ದೇಹದ ಕೊಬ್ಬನ್ನು ನಿಧಾನವಾಗಿ ಕರಗಿಸೋಕೆ ಈ ಹಣ್ಣು ತುಂಬಾ ಪರಿಣಾಮಕಾರಿ

ಆರೋಗ್ಯವೇ ಭಾಗ್ಯ. ಆದರೆ ಇಂದಿನ ಆಧುನಿಕ ಜೀವನ ಶೈಲಿ ಬದುಕು ಯಾವ ವ್ಯಕ್ತಿಯನ್ನ ಕೂಡ ಆರೋಗ್ಯವಂತ ವ್ಯಕ್ತಿಯಾಗಿ ಇಟ್ಟಿಲ ಅಂತೇಳಬಹುದು. ಅದಕ್ಕಿಂತ ಹೆಚ್ಚಾಗಿ ಆರೋಗ್ಯವಾಗಿ ಜೀವಿಸುವಂತಹ ಪೂರಕ ವಾತಾವರಣ ಕೂಡ ನಮ್ಮ ಸುತ್ತಮುತ್ತಲಿಲ್ಲ. ಇಂದಿನ ಆಹಾರ ಮತ್ತು ಜೀವನ ಕ್ರಮ ಯಾವುದನ್ನು ಕೂಡ ಹೀಗೆಯೇ ಎಂದು ಹೇಳಲಾಗುವುದಿಲ್ಲ. ಹಾಗಾಗಿಯೇ ಮನುಷ್ಯರಿಗೆ ಯಾವಾಗ ಹೇಗೆ ಆರೋಗ್ಯ ಹದೆಗೆಡುತ್ತದೆ ಎಂಬುದನ್ನ ಕೂಡ ಊಹೆ ಮಾಡಲು ಸಾಧ್ಯವಾಗುವುದಿಲ್ಲ‌. ಕೆಲವರಿಗೆ ದಿಢೀರ್ ಅಂತ ಹೇಳಿಕೊಳ್ಳುವಂತಹ ಯಾವುದೇ ಗಂಭೀರ ಸಮಸ್ಯೆಗಳು ಆಗದೇ ಹೋದರು ಸಹ ಏಕಾಏಕಿ ಗಾಬರಿ ಪಟ್ಟು ಆಸ್ಪತ್ರೆಗಳಿಗೆ ಹೋಗುತ್ತಾರೆ.

ಅದರಲ್ಲಿಯೂ ಸುಸ್ತು, ಜೀರ್ಣಕ್ರಿಯೆ ಸಮಸ್ಯೆಗಳಾದಾಗ ಮನೆಯಲ್ಲಿಯೇ ಇರುವಂತಹ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಸಣ್ಣ ಪುಟ್ಟ ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದು. ಜೊತೆಗೆ ಹಣ್ಣು ಹಂಪಲುಗಳು ಮತ್ತು ಡ್ರೈಫ್ರೂಟ್ಸ್ ಗಳಿಂದಾನು ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಾಗಿರುತ್ತದೆ. ಅಂತೆಯೇ ಡ್ರೈಫ್ರೂಟ್ಸ್ ಗಳಲ್ಲಿ ಒಂದಾದ ಅಂಜೂರವನ್ನು ಸೇವಿಸುವುದರಿಂದ ಯಾವೆಲ್ಲಾ ಉಪಯೋಗಗಳಿವೆ ಎಂಬುದನ್ನ ತಿಳಿಯುವುದಾದರೆ. ಅಂಜೂರ ಹಣ್ಣಿನಲ್ಲಿ ಪ್ರೋಟಿನ್ ಅಂಶಗಳು ಹೆಚ್ಚಾಗಿರುತ್ತದೆ. ಇದರಲ್ಲಿ ನಾರಿನಾಂಶ, ಕಬ್ಬಿಣಾಂಶ ಅಧಿಕವಾಗಿದ್ದು ದೇಹಕ್ಕೆ ಅವಶ್ಯಕವಾದಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನ ಒದಗಿಸುತ್ತದೆ.

ಅನೇಕರು ತಮ್ಮ ದೇಹದ ತೂಕವನ್ನ ಇಳಿಸಿಕೊಳ್ಳಲು ಅನೇಕ ಕಸರತ್ತುಗಳನ್ನ ಮಾಡುತ್ತಾರೆ. ಕೇವಲ ಈ ಅಂಜೂರವನ್ನು ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಸಿಕೊಳ್ಳಬಹುದಾಗಿರುತ್ತದೆ. ಆಹಾರ ತಜ್ಞರ ಸಲಹೆಯ ಪ್ರಕಾರ ಒಣ ಅಂಜೂರವನ್ನು ರಾತ್ರಿಯ ಹೊತ್ತು ಹಾಲಿನಲ್ಲಿ ನೆನೆಸಿ ಮಾರನೇಯ ದಿನ ಹಾಲು ಕುಡಿಯುವುದರಿಂದ ಕ್ಯಾಲರಿ ಕೊಬ್ಬನ್ನು ಕಡಿಮೆಗೊಳಿಸಿ ತೂಕವನ್ನ ಇಳಿಸಬಹುದಾಗಿರುತ್ತದೆ‌. ಇನ್ನು ರಕ್ತಸಂಬಂಧಿ ಖಾಯಿಲೆಯ ಸಮಸ್ಯೆಗಳಿಗೆ ಅಂಜೂರ ಉತ್ತಮ ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂದೇಳಬಹುದು. ಆಹಾರದ ಸೇವನೆಯಲ್ಲಿ ವ್ಯತ್ಯಾಸವಾಗಿ ಜೀರ್ಣಕ್ರಿಯೆ ಅಂತಹ ಸಮಸ್ಯೆಗಳು ಎದುರಾದಾಗ ಹಾಲಿನೊಟ್ಟಿಗೆ ಅಂಜೂರ ಸೇವಿಸುವುದರಿಂದ ಸುಸ್ತು ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

%d bloggers like this: