2020 ಇದೇ ಡಿಸೆಂಬರ್ 14ರಂದು ನಡೆಯುವ ಸೂರ್ಯಗ್ರಹಣ ಯಾವ ರಾಶಿಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯುವುದು ಆದಷ್ಟು ಒಳಿತು, ಹೌದು ಈ ವರ್ಷದ ಕೊನೆಯಲ್ಲಿ ಜರುಗುವಂತಹ ಸೂರ್ಯ ಗ್ರಹಣವಾಗಿದ್ದು ಇದು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ಗೋಚರಿಸಲಿದೆ. ಡಿಸೆಂಬರ್ 14ರ ಸಂಜೆ 7ಗಂಟೆ ಮೂರು ನಿಮಿಷಕ್ಕೆ ಆರಂಭವಾಗಿ ರಾತ್ರಿ 12.23ರ ಸಮಯಕ್ಕೆ ಮುಗಿಯಲಿದೆ ಎಂದು ಭಾರತೀಯ ಪಂಚಾಂಗದಲ್ಲಿ ತಿಳಿಸಲಾಗಿದೆ. ಇದಕ್ಕೂ ಮುಂಚೆ ನವೆಂಬರ್ 30ರಂದು ಗೋಚರಿಸಿದ್ದ ಚಂದ್ರಗ್ರಹಣ ನಂತರ ಹದಿನೈದು ಒಳಗಾಗಿ ಗೋಚರಿಸುವ ಈ ಎರಡು ಗ್ರಹಣಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.

ಆದರೆ ಈ ಎರಡು ಗ್ರಹಣ ಕಾಣುವುದು ಭಾರತದಲ್ಲಿ ಅಲ್ಲ ಆದ್ದರಿಂದ ಇವು ಭಾರತೀಯರಿಗೆ ಪ್ರಾಮುಖ್ಯ ಎನಿಸುವುದಿಲ್ಲ. ಈ ಗ್ರಹಣಗಳು ಗೋಚರಿಸುವುದು ದಕ್ಷಿಣ ಅಮೇರಿಕಾ, ದಕ್ಷಿಣ ಆಫ್ರಿಕಾದಲ್ಲಿ ಹಾಗೂ ಹಿಂದೂ ಮಹಾಸಾಗರ, ಪ್ರಶಾಂತ್ ಸಾಗರದಲ್ಲಿ ಗೋಚರಿಸುತ್ತದೆ.
ಇನ್ನು ಡಿಸೆಂಬರ್ 14ರಂದು ಗೋಚರಿಸುವ ಈ ಸೂರ್ಯ ಗ್ರಹಣ ನೇರವಾಗಿ ವೃಶ್ಚಿಕ ರಾಶಿಯವರ ಮೇಲೆ ಪ್ರಭಾವ ಬೀರುವುದರಿಂದ ಅವರು ಕೊಂಚ ಸಮಸ್ಯೆಗಳನ್ನು ಎದುರಿಸ ಬಹುದಾಗಿದೆ. ಸೂರ್ಯನು ಗ್ರಹಣ ಸಮಯದಲ್ಲಿ ದುರ್ಬಲನಾಗುವ ಕಾರಣ ವೃಶ್ಚಿಕ ರಾಶಿಯವರಿಗೆ ಕಣ್ಣಿನ ಸಮಸ್ಯೆ, ಅನಾರೋಗ್ಯ ಇತ್ಯಾದಿ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.



ಇನ್ನು ಈ ಸೂರ್ಯಗ್ರಹಣ ಪ್ರಭಾವ ಬೀರುವ ರಾಶಿಯವರು ಗ್ರಹಣ ಕಾಲದಲ್ಲಿ ನೀರನ್ನು ಕುಡಿಯಬಾರದು ಎಂದು ಆಹಾರವನ್ನು ತ್ಯಜಿಸಿರುತ್ತಾರೆ ಎಷ್ಟೋ ಮಂದಿ ಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ ಸೂರ್ಯಾರಾಧನೆ ಮಾಡುವ ಹವ್ಯಾಸ ರೂಢಿಸಿಕೊಂಡಿರುತ್ತಾರೆ. ಅದರಲ್ಲೂ ಗರ್ಭಿಣೆ ಮಹಿಳೆಯರು ಮನೆಯಿಂದ ಹೊರಬರುವುದು ಒಳಿತಲ್ಲ. ಅವರು ಮನೆಯಲ್ಲಿಯೇ ಇದ್ದು ಸಂತಾನ ಗೋಪಾಲ ಮಂತ್ರ ಪಠನೆ ಮಾಡುವುದು ಉತ್ತಮ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.