ದೇಹದ ಹೆಚ್ಚಿನ ಉಷ್ಣಾಂಶಕ್ಕೆ ಇದು ಪರಿಣಾಮಕಾರಿಯಾದ ಮನೆಮದ್ದು

ನಿಮ್ಮ ದೇಹದ ಉಷ್ಣತೆ ಹೆಚ್ಚಾಗಲು ಮುಖ್ಯಕಾರಣ ನೀವು ಸೇವಿಸುವಂತಹ ಆಹಾರ ಪಧಾರ್ಥವಾಗಿದೆ, ಶರೀರದಲ್ಲಿ ಉಷ್ಣಾಂಶ ಹೆಚ್ಚಾದರೆ ದೇಹದಲ್ಲಿ ಹಲವಾರು ರೀತಿಯಾಗಿ ತೊಂದರೆ ಸಮಸ್ಯೆಗಳು ಕಾಡುತ್ತದೆ. ಬೇಸಿಗೆ ಮತ್ತು ಬಿಸಿಲಿನಿಂದಾಗಿ ಉಷ್ಣಾಂಶ ಹೆಚ್ಚಾಗುತ್ತದೆ ದೇಹ ಸದಾ ತಂಪಾಗಿರಲು ಹೆಚ್ಚು ನೀರನ್ನು ಕುಡಿಯಬೇಕು ಹಾಗೂ ಮಸಾಲೆ ಪದಾರ್ಥ ಖಾರಯುಕ್ತ ಪದಾರ್ಥಗಳನ್ನು ಸೇವನೆ ಮಾಡಬಾರದು. ಇದರಿಂದದೇಹದಲ್ಲಿ ಉಷ್ಣಾಂಶ ಹೆಚ್ಚಾಗಲು ಇದು ಕೂಡ ಪ್ರಮುಖ ಕಾರಣವಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಕನಿಷ್ಟ 2ಲೀಟರ್ ಕ್ಕಿಂತ ಹೆಚ್ಚು ನೀರನ್ನು ಕುಡಿಯಬೇಕು ಮನೆ ಅಥವಾ ಕಚೇರಿಗಳಲ್ಲಿ ನಿರಂತರವಾಗಿ ಒಂದೇ ಕಡೆಯ ಜಾಗದಲ್ಲಿ ಕೂರುವ ಕಾರಣ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ.

ದೇಹದಲ್ಲಿ ಉಷ್ಣಾಂಶ ಹೆಚ್ಚಾದಂತೆ ಉರಿಮೂತ್ರ ಸಮಸ್ಯೆಗಳು ಹೊಟ್ಟೆನೋವು, ಕಣ್ಣಿನ ಸುತ್ತ ಕಪ್ಪಾಗುವಂತಹ ಸಮಸ್ಯೆಗಳು ಕಾಡುತ್ತವೆ. ಇಂತಹ ಸಮಸ್ಯೆಗಳ ಪರಿಹಾರವಾಗಿ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಒಂದು ಲೋಟದಲ್ಲಿ ನೀರನ್ನು ಹಾಕಿ 1ಚಮಚ ಜೀರಿಗೆ, ಮತ್ತು ಕೆಂಪು ಕಲ್ಲುಸಕ್ಕರೆ ಸೇರಿಸಿ ಜೀರಿಗೆ ಕಲ್ಲುಸಕ್ಕರೆ ನೀರನ್ನು ಪ್ರತಿದಿನ ರಾತ್ರಿ ನೆನೆಸಿಡಬೇಕು. ಈ ಕಲ್ಲು ಸಕ್ಕರೆ ದೇಹದಲ್ಲಿನ ಉಷ್ಣಾಂಶವನ್ನು ಬೇಗ ಕಡಿಮೆ ಮಾಡುತ್ತದೆ. ನಂತರ ಮಾರನೇ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದೇ ರೀತಿ ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡಲು ಸಬ್ಜಾಬೀಜವನ್ನು ಒಂದು ಲೋಟದ ನೀರಿನಲ್ಲಿ ಹಾಕಿ ರಾತ್ರಿಯಿಡಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ.

ಕಣ್ಣನ್ನು ತಂಪಾಗಿಸುತ್ತದೆ ಮತ್ತು ಒಂದು ಲೋಟದ ನೀರಿಗೆ ಕಲ್ಲು ಸಕ್ಕರೆ ಜೇನುತಪ್ಪ ಸೇರಿಸಿ ಕುಡಿದರೆ ನಿಮ್ಮ ದೇಹ ತಂಪಾಗುತ್ತದೆ, ಈ ರೀತಿ ದಿನದಲ್ಲಿ ಮೂರು ಬಾರಿ ಈ ಪಾನೀಯವನ್ನು ಕುಡಿದರೆ ಮಹಿಳೆಯರಿಗೆ ಉತ್ತಮವಾದ ಫಲಿತಾಂಶ ನೀಡುತ್ತದೆ ಮತ್ತು ಮೆಂತೆ ಕಾಳುಗಳನ್ನು ತಿನ್ನುವುದರಿಂದ ದೇಹದಲ್ಲಿನ ಚಯಾಪಚಯ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಸಕ್ಕರೆ ಸಮಸ್ಯೆಗಳಿಗೆ ಈ ಮೆಂತ್ಯೆಕಾಳಿನ ಪಾನೀಯ ಉತ್ತಮವಾದ ಪರಿಹಾರದ ಜೊತೆಗೆ ಇದು ಬಿಪಿ ಅಂತಹ ಸಮಸ್ಯೆಗಳಿಗೆ ಮೆಂತ್ಯೆಕಾಳನ್ನು ನೆನೆಸಿಟ್ಟ ನೀರು ಸೇವಿಸುವುದರಿಂದ ದೈಹಿಕ ಚರ್ಮದ ಕಾರಾಲೆ ಹಾಗೂ ಬಿ.ಪಿ.ಕಾಯಿಲೆಗಳಿಗೆ ಈ ಮೆಂತ್ಯೆಕಾಳಿನ ಪಾನೀಯ ರಾಮಬಾಣವಾಗಿದೆ.

%d bloggers like this: