ಡಿಸೆಂಬರ್ 16ರಂದು ಬಿಡುಗಡೆ ಆಗುತ್ತಿದೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಜಗತ್ತೇ ಕಾಯುತ್ತಿರುವ ಬಹು ನಿರೀಕ್ಷಿತ ಚಿತ್ರ

ಜಗತ್ತಿನಾದ್ಯಂತ ಅಪಾರ ಪ್ರಸಿದ್ದತೆ ಗಳಿಸಿದ ಹಾಲಿವುಡ್ ನ ಅವತಾರ್ ಚಿತ್ರ ಸಾವಿರಾರು ಕೋಟಿ ಲೂಟಿ ಮಾಡಿ ಸಾರ್ವಕಾಲಿಕ ದಾಖಲೆ ಮಾಡಿದೆ. ಈ ಚಿತ್ರ ವರ್ಲ್ಡ್ ವೈಡ್ ಅಪಾರ ಜನಪ್ರಿಯತೆ ಗಳಿಸಿತ್ತು. ಇದೀಗ ಅವತಾರ್ ಚಿತ್ರದ ಮುಂದುವರಿದ ಸರಣಿಯಾಗಿ ಅವತಾರ್2 ಚಿತ್ರ ಇದೀಗ ಇದೇ ವರ್ಷ ಡಿಸೆಂಬರ್ 16ರಂದು ಪ್ರಪಂಚಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ಅವತಾರ್2 ಚಿತ್ರಕ್ಕೆ ಅವತಾರ್ ದಿ ವೇ ಆಫ್ ವಾಟರ್ ಎಂದು ಟೈಟಲ್ ಇಡಲಾಗಿದೆ. ವಿಶೇಷ ಅಂದರೆ ಈ ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ಬರೋಬ್ಬರಿ ನೂರ ಅರವತ್ತು ಭಾಷೆಗಳಲ್ಲಿ ತೆರೆ ಕಾಣಲಿದೆಯಂತೆ. ಈ ಅವತಾರ್ ಚಿತ್ರದ ಮೊದಲ ಭಾಗ ಬಿಡುಗಡೆ ಆಗಿದ್ದು 2009ರಲ್ಲಿ. ಈ ಚಿತ್ರದ ಮುಂದುವರಿದ ಸರಣಿ ಇದೀಗ ತೆರೆಗೆ ಬರುತ್ತಿದೆ. ಈ ಅವತಾರ್ ಚಿತ್ರ ಒಟ್ಟಾರೆಯಾಗಿ ಐದು ಭಾಗಗಳಲ್ಲಿ ಚಿತ್ರ ತಯಾರಾಗಿದೆಯಂತೆ. ಈ ಅವತಾರ್2 ಚಿತ್ರ ತಯಾರಾಗಲು ಬರೋಬ್ಬರಿ ಹತ್ತು ವರ್ಷಗಳ ಕಾಲ ಧೀರ್ಘ ಸಮಯತೆಗೆದುಕೊಂಡಿದ್ದಾರೆ.

ಜೇಮ್ಸ್ ಕ್ಯಾಮರೂನ್ ಅವರ ಸಾರಥ್ಯದಲ್ಲಿ ತಯಾರಾದ ಈ ಕಾಲ್ಪನಿಕ ವೈಜ್ಞಾನಿಕ ಮಹಾಕಾವ್ಯ ಅವತಾರ್ ಚಿತ್ರವನ್ನ 20ನೇ ಸೆಂಚುರಿ ಸ್ಟೂಡಿಯೋಸ್ ನಿರ್ಮಾಣ ಸಂಸ್ಥೆಯಡಿ ಕ್ಯಾಮರೂನ್ ಜಾನ್ ಲ್ಯಾಂಡೌ ಬಂಡವಾಳ ಹೂಡಿದ್ದಾರೆ. ಈ ಅವತಾರ್2 ಸಿನಿಮಾದಲ್ಲಿ ಸ್ಯಾಮ್ ವರ್ಥಿಂಗ್ಟನ್, ಜೊಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್, ಜಿಯೋವನ್ನೀ ರಿಬಿಸಿ, ಜೋಯಲ್ ಡೇವೀಡ್ ಮೂರ್, ದಿಲೀಪ್ ರಾವ್, ಮ್ಯಾಟ್ ಜೆರಾಲ್ಡ್ ಹೀಗೆ ಬಹುದ್ದೊಡ್ಡ ತಾರಾ ಬಳಗವಿದೆ. ಒಟ್ಟಾರೆಯಾಗಿ ಜಗತ್ತಿನಾದ್ಯಂತ ಅಪಾರ ಪ್ರಸಿದ್ದತೆ ಗಳಿಸಿದ ಅವತಾರ್ ಚಿತ್ರದ ಮುಂದುವರಿದ ಸರಣಿ ಅವತಾರ್2 ದಿ ವೇ ಆಫ್ ವಾಟರ್ ಸಿನಿಮಾ ಇದೇ ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್ 16ರಂದು ಸರಿ ಸುಮಾರು ಪ್ರಪಂಚದ 160 ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ. ಈ ಕಾಲ್ಪನಿಕ ವೈಜ್ಞಾನಿಕ ಮಹಾಕಾವ್ಯವನ್ನ ಕಣ್ತುಂಬಿಕೊಳ್ಳಲು ಇಡೀ ವಿಶ್ವದ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

%d bloggers like this: