ದೇಹ ದಣಿವಾದಾಗ ನೀರು ಕುಡಿಯುವುದು ಸಾಮಾನ್ಯ. ಸದ್ಯಕ್ಕೆ ಬೇಸಿಗೆ ಕಾಲವಂತೂ ಅಲ್ಲ, ಹಾಗಾಗಿ ಬಿಸಿಲು ದಾಹ ದಣಿವು ಎಂಬುದನ್ನ ಅಷ್ಟಾಗಿ ಕಾಣುವುದಿಲ್ಲ. ಚಳಿಗಾಲ ಹಾಗಿರುವುದರಿಂದ ಬಹುತೇಕರು ದಣಿವಾಗುವುದಿಲ್ಲ ಎಂದು ಹೆಚ್ಚು ನೀರು ಕುಡಿಯುವುದಿಲ್ಲ. ಇದು ದೇಹದ ಅಸಮತೋಲನಕ್ಕೆ ಕಾರಣವಾಗುತ್ತದೆ. ಸಹಜವಾಗಿ ನೀರು ಕುಡಿಯುವಂತೆ ಜೀರಿಗೆ ಬೆರೆಸಿ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನ ಪಡೆಯಬಹುದಾಗಿರುತ್ತದೆ. ನಾವು ಸೇವಿಸುವಂತಹ ಆಹಾರವೇ ನಮ್ಮ ದೇಹದ ಉಷ್ಣಾಂಶಕ್ಕೆ ಕಾರಣವಾಗುತ್ತದೆ. ಶರೀರದಲ್ಲಿ ಉಷ್ಣಾಂಶ ಹೆಚ್ಚಾದರೆ ದೇಹದಲ್ಲಿ ಹಲವಾರು ರೀತಿಯಾಗಿ ತೊಂದರೆ ಸಮಸ್ಯೆಗಳು ಕಾಡುತ್ತದೆ.

ಬೇಸಿಗೆ ಮತ್ತು ಬಿಸಿಲಿನಿಂದಾಗಿ ಉಷ್ಣಾಂಶ ಹೆಚ್ಚಾಗುತ್ತದೆ ದೇಹ ಸದಾ ತಂಪಾಗಿರಲು ಹೆಚ್ಚು ನೀರನ್ನು ಕುಡಿಯಬೇಕು ಹಾಗೂ ಮಸಾಲೆ ಪದಾರ್ಥ ಖಾರಯುಕ್ತ ಪದಾರ್ಥಗಳನ್ನು ಸೇವನೆ ಮಾಡಬಾರದು. ಇದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಲು ಇದು ಕೂಡ ಪ್ರಮುಖ ಕಾರಣವಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಕನಿಷ್ಟ 2 ಲೀಟರ್ ಕ್ಕಿಂತ ಹೆಚ್ಚು ನೀರನ್ನು ಕುಡಿಯಬೇಕು ಮನೆ ಅಥವಾ ಕಚೇರಿಗಳಲ್ಲಿ ನಿರಂತರವಾಗಿ ಒಂದೇ ಕಡೆಯ ಜಾಗದಲ್ಲಿ ಕೂರುವ ಕಾರಣ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾದಂತೆ ಉರಿಮೂತ್ರ ಸಮಸ್ಯೆಗಳು ಹೊಟ್ಟೆನೋವು, ಕಣ್ಣಿನ ಸುತ್ತ ಕಪ್ಪಾಗುವಂತಹ ಸಮಸ್ಯೆಗಳು ಕಾಡುತ್ತವೆ.ಇಂತಹ ಸಮಸ್ಯೆಗಳ ಪರಿಹಾರವಾಗಿ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ.



ಒಂದು ಲೋಟದಲ್ಲಿ ನೀರನ್ನು ಹಾಕಿ 1 ಚಮಚ ಜೀರಿಗೆ, ಮತ್ತು ಕೆಂಪು ಕಲ್ಲುಸಕ್ಕರೆ ಸೇರಿಸಿ ಜೀರಿಗೆ ಕಲ್ಲುಸಕ್ಕರೆ ನೀರನ್ನು ಪ್ರತಿದಿನ ರಾತ್ರಿ ನೆನೆಸಿಡಬೇಕು. ಈ ಕಲ್ಲು ಸಕ್ಕರೆ ದೇಹದಲ್ಲಿನ ಉಷ್ಣಾಂಶವನ್ನು ಬೇಗ ಕಡಿಮೆ ಮಾಡುತ್ತದೆ. ನಂತರ ಮಾರನೇ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಜೀರಿಗೆ ಬೆರೆಸಿದ ನೀರು ಸೇವನೆ ಮಾಡುವುದರಿಂದ ಬೊಜ್ಜು ಕೂಡ ನಿವಾರಣೆ ಆಗುತ್ತದೆ. ಜೀರಿಗೆ ಕೇವಲ ಸಾಂಬಾರು ಪಧಾರ್ಥ ಮಾತ್ರವಲ್ಲದೆ ಅದರಲ್ಲಿ ಔಷಧಿಯ ಗುಣವನ್ನು ಕೂಡ ಕಾಣಬಹುದಾಗಿರುತ್ತದೆ. ಜೀರಿಗೆಯಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನಿಷಿಯಂ ಅಂಶಗಳಿವೆ. ಹಾಗಾಗಿ ಜೀರಿಗೆ ನೀರನ್ನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನ ಹೊಂದ ಬಹುದಾಗಿದೆಯಂತೆ.