ಬರೋಬ್ಬರಿ ಕಳೆದ ಏಳೆಂಟು ತಿಂಗಳಿಂದ ಇಡೀ ಜಗತ್ತು ಕರೋನಾ ಹೆಮ್ಮಾರಿಯಿಂದ ಅಕ್ಷರಶಃ ನಲುಗಿಹೋಗಿದೆ, ಅನೇಕರ ಜೀವನ ಸಂಕಷ್ಟದಲ್ಲಿ ಸಿಲುಕಿದೆ. ಆದರೆ ಇದೀಗ ಆಶಾಭಾವನೆ ಮೂಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೌದು ಒಂದು ಹಂತದಲ್ಲಿ ನಮ್ಮ ದೇಶ ಪ್ರತಿ ನಿತ್ಯ 95 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಕಂಡಿತ್ತು.
ಆದರೆ ಸೋಂಕು ಆರಂಭವಾದಾಗಿನಿಂದ ಇದೇ ಪ್ರಥಮ ಬಾರಿಗೆ ಪ್ರತಿದಿನದ ಸೋಂಕು ಏರಿಕೆಯ ಪ್ರಮಾಣ ಶೇಕಡ 1ಕ್ಕಿಂತ ಇಳಿಕೆಯಾಗಿದೆ. ಬಹಳ ಆತಂಕದಲ್ಲಿ ಜೀವನ ಕಳೆದ ನಮಗೆ ಇದೀಗ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಆದರೆ ಅಮೆರಿಕದ ಸಂಶೋಧನೆ ಹೇಳುವಂತೆ ಕೊರೋನಾ ವೈರಸ್ ಒಮ್ಮೆ ಮನುಷ್ಯನ ದೇಹದಲ್ಲಿ ಸೇರಿದರೆ ಸುಮಾರು ಏಳೆಂಟು ತಿಂಗಳವರಿಗೆ ಜೀವಂತವಿರುತ್ತದೆ ಎಂದಿದ್ದಾರೆ.
ಹಾಗಾಗಿ ನಾವು ಇನ್ನು ಕೆಲವು ತಿಂಗಳುಗಳವರೆಗೆ ಇದೇ ರೀತಿಯ ಕಾಳಜಿಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗಿದೆ. ಸಂಪೂರ್ಣವಾಗಿ ನಮ್ಮ ಜಗತ್ತು ಮತ್ತು ನಮ್ಮ ದೇಶ ಈ ಹೆಮ್ಮಾರಿಯಿಂದ ಮುಕ್ತವಾಗುವವರೆಗೂ ಇಷ್ಟು ದಿನ ನಡೆದುಕೊಂಡುಬಂದ ರೀತಿಯಲ್ಲಿಯೇ ನಾವು ಸಾಗುವುದು ತುಂಬಾ ಮುಖವಾಗಿದೆ.