಾರಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.2009 ರಲ್ಲಿ ತೆರೆಕಂಡ ಮಧೋಲಾಲ್ ಕೀಪ್ವಾ ಕಿಂಗ್ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸ್ವರಾ ಭಾಸ್ಕರ್ ಅವರಿಗೆ ಆರಂಭದಲ್ಲಿ ಅಂದುಕೊಂಡಂತೆ ಯಶಸ್ಸು ದೊರೆಯುವುದಿಲ್ಲ. ತದ ನಂತರ 2011 ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಹಾಸ್ಯ ಪ್ರಧಾನ ಕಥಾ ಹಂದರ ಹೊಂದಿದ್ದ ತನು ವೆಡ್ಸ್ ಮನು ಸಿನಿಮಾದಲ್ಲಿನ ನಟನೆಗಾಗಿ ಅಪಾರ ಪ್ರಶಂಸೆ ಗಳಿಸಿ, ಫಿಲ್ಮ್ ಫೇರ್ ಅವಾರ್ಡ್ ಪಡೆಯುವ ಮೂಲಕ ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳುವ ನಟಿ ಸ್ವರಾ ಭಾಸ್ಕರ್ ರಾಂಜನ್ ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಮತ್ತಷ್ಟು ಸಫಲರಾಗಿ ವಿಮರ್ಶಕರಿಂದ ಉತ್ತಮ ಮೆಚ್ಚುಗೆ ಪಡೆಯುತ್ತಾರೆ.

ಹೀಗೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟಿ ಸ್ವರಾ ಭಾಸ್ಕರ ಕೆಲವು ವಿವಾದಗಳಿಗೂ ತುತ್ತಾಗಿ ಟೀಕೆಗಳನ್ನ ಎದುರಿಸಿದ್ದಾರೆ. ಇದೀಗ ನಟಿ ಸ್ವರಾ ಭಾಸ್ಕರ್ ಅವರು ಸುದ್ದಿ ಆಗಿರುವುದು ತಾನು ತಾಯಿ ಆಗುವ ಮನಸ್ಸು ಮಾಡಿದ್ದೇನೆ ಎಂಬ ವಿಚಾರಕ್ಕಾಗಿ. ಹೌದು ನಟಿ ಸ್ವರಾ ‌ಭಾಸ್ಕರ್ ಅವರು ಇನ್ನು ಮದುವೆ ಆಗಿಲ್ಲ. ಬಾಲಿವುಡ್ ನ ಖ್ಯಾತ ಬರಹಗಾರ ಮತ್ತು ನಿರ್ಮಾಪಕರಾದ ಹಿಮಾಂಶು ಶರ್ಮಾ ಅವರೊಟ್ಟಿಗೆ ಡೇಟಿಂಗ್ ನಲ್ಲಿದ್ದ ನಟಿ ಸ್ವರಾ ಭಾಸ್ಕರ್ ಇದೀಗ ಅವರಿಂದ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಇದರ ನಡುವೆ ಸ್ವರಾ ಭಾಸ್ಕರ್ ತಾನೊಂದು ಮಗುವನ್ನು ದತ್ತು ಪಡೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಮಕ್ಕಳೆಂದರೆ ತುಂಬಾ ಇಷ್ಟ ಪಡುವ ಸ್ವರಾ ಭಾಸ್ಕರ್ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಗುವನ್ನ ದತ್ತು ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಟಿ ಸ್ವರಾ ಭಾಸ್ಕರ್ ಅವರು ಈಗಾಗಲೇ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಮೂಲಕ ಒಂದು ಮಗುವನ್ನು ದತ್ತು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅದೃಷ್ಟವಶಾತ್ ಭಾರತದಲ್ಲಿ ಒಂಟಿ ಮಹಿಳೆಯರು ಮಕ್ಕಳನ್ನು ದತ್ತು ಪಡೆಯುವುದಕ್ಕೆ ಅವಕಾಶವಿದೆ. ನಾನು ದತ್ತು ಮಕ್ಕಳನ್ನು, ಒಂದಷ್ಟು ದಂಪತಿಗಳನ್ನು ಭೇಟಿ ಮಾಡಿ ಅವರಿಂದ ಒಂದಷ್ಟು ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಒಂದು ಮಗುವಿನ ತಾಯಿಯಾಗಿ ಜವಾಬ್ದಾರಿ ನಿಭಾಯಿಸಲು ನಾನು ಸಿದ್ದಳಾಗಿದ್ದೇನೆ ಎಂದು ತಿಳಿಸಿದ್ದಾರೆ. ನಟಿ ಸ್ವರಾ ಭಾಸ್ಕರ್ ಅವರ ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಭಾರಿ ಪ್ರಶಂಸೆ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಯಾಗಿ ನಟಿ ಸ್ವರಾ ಭಾಸ್ಕರ್ ಕೂಡ ತನ್ನ ನಿರ್ಧಾರಕ್ಕೆ ಬೆಂಬಲ ಪ್ರೋತ್ಸಾಹ ತೋರಿದ ಎಲ್ಲರಿಗೂ ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದಾರೆ.

%d bloggers like this: