ಆರೋಗ್ಯ ಉತ್ತಮವಾಗಿ ವೃದ್ದಿಯಾಗಲು ನಮ್ಮ ದೇಹದಲ್ಲಿ ಬಿಳಿ ರಕ್ತಕಣಗಳು ಅವಶ್ಯಕವಾಗಿ ಹೆಚ್ಚಾಗಿರಬೇಕು, ಈ ಬಿಳಿ ರಕ್ತಕಣಗಳು ದೇಹದಲ್ಲಿ ಉತ್ಪತ್ತಿಯಾಗಬೇಕಾದರೆ ನಾವು ಸೇವಿಸುವ ಆಹಾರದಲ್ಲಿ ಪೌಷ್ಠಿಕಾಂಶ, ವಿಟಮಿನ್ ಅಂಶಗಳು,ಪ್ರೋಟೀನ್ ಅಂಶಗಳು ಹೆಚ್ಚಾಗಿರಬೇಕು. ಈ ಬಿಳಿ ರಕ್ತಕಣಗಳು ಮನುಷ್ಯನ ಆರೋಗ್ಯ ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಈ ಬಿಳಿರಕ್ತಕಣಗಳು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ, ಆದರೆ ನಾವು ಸೇವಿಸುತ್ತಿರುವ ಯಾವ ಆಹಾರ ಪಧಾರ್ಥದಲ್ಲಿ ಪ್ರೋಟೀನ್ ಅಂಶಗಳು ಇರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶಗಳು ಹೆಚ್ಚಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಹಾಗೇ ಬೆಳ್ಳುಳ್ಳಿಯಲ್ಲಿಯೂ ಸಹ ಅಪಾರ ಪ್ರಮಾಣದ ಪ್ರೋಟೀನ್ ವಿಟಮಿನ್ ಎ, ಬಿಅಂಶಗಳು ಹೆಚ್ಚಾಗಿದ್ದು, ಅಸಿಡಿಟಿ ಮತ್ತು ಗ್ಯಾಸ್ಟಿಕ್ ತೊಂದರೆಗಳಿಂದ ಮುಕ್ತಿ ಗೊಳಿಸುತ್ತದೆ. ಇನ್ನು ಬಸಳೆಸೊಪ್ಪುಸಹ ಅತ್ಯಧಿಕ ಪ್ರೋಟೀನ್ ಒಳಗೊಂಡಿದ್ದು, ಪ್ರತಿದಿನ ಈ ಸೊಪ್ಪನ್ನು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಈ ಸಿಹಿಗೆಣಸಿನಲ್ಲಿಯೂ ಸಹ ರೋಗ ನಿರೋಧಕಶಕ್ತಿ ಹೆಚ್ಚಾಗಿದ್ದು, ಇದರಲ್ಲಿ ವಿಟಮಿನ್ಎ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹಕ್ಕೆ ಉತ್ತಮ ಪೌಷ್ಟಿಕಾಂಶ ಮತ್ತು ನಾರಿನ ಅಂಶಗಳನ್ನು ಒದಗಿಸಿ ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಸಹಾಯ ಮಾಡುತ್ತದೆ.

ಇನ್ನು ಹಣಬೆಯಲ್ಲಿಯೂ ಸಹ ಹೆಚ್ಚು ಪ್ರೋಟೀನ್ ಯುಕ್ತ ಆಹಾರವಾಗಿದ್ದು, ಇದರಲ್ಲಿ ವಿಟಮಿನ್, ಮಿನರಲ್, ಅಮಿನೊ, ಆಂಟಿ ಆಸಿಡ್, ಆಂಟಿ ಬಯೋಟಿಕ್, ಆಂಟಿ ಆಕ್ಸಿಡೆಂಟ್ ಗಳಂತಹ ಅಂಶಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಇದು ಕೂಡ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚು ಹೊಂದಿರುತ್ತದೆ. ಗೆಡ್ಡೆಕೋಸು ತಿನ್ನುವುದರಿಂದ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇನ್ನು ಕಿವಿ ಹಣ್ಣು, ಜವೆಗೋದಿಯಲ್ಲಿಯೂ ಸಹ ಹೆಚ್ಚು ಪೋಷಕಾಂಶ ಒಳಗೊಂಡಿದ್ದು ರೋಗನಿರೋಧಕ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇನ್ನು ಬಾದಾಮಿಯಲ್ಲಿ ಶೇಕಡ 50ರಷ್ಟು ವಿಟಮಿನ್ ಅಂಶಗಳು ಹೇರಳವಾಗಿದ್ದು, ಇದು ನೀವು ಖಿನ್ನತೆಯಿಂದ ಬಳಲುತ್ತಿದ್ದರೆ ಅಂತಹ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ರೋಗನಿರೋಧಕ ಶಕ್ತಿಗಳು ಕೂಡ ಹೆಚ್ಚಾಗಿರುತ್ತದೆ. ಮೊಸರಿನಲ್ಲಿ ಕೂಡ ವಿಟಮಿನ್ ಡಿ ಹೆಚ್ಚಾಗಿದ್ದು, ಇದನ್ನು ಪ್ರತಿದಿನ ಸೇವಿಸುವುದರಿಂದ ಶೀತ, ಕೆಮ್ಮು, ನೆಗಡಿ ಅಂತಹ ಸಮಸ್ಯೆಗಳಿಂದ ದೂರವಿರಬಹುದು. ಮೊಸರು ಶೇಕಡ 70ರಷ್ಟು ರೋಗನಿರೋಧಕ ಶಕ್ತಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ನಮ್ಮ ಜೀರ್ಣಾಂಗ ವ್ಯವಸ್ಥೆ ಯಲ್ಲಿ ಸರಾಗವಾಗಿ ಜೀರ್ಣಕ್ರಿಯೆ ನಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ಇಂತಹ ಪದಾರ್ಥಗಳ ಸೇವನೆ ಮಾಡಬೇಕಾಗಿರುತ್ತದೆ ಇದರಿಂದ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾಗಿ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.