ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರ ಭವಿಷ್ಯ ಹೇಗಿರುತ್ತೆ ಗೊತ್ತೇ

ಈ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ನಿಜಕ್ಕೂ ಕೂಡ ಮಹಾಮೇದಸ್ಸು ಹೊಂದಿದವರಾಗಿರುತ್ತಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಗಳಾತ್ತಾರೆ. ಈ ವ್ಯಕ್ತಿಗಳು ಅತ್ಯಂತ ಧೈರ್ಯ ಶಾಲಿಯಾಗಿದ್ದು ಎಂತಹ ಕಠಿಣ ಸಂಧರ್ಭದಲ್ಲೂ, ಅಪಾಯದ ಸ್ಥಿತಿಯಲ್ಲಿಯೂ ಸಹ ಎದೆಗುಂದದೇ ಅದನ್ನು ಎದುರಿಸಿ ಸಂಕಷ್ಠಗಳನ್ನು ಮೆಟ್ಟಿ ನಿಲ್ಲುತ್ತಾರೆ. ಇವರು ಎಲ್ಲರಂತೆ ಸಾಮಾನ್ಯ ವ್ಯಕ್ತಿಯಾಗಿ ಜೀವಸಿದರೂ ಅದು ಯಾವುದೋ ಒಂದು ಶಕ್ತಿ ಇವರನ್ನು ತನ್ನತ್ತ ಸೆಳೆದುಕೊಂಡು ಜೀವನದಲ್ಲಿ ಪ್ರಕಾಶಮಾನವಾಗಿ ಹೊರಹೊಮ್ಮುವಂತೆ ಮಾಡುತ್ತದೆ.

ಇವರಲ್ಲಿರುವ ಅಪರಿಮಿತ ಶಕ್ತಿಯಿಂದಾಗಿ ಅತ್ಯಂತ ಖ್ಯಾತಿ ಪಡೆಯುವರಾಗಿರುತ್ತಾರೆ. ಇವರ ಜೀವನದಲ್ಲಿ ಮಹತ್ತರವಾದ ಕನಸುಗಳನ್ನು ಹೊತ್ತು ಅದರ ಅನುಗುಣವಾಗಿ ತಮ್ಮ ನಡವಳಿಕೆ, ಮಾತು, ಕ್ರಮಬದ್ಧವಾದ ಯೋಜನೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಇನ್ನು ಇವರು ತಮ್ಮ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಾರೆ. ಸಮಾಜದಲ್ಲಿ ತನ್ನ ತಂದೆ, ತಾಯಿ, ಕುಟುಂಬದ ಹಿರಿಯರಿಗೆ ಗೌರವ ಸಿಗಬೇಕು ಎಂದು ಬಯಸುತ್ತಾರೆ.

ಆದರೆ ದುರದೃಷ್ಟವಶಾತ್ ಇವರು ಪ್ರೀತಿಸಿದ ಕುಟುಂಬವೇ ಇವರನ್ನು ದ್ವೇಷಿಸುವ ಮಟ್ಟಕ್ಕೆ ಸಂದರ್ಭ ಸೃಷ್ಟಿಯಾಗುತ್ತದೆ. ಇವರಿಂದ ಸಹಾಯ ಪಡೆದವರೆಲ್ಲ ಅದನ್ನು ಮರೆತು ಇವರಿಗೆ ದ್ರೋಹ ಮಾಡುವಂತಹ ಸ್ಥಿತಿಗೆ ತಲುಪುತ್ತಾರೆ. ಕಷ್ಟ ಎಂದರೆ ಕರಗುವ ಇವರಿಗೆ ಇವರ ಸಂಕಷ್ಟ ಕಾಲದಲ್ಲಿ ಯಾರು ನಿಲ್ಲುವುದಿಲ್ಲ. ಕೆಲವೊಮ್ಮೆ ಇವರು ಇಂತಹ ಕೆಟ್ಟ ಅನುಭವಕ್ಕೆ ಒಳಗಾಗಿ ಜೀವನದಲ್ಲಿ ನಿರುತ್ಸಾಹ ಜೀವನವೇ ಬೇಡ ಎಂದು ಜಿಗುಪ್ಸೆಯ ಮಟ್ಟಕ್ಕೆ ತಲುಪುತ್ತಾರೆ.

ದುರಭ್ಯಾಸಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ತಾವು ಮಾಡಿದ ಸಹಾಯವನ್ನು ನೆನೆಯದೆ ಮಾಡಿದ ಉಪಕಾರಕ್ಕೆ ಅಪಕಾರ ಮಾಡುವ ಜನರನ್ನು ನೋಡಿ ಯಾರಿಗೂ ಸಹಾಯ ಮಾಡಬಾರದು, ಅನುಕಂಪ ತೋರಿಸಬಾರದು ಎಂಬ ನಿರ್ಧಾರಕ್ಕೆ ಬಂದು ನಿಕೃಷ್ಠ ವ್ಯಕ್ತಿಯಾಗಿ ಬದಲಾಗುತ್ತಾರೆ. ಕೆಲವು ವಿಚಾರದಲ್ಲಿ ಇವರು ನತದೃಷ್ಟವಂತರು, ಇವರಿಗೆ ತಂದೆಯ ಪ್ರೀತಿ ಚಿಗುರುವುದರಲ್ಲೇ ಅವರನ್ನು ಕಳೆದುಕೊಳ್ಳುತ್ತಾರೆ, ಇವರು ದಿಟ್ಟ ದಕ್ಷತೆಯ ತಂದೆಯ ನೆರಳು ಇವರನ್ನು ಕಾಯುವುದಿಲ್ಲ.

ಅಂದರೆ ತಂದೆಯನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇವರು ನಿತ್ಯ ಬ್ರಹ್ಮಚಾರಿಯಾಗಿದ್ದು ವಯಸ್ಸಿನ ಇತಿಮಿತಿ ನೋಡದೆ ಪ್ರೀತಿಯನ್ನು ಬಯಸುತ್ತಾರೆ. 60 ವರ್ಷಗಳು ತುಂಬಿದರು ಸಹ ತುಂಟತನ, ಕುಚೇಷ್ಟೆಯ ವ್ಯಕ್ತಿತ್ವ ಬದಲಾಗುವುದಿಲ್ಲ. ಯಾವುದೇ ಕೆಲಸದಲ್ಲಿ ಇವರಿಗೆ ತೃಪ್ತಿ ಕಾಣುವುದಿಲ್ಲ ಏನೋ ಅತೃಪ್ತಿ ಗೊಂದಲ ಇವರನ್ನು ಬಾಧಿಸುತ್ತದೆ. ಇವರು ಒಂದು ರೀತಿಯಾಗಿ ತಿಪ್ಪೆಯಲ್ಲಿ ಬಿದ್ದಿರುವ ವಜ್ರದಂತೆ ಒಬ್ಬರು ಯಾರಾದರೂ ಮಹಾಗುರು ಅದನ್ನು ಗಮನಿಸಿ ಹೊರತಂದು ಪರಿಚಯಿಸಿದರೆ ಇವರ ಜೀವನ ಉಜ್ವಲವಾಗಿ ಪ್ರಜ್ವಲಿಸುತ್ತದೆ.

%d bloggers like this: