ಡಿಬಾಸ್ ಮನೆಗೆ ಬಂತು ಮತ್ತೊಂದು ದುಬಾರಿ ಬೆಲೆಯ ಐಷಾರಾಮಿ ಕಾರು

ಕೋಟಿ ಕೋಟಿ ಬೆಲೆ ಬಾಳುವ ಐಷರಾಮಿ ಕಾರುಗಳ ಒಡೆಯರಾಗಿದ್ದಾರೆ ಸ್ಯಾಂಡಲ್ ವುಡ್ ನ ಈ ಇಬ್ಬರು ಸೂಪರ್ ಸ್ಟಾರ್ ನಟರು. ಭಾರತೀಯ ಚಿತ್ರರಂಗದ ಬಹುತೇಕ ಸ್ಟಾರ್ ನಟ ನಟಿಯರು ಕಾರ್ ಕ್ರೇಜ಼್ ಹೊಂದಿದ್ದಾರೆ. ಅದರಲ್ಲಿ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಕೂಡ ಯಾವುದಕ್ಕೂ ಕಡಿಮೆ ಇಲ್ಲದಂತೆ ದುಬಾರಿ ಬೆಲೆಯ ಕಾರ್ ಗಳನ್ನು ಖರೀದಿ ಮಾಡಿದ್ದಾರೆ. ಸಿನಿಮಾ ನಟ ನಟಿಯರಿಗಿಂತ ಹೆಚ್ಚಾಗಿ ಇತ್ತೀಚೆಗೆ ಕಿರುತೆರೆ ಧಾರಾವಾಹಿ ಕಲಾವಿದರೇ ಕೋಟಿ ಮೌಲ್ಯದಷ್ಟು ಐಷಾರಾಮಿ ಕಾರ್ ಖರೀದಿ ಮಾಡುತ್ತಿದ್ದಾರೆ. ಹೀಗಿರುವಾಗ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು ಕೋಟಿ ಬೆಲೆಯ ಕಾರ್ ಖರೀದಿ ಮಾಡುವುದರಲ್ಲಿ ಅಚ್ಚರಿ ಏನೂ ಇಲ್ಲ.

ದರ್ಶನ್ ಮಾತ್ರ ಅಲ್ಲ ಕೆಜಿಎಫ್ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಕೂಡ ಕೋಟಿ ಕೋಟಿ ಮೌಲ್ಯದ ಕಾರ್ ಗಳನ್ನು ಖರೀದಿ ಮಾಡಿದ್ದಾರೆ. ನಟ ದರ್ಶನ್ ಅವರಿಗೆ ಮೊದಲಿನಿಂದಾನೇ ಕಾರ್ ಕ್ರೇಜ಼್ ಸಖತ್ತಾಗೇ ಇದೆ. ಅವರ ಬಳಿ ಜಾಗ್ವಾರ್, ರೇಂಜ್ ರೋವರ್, ಆಡಿ ಕ್ಯೂ7, ಲ್ಯಾಂಬೋರ್ಗೀನಿ ಉರುಸ್ ಅಂತಹ ಐಷಾರಾಮಿಗಳಿವೆ. ಇದೀಗ ಚಾಲೇಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಹೊಸ ಬಿಳಿ ಬಣ್ಣದ ಟಯೋಟ ವೆಲ್ ಫೈರ್ ಕಾರ್ ಖರೀದಿ ಮಾಡಿದ್ದಾರೆ. ಈ ಅಡ್ವಾನ್ಸ್ಡ್ ಐಷಾರಾಮಿ ಟಯೋಟ್ ವೆಲ್ ಫೈರ್ ಕಾರಿನ ಬೆಲೆ ಬರೋಬ್ಬರಿ ತೊಂಭತ್ತು ಲಕ್ಷ ರೂಪಾಯಿಗಳಾಗಿದ್ದು ಈ ಕಾರಿಗೆ ಹೆಚ್ಚುವರಿ ಫಿಟ್ಟಿಂಗ್ ಮೂವತ್ತು ಲಕ್ಷ ರೂಗಳನ್ನು ಖರ್ಚು ಮಾಡಿದ್ದಾರೆ ನಟ ದರ್ಶನ್. ಒಟ್ಟಾರೆಯಾಗಿ ನಟ ದರ್ಶನ್ ಅವರು ಈ ಕಾರಿಗಾಗಿ ಬರೋಬ್ಬರಿ ಒಂದು ಕೋಟಿ ಇಪ್ಪತ್ತು ಲಕ್ಷ ರೂಗಳನ್ನು ವಿನಿಯೋಗಿಸಿ ಸುದ್ದಿಯಾಗಿದ್ದಾರೆ.

ಇತ್ತ ರಾಕಿಂಗ್ ಸ್ಟಾರ್ ಯಶ್ ಕೂಡ ಹೊಸ ಪ್ರಾಪರ್ಟಿ ಮತ್ತು ದುಬಾರಿ ಕಾರ್ ಗಳನ್ನು ಕೊಂಡುಕೊಂಡಿದ್ದಾರೆ. ಇತ್ತೀಚೆಗೆ ನಟ ಯಶ್ ಅವರು ಕೂಡ ಕಪ್ಪು ಬಣ್ಣದ ಟಯೋಟ ವೆಲ್ ಫೈರ್ ಕಾರನ್ನು ತಮ್ಮ ತಾಯಿ ಪುಷ್ಪಾ ಅವರಿಗೆ ಉಡುಗೊರೆಯಾಗಿ ನೀಡಿದರು. ಇದರ ಮೌಲ್ಯ ಬರೋಬ್ಬರಿ ಒಂದು ಕೋಟಿ ಆರು ಲಕ್ಷ ರೂದ್ದಾಗಿದೆ. ಇನ್ನು ಈ ಟಯೋಟ ವೆಲ್ ಫೈರ್ ಹೈಬ್ರೀಡ್ ಕಾರಿನ ಫೀಚರ್ ಗಳನ್ನು ನೋಡುವುದಾದರೆ ಇದರಲ್ಲಿ ಏಳು ಏರ್ ಬ್ಯಾಗ್ ವ್ಯವಸ್ಥೆ ಇದ್ದು, 16.35 ಕಿಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಇಂಜಿನ್ ಆಧಾರಿತವಾಗಿದ್ದು, ನಾಲ್ಕು ಸಿಲಿಂಡರ್ ಗಳನ್ನು ಹೊಂದಿದ್ದು, 32 ಬಿಎಚ್ಪಿ 4700 ಆರ್ಪಿ ಎಮ್ ವ್ಯವಸ್ಥೆಯನ್ನು ಹೊಂದಿದೆ. 58ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

%d bloggers like this: