ದೇಶದಲ್ಲೇ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ನಟ ಇವರೇ ನೋಡಿ

ದೇಶದ ಪ್ರತಿಯೊಬ್ಬ ನಾಗರಿಕನು ತಮಗೆ ಸಿಗುವ ಆದಾಯಕ್ಕೆ ತೆರಿಗೆ ಕಟ್ಟುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಎಷ್ಟೋ ಜನ ಸರಕಾರಕ್ಕೆ ಮೋಸ ಮಾಡಿ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಸದ್ಯದ ಸಮಯದಲ್ಲಿ ಅಚ್ಚರಿಯ ಸಂಗತಿ ಏನಲ್ಲ. ತೆರಿಗೆ ಎನ್ನುವುದು ಯಾರಿಗೂ ಹೊರತಾಗಿಲ್ಲ. ಅದೇ ರೀತಿ ಸಿನಿಮಾ ತಾರೆಯರು ಸಹ ತಮ್ಮ ಆದಾಯಕ್ಕೆ ತಕ್ಕಂತೆ ತೆರಿಗೆಯನ್ನು ಕಟ್ಟುತ್ತಾರೆ. ಅವರು ಕಟ್ಟುವ ತೆರಿಗೆ ಅವರು ಸಿನಿಮಾ, ಜಾಹೀರಾತುಗಳಿಂದ ಪಡೆಯುವ ಆದಾಯವನ್ನು ತೋರಿಸುತ್ತದೆ. ಅದೇ ರೀತಿ ಕಳೆದ ಹಲವು ವರ್ಷಗಳಿಂದ ಬಾಲಿವುಡ್ ನ ಈ ಸ್ಟಾರ್ ಅತಿ ಹೆಚ್ಚು ತೆರಿಗೆಯನ್ನು ಕಟ್ಟುವ ಪೈಕಿ ನಂಬರ್ ಒನ್ ಆಗಿದ್ದು ಸರಿಯಾದ ಸಮಯಕ್ಕೆ ತೆರಿಗೆಯನ್ನು ಕಟ್ಟುತ್ತಾರೆ. ಆ ನಟ ಬೇರೆ ಯಾರು ಅಲ್ಲ ಬಾಲಿವುಡ್ನ ಕಿಲಾಡಿ ಅಕ್ಷಯ್ ಕುಮಾರ್.

ಹೌದು ಬಾಲಿವುಡ್ನ ಟಾಪ್ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರು ದೇಶದ ಅತಿ ಹೆಚ್ಚು ಆದಾಯ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಚಿತ್ರ ಒಂದಕ್ಕೆ ಕೋಟಿ ಕೋಟಿ ರೂಪಾಯಿಗಳ ಸಂಭಾವನೆ ಪಡೆಯುವ ಅಕ್ಷಯ್ ಕುಮಾರ್ ಅವರು ವರ್ಷಕ್ಕೆ ತಪ್ಪದೆ 3 4 ಚಿತ್ರಗಳನ್ನು ಮಾಡುತ್ತಾರೆ. ಇದರ ಜೊತೆಗೆ ಸಾಕಷ್ಟು ಜಾಹೀರಾತುಗಳ ಬ್ರಾಂಡ್ ಅಂಬಾಸಿಡರ್ ಕೂಡ ಇದೆ ಅಕ್ಷಯ್ ಕುಮಾರ್. ಹೀಗಾಗಿ ಸಹಜವಾಗಿಯೇ ಅವರ ಆದಾಯ ಉಳಿದ ನಟರಿಗಿಂತ ತುಸು ಹೆಚ್ಚೇ ಎನ್ನಬಹುದು. ಪ್ರಸಕ್ತ ವರ್ಷ ಇವರು ಕಟ್ಟಿರುವ ತೆರಿಗೆ ಬರೋಬ್ಬರಿ 29 ಕೋಟಿ ರೂಪಾಯಿಗಳು. ಪ್ರತಿ ವರ್ಷ ಸರಿಯಾಗಿ ಆದಾಯ ತೆರಿಗೆ ಕಟ್ಟುವ ಅಕ್ಷಯ್ ಕುಮಾರ್ ಅವರಿಗೆ ತೆರಿಗೆ ಇಲಾಖೆ ಸತತವಾಗಿ ಸಮ್ಮಾನ ಪತ್ರವನ್ನು ನೀಡುತ್ತಾ ಬಂದಿದೆ. ಈ ಮೂಲಕ ಅಕ್ಷಯ್ ಕುಮಾರ್ ಅವರು ದೇಶದ ಜನಕ್ಕೆ ಮಾದರಿ ಆಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

%d bloggers like this: