ನಮ್ಮ ದೇಶದ ಪ್ರಧಾನ ಮಂತ್ರಿ ಎಂದರೆ ಅವರು ಆಡುವ ಪ್ರತಿ ಒಂದು ಮಾತು ಕೂಡ ದೇಶದೆಲ್ಲೆಡೆ ತುಂಬಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇಡೀ ರಾಷ್ಟ್ರವನ್ನು ಮುನ್ನಡೆಸುವ ಗೌರಯುತವಾದ ಪ್ರಧಾನಿ ಹುದ್ದೆಗೆ ಇರುವ ತಾಕತ್ತು ಅದು. ಅದರಲ್ಲೂ 2014 ರಲ್ಲಿ ಪ್ರಧಾನಿಯಾಗಿ ಆಯ್ಕೆ ಆದ ನರೇಂದ್ರ ಮೋದಿ ಅವರು ತಮ್ಮ ವಿಚಾರಗಳನ್ನ ವ್ಯಕ್ತಪಡಿಸುವ ಸಲುವಾಗಿಯೇ ಮನ್ ಕಿ ಬಾತ್ ಎಂಬ ಹೊಸ ಸರಣಿಯನ್ನೇ ಪ್ರಾರಂಭಿಸಿದ್ದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಈ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡುವ ವಿಷಯ ದೇಶವ್ಯಾಪಿ ಸುದ್ದಿಯಾಗುತ್ತದೆ.

ಹಾಗೆಯೇ ಮೋದಿ ಅವರು ಕೂಡ ದೇಶದ ವಿವಿಧ ರಾಜ್ಯಗಳಲ್ಲಿ ಜರುಗಿದ ವಿಶೇಷ ಸಮಾಜಮುಖಿ ಕೆಲಸ ಕಾರ್ಯಗಳನ್ನು ತಮ್ಮ ಮಾತಿನ ಮೂಲಕ ತಿಳಿಪಡಿಸಿ ಒಳ್ಳೆಯ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಈ ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ನಮ್ಮ ಕರ್ನಾಟಕ ರಾಜ್ಯದ ಹೆಸರನ್ನು ಎರಡು ಬಾರಿ ಪ್ರಸ್ತಾಪಿಸಿದರು. ಹೌದು ನಮ್ಮ ರಾಜ್ಯದಲ್ಲಿ ಆದ ಎರಡು ವಿಶೇಷ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಮೋದಿ ಅವರು ಕರ್ನಾಟಕ ರಾಜ್ಯವನ್ನು ನೆನಪಿಸಿಕೊಳ್ಳುವಂತೆ ಆಯಿತು.



ಹೌದು ಎಲ್ಲ ವಿವಾಹಿತ ಜೋಡಿ ಮದುವೆಯಾದ ಮೇಲೆ ಮಧುಚಂದ್ರಮಕ್ಕೆ ತೆರಳಿದರೆ ಇಲ್ಲೊಂದು ಉಡುಪಿಯ ಜೋಡಿ ಸಂತಸ ಪಡುವುದನ್ನು ಬಿಟ್ಟು ಸೋಮೇಶ್ವರ ಕಡಲ ಕಿನಾರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ಹೌದು ಉಡುಪಿಯ ಬೈಂದೂರಿನ ಅನುದೀಪ್ ಮತ್ತು ಮಿನಿಶಾ ಆರು ವರ್ಷಗಳ ಕಾಲ ಪ್ರೇಮಿಸಿ ಇತ್ತೀಚಿಗೆ ಮದುವೆ ಆದರು. ಅವರ ಪ್ರೀತಿಯ ಸಮಯದಲ್ಲಿ ಅವರು ಸೋಮೇಶ್ವರ ಕಡಲ ಕಿನಾರೆಯಲ್ಲಿ ಆಗಾಗ ವಿಹರಿಸುತ್ತಿದ್ದರು. ಆಗ ಅಲ್ಲಿದ್ದ ಕಸ ಮತ್ತು ಪ್ಲಾಸ್ಟಿಕ್ ನಂತಹ ವ್ಯಾಜ್ಯಗಳನ್ನು ಕಂಡು ಅವರಿಗೆ ಬೇಸರವಾಗಿತ್ತು.



ಹಾಗಾಗಿ ಮದುವೆಯಾದಮೇಲೆ ದೇಶ ವಿದೇಶಗಳಿಗೆ ಪ್ರವಾಸ ಮಾಡುವ ಬದಲು ತಾವು ವಿಹರಿಸುತ್ತಿದ್ದ ಸೋಮೇಶ್ವರ ಕಡಲ ಕಿನಾರೆಯನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಬರೋಬ್ಬರಿ 8 ಕ್ವಿಂಟಾಲ್ ಗು ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ. ಈ ನವವಿವಾಹಿತ ದಂಪತಿ ಮಾಡಿದ ಪರಿಸರಮುಖಿ ಕೆಲಸಕ್ಕೆ ಇಡೀ ದೇಶವೇ ಶಹಭಾಷ್ ಎಂದಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಈ ಜೋಡಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಆದ ನಳಿನ್ ಕುಮಾರ್ ಕಟೀಲ್ ನವದಂಪತಿಯನ್ನು ಭೇಟಿಯಾಗಿ ಸನ್ಮಾನಿಸಿದ್ದಾರೆ.



ಇದರ ಜೊತೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಗಂಜಂನ ಯುವಕರ ತಂಡವೊಂದು ಪಾಳುಬಿದ್ದಿದ್ದ ಶ್ರೇಷ್ಠ ಇತಿಹಾಸವನ್ನು ಹೊಂದಿದಂತಹ ಶಿವನ ದೇವಾಲಯವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿದ್ದಾರೆ. ಹೌದು ವಿಜಯನಗರ ಕಾಲದ ಶ್ರೀ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಇಲ್ಲಿ ಶಿವನ ದೇವಾಲಯವೊಂದನ್ನು ನಿರ್ಮಿಸಲಾಗಿತ್ತು. ಆದರೆ ಕಳೆದ 45 ವರ್ಷಗಳಿಂದ ಈ ದೇವಾಲಯ ಯಾವುದೇ ಚಟುವಟಿಕೆ ಗಳಿಲ್ಲದೆ ಸಂಪೂರ್ಣವಾಗಿ ಪಾಳುಬಿದ್ದು ವಿಷಜಂತುಗಳ ಆಗರವಾಗಿತ್ತು.



ಇದನ್ನು ಮನಗಂಡ ಶ್ರೀರಂಗಪಟ್ಟಣದ ಯುವ ಬ್ರಿಗೇಡ್ ಎಂಬ ಯುವಕರ ಸಂಘ ಎರಡು ತಿಂಗಳುಗಳ ಕಾಲ ಪ್ರತಿ ಭಾನುವಾರ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟಿತ್ತು. ಇದೀಗ ಹೊಸ ಶಿವನ ವಿಗ್ರಹವನ್ನು ಮತ್ತೆ ಪ್ರತಿಷ್ಠಾಪಿಸಿ ಈಗ ಪ್ರತಿನಿತ್ಯ ಪೂಜೆ ನೆರವೇರುವಂತೆ ಮಾಡಿದ ಕೀರ್ತಿ ಆ ಯುವಕರ ತಂಡಕ್ಕೆ ಸಲ್ಲುತ್ತದೆ. ಇದನ್ನು ಸಹ ಮೋದಿಯವರು ಮನ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.