ಮುಂದಿನ ಹತ್ತುದಿನಗಳಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕೊರೋನ ವೈರಸ್ ಹರಡುವಿಕೆ ಕೊಂಚ ಇಳಿದಿದ್ದರೂ ಕೂಡ ಕೆಲವೊಂದು ರಾಜ್ಯಗಳಲ್ಲಿ ಕೊರೋನ ವೈರಸ್ ಹಾವಳಿ ಇನ್ನೂ ನಿಂತಿಲ್ಲ. ದಿನ ಕಳೆದಂತೆ ಕೊರೋನ ಪ್ರಕರಣಗಳ ಅಂಕಿ ಅಂಶಗಳು ಭಾರಿ ಪ್ರಮಾಣದಲ್ಲಿ ಏರಿಳಿಕೆಯಾಗಿ ಕಾಣಿಸಿಕೊಂಡಿವೆ. ಅದರಲ್ಲೂ ಮಹರಾಷ್ಟ್ರದ ಮುಂಬೈನಗರದಲ್ಲಿ ಸೋಂಕಿತರ ಸಂಖ್ಯೆ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗಾಗಿ ಮಾಡಿದೆ. ಕಳೆದೊಂದು ವಾರದಲ್ಲಿ ಮಹರಾಷ್ಟ್ರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಾಗಿತ್ತು ಆದರೆ ಈ ವಾರದಲ್ಲಿ ಇದ್ದಕಿದ್ದಂತೆ ಸೋಂಕಿತರ ಸಂಖ್ಯೆ ಎರಡರಷ್ಟು ಏರಿಕೆಯಾಗಿದೆ. ಇದುವರೆಗೂ ಮಹರಾಷ್ಟ್ರದಲ್ಲಿ 17.5 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ವಿಚಾರವಾಗಿ ಮಹರಾಷ್ಟ್ರದ ಮಾಧ್ಯಮಗಳಲ್ಲಿ ಮತ್ತೆ ಲಾಕ್ಡೌನ್ ಎಂಬ ಸುದ್ದಿ ಬಿತ್ತರ ಆಗುತ್ತಿದ್ದಂತೆ ಈ ವಿಚಾರವಾಗಿ ಮಾತನಾಡಿದ ಮಹರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರು ಲಾಕ್ಡೌನ್ ಮಾಡಬೇಕು ಬೇಡವೋ ಎಂಬುದನ್ನು ಪರಿಸ್ಥಿತಿಯನ್ಞು ಸಂಪೂರ್ಣವಾಗಿ ಅವಲೋಕನ ಮಾಡಿ ತಜ್ಞರ ಸಲಹೆ ಮೇರೆಗೆ ಇನ್ನು ಹತ್ತು ಹದಿನೈದು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು, ಆದರೆ ಸದ್ಯಕ್ಕೆ ಲಾಕ್ಡೌನ್ ಮಾಡುವ ಯೋಚನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.