ದೇಹದ ಬೊಜ್ಜಿಗೆ ಬಹಳ ಪರಿಣಾಮಕಾರಿ ಇದು, ನಿಧಾನವಾಗಿ ಬೊಜ್ಜು ಇಳಿಯುತ್ತದೆ

ನಮಗೆ ಆರೋಗ್ಯದ ಜೊತೆಗೆ ನಮ್ಮ ಬಾಹ್ಯ ಸೌಂದರ್ಯವು ಅಷ್ಟೆ ಪ್ರಾಮುಖ್ಯ ಪಡೆಯುತ್ತದೆ, ಆದರೆ ಸೌಂದರ್ಯ ಕೆಲವರು ಹುಟ್ಟಿನಿಂದಲೇ ರೂಪಲಾವಣ್ಯ ಹೊಂದಿರುತ್ತಾರೆ. ಆದರೆ ಇನ್ನೊಂದಷ್ಟು ಜನರು ಚಿಕ್ಕ ವಯಸ್ಸಿನಿಂದ ಸುಂದರವಾಗಿದ್ದು, ಯೌವ್ವನದ ವಯಸ್ಸು ಮುಗಿಯುವ ಹೊತ್ತಿಗೆ ಅವರ ಶರೀರದ ರಚನೆಯೇ ಬದಲಾಗುತ್ತದೆ. ಮುಖಸುಕ್ಕಾಗಿ ಕೂದಲು ಉದುರುವ ಸಮಸ್ಯೆ ಸೊಂಟ ಭಾಗದಲ್ಲಿ ಬೊಜ್ಜು ತೂಕದಲ್ಲಿ ಹೆಚ್ಚಳ ಹೀಗೆ ವಿವಿಧ ರೀತಿಯಲ್ಲಿ ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಾರೆ. ಇನ್ನು ಮದುವೆಯಾದ ಒಂದೆರಡು ವರ್ಷಗಳಲ್ಲಿ ದೇಹ ಸೌಂದರ್ಯ ಕಳೆದುಕೊಳ್ಳುವ ಮಹಿಳೆಯರು ಗರ್ಭಿಣಿಯ ಸಮಯದಲ್ಲಿ ಮತ್ತು ಮಗುವಾದ ನಂತರ ಹಲವಾರು ಮಾನಸಿಕ, ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಲವಾರು ಮಹಿಳೆಯರು ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಯೋಗ, ವ್ಯಾಯಾಮ ಮೊರೆ ಹೋಗುತ್ತಾರೆ.

ಇನ್ನು ಕೆಲವರು ಮಾರುಕಟ್ಟೆಗಳಲ್ಲಿ ಸಿಗುವ ಔಷಧಿಗಳನ್ನು ತೆಗೆದುಕೊಂಡರು ಯಾವುದೇ ರೀತಿಯ ಪ್ರಯೋಜನ ಆಗಿರುವುದಿಲ್ಲ, ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಮನೆಯಲ್ಲಿಯೇ ಸುಲಭ ಸರಳವಾದ ಮನೆಮದ್ದಿನ ಮೂಲಕ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಹಾಗಾದರೆ ಯಾವುದು ಆ ಸರಳ ಪರಿಹಾರ ಅಂದರೆ ಅಜ್ವಾನ, ಜೀರಿಗೆ ಹಾಗೂ ಸೋಂಪುಕಾಳು ರಾಮಭಾಣವಾಗಿ ಕೆಲಸ ಮಾಡುತ್ತದೆ. ಹೌದು ಈ ಮೂರು ಪಧಾರ್ಥಗಳು ಸಾಮಾನ್ಯವಾಗಿ ಮನೆಯಲ್ಲಿಯೇ ಬಳಸುತ್ತೇವೆ. ತೂಕ ಕಡಿಮೆ ಮಾಡಲು ಬೊಜ್ಜು, ಕೊಬ್ಬನ್ನು ಕರಗಿಸುವುದಕ್ಕೆ ಉಪಯುಕ್ತ ಪರಿಹಾರವಾಗಿದೆ. ಇದನ್ನು ಬಳಸುವ ಪ್ರಕ್ರಿಯೆ ಹೇಗೆಂದರೆ ಎರಡು ಚಮಚದಷ್ಟು ಅಜ್ವಾನಾ ವನ್ನು ಒಂದು ಚಮಚ ಜೀರಿಗೆ ಮತ್ತು ಸೋಂಪುಕಾಳನ್ನು ಒಂದು ಬಾಣಲಿಯಲ್ಲಿ ಕೊಂಚ ಉರಿದುಕೊಳ್ಳಬೇಕು.

ಈ ಉರಿದುಕೊಂಡ ಅಜ್ವಾನಾ, ಜೀರಿಗೆ, ಸೋಂಪು ಕಾಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಉಗುರು ಬೆಚ್ಚಗಿನ ಒಂದು ಲೋಟದ ನೀರಿಗೆ ಈ ಅಜ್ವಾನ, ಜೀರಿಗೆ ಸೋಂಪುಕಾಳಿನ ಮಿಶ್ರಣದ ಪುಡಿಯನ್ನು ನೀರಲ್ಲಿ ಹಾಕಿ ಪ್ರತಿನಿತ್ಯ ಕುಡಿಯಬೇಕು. ಈ ರೀತಿಯಾಗಿ ಕನಿಷ್ಟ ಮೂರು ತಿಂಗಳು ಮಾಡಿದರೆ ನಿಮ್ಮ ಶರೀರದಲ್ಲಿರುವ ಬೊಜ್ಜು, ಕೊಬ್ಬಿನ ಅಂಶಗಳು ದೇಹದಲ್ಲಿ ಕರಗಿ ಸಧೃಢಕಾಯ ನಿಮ್ಮದಾಗುತ್ತದೆ.

ಈ ಅಜ್ವಾನ, ಜೀರಿಗೆಯು ನೀವು ಸೇವಿಸಿದ ಆಹಾರವನ್ನು ವೇಗವಾಗಿ ಜೀರ್ಣಿಸುವಂತಹ ಪಧಾರ್ಥವಾಗಿದ್ದು ಇದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಈ ಮಿಶ್ರಣದ ಜ್ಯುಸ್ ಅನ್ನು ರಾತ್ರಿ ಊಟವಾದ ಬಳಿಕ ಸೇವಿಸಬೇಕು. ನೀವು ಮಲಗುವ ಅರ್ಧ ಗಂಟೆಯ ಮುಂಚೆ ಈ ಜ್ಯುಸ್ ಅನ್ನು ಕುಡಿಯುವುದು ಪರಿಣಾಮಕಾರಿ ಕೆಲಸ ಮಾಡುತ್ತದೆ. ಇದು ನೈಸರ್ಗಿಕವಾದ ಪಧಾರ್ಥಗಳಾಗಿರುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯಾದ ಅಡ್ಡ ಪರಿಣಾಮ ಬೀರುವುದಿಲ್ಲ.

ಇನ್ನು ಅಜ್ವಾನ ಜೀರಿಗೆ ಜ್ಯುಸ್ ಅನ್ನು ಮಕ್ಕಳು ಸೇವಿಸಬಾರದು, 13 ವರ್ಷ ಮೇಲ್ಪಟ್ಟವರು ಮಾತ್ರ ಸೇವಿಸಬಹುದಾಗಿರುತ್ತದೆ. ಈ ಪಧಾರ್ಥಗಳು ನಿಮಗೆ ನಿಶಕ್ತಿಯನ್ನು ಹೋಗಲಾಡಿಸುತ್ತದೆ. ಸದಾ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಈ ಜ್ಯುಸ್ ಅನ್ನು ಒಂದೇ ಸಲ ಏಕಾಏಕಿ ಕುಡಿಯಬಾರದು ನಿಮ್ಮ ದೇಹದಲ್ಲಿರುವ ಲಾಲರಸವು ಹೋಗುವಂತೆ ನಿಧಾನವಾಗಿ ಕುಡಿಯ ಬೇಕಾಗುತ್ತದೆ. ನೀವು ಸಕ್ಕರೆಯುಕ್ತ ಆಹಾರ ಮತ್ತು ಬೇಕರಿಯ ತಿನಿಸುಗಳನ್ನು ತಿನ್ನುವುದರಿಂದ ನಿಮಗೆ ಕೊಬ್ಬಿನಂತಹ ಸಮಸ್ಯೆಗಳು ಕಾಡುತ್ತವೆ, ಇಂತಹ ಸಮಸ್ಯಗಳ ಪರಿಹಾರಕ್ಕಾಗಿ ಈ ಅಜ್ವಾನ ರಸವು ಉತ್ತಮ ರಾಮಭಾಣವಾಗಿದೆ ಎಂದು ಆಯುರ್ವೇದ ಹಿರಿಯ ಪಂಡಿತರು ಸಲಹೆ ನೀಡುತ್ತಾರೆ.

%d bloggers like this: