ದೇವ ಕನ್ಯೆಯಾಗಿ ತೆರೆಯ ಮೇಲೆ ಬರಲು ಸಜ್ಜಾದ ನಟಿ ಆಶಿಕಾ ರಂಗನಾಥ್ ಅವರು

ಚುಟು ಚುಟು ಬೆಡಗಿ ಅಂತಾನೇ ಸಖತ್ ಫೇಮಸ್ ಆಗಿರೋ ನಟಿ ಆಶಿಕಾ ರಂಗನಾಥ್ ಅವರು ಇದೀಗ ಮತ್ತೊಂದು ಅವತಾರದಲ್ಲಿ ಕನ್ನಡ ಸಿನಿ ಪ್ರೇಕ್ಷಕರನ್ನು ಮನರಂಜಿಸಲು ಬರುತ್ತಿದ್ದಾರೆ. ಹೌದು ಶರಣ್ ಅವರ ಜೊತೆ ಅವತಾರ್ ಪುರುಷ ಸಿನಿಮಾದಲ್ಲಿ ನಟಿಸಿದ ನಂತರ ಆಶಿಕಾ ರಂಗನಾಥ್ ಅವರು ಸದ್ಯಕ್ಕೆ ಹೊರ ದೇಶಗಳಲ್ಲಿ ಪ್ರವಾಸ ಕೈಗೊಂಡು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಈಗಾಗಲೇ ಅಶಿಕಾ ರಂಗನಾಥ್ ನಟಿಸಿರುವ ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿಸಿ ಇನ್ನೆನೋ ಕೆಲವೇ ತಿಂಗಳಿನಲ್ಲಿ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಇದರ ನಡುವೆಯೇ ಆಶಿಕಾ ರಂಗನಾಥ್ ಅವರು ಹೊಸದೊಂದು ಸಿನಿಮಾಗೆ ಆಯ್ಕೆ ಆಗಿದ್ದಾರೆ. ಆ ಚಿತ್ರದ ಹೆಸರೇ ಗತವೈಭವ. ಗತ ವೈಭವ ಸಿನಿಮಾವನ್ನ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ.

ಈ ಹಿಂದೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಅವತಾರ್ ಪುರುಷ ಚಿತ್ರದಲ್ಲಿ ಅಶಿಕಾ ರಂಗನಾಥ್ ಅವರು ನಟಿಸಿದ್ದರು. ಇದೀಗ ಮತ್ತೊಮ್ಮೆ ಆಶಿಕಾ ರಂಗನಾಥ್ ಅವರನ್ನೇ ತಮ್ಮ ಗತ ವೈಭವ ಚಿತ್ರದ ನಾಯಕಿಯಾಗಿ ಸುನಿ ಆಯ್ಕೆ ಮಾಡಿಕೊಂಡಿದ್ದಾರೆ. ಗತ ವೈಭವ ಚಿತ್ರದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿ ದುಷ್ಯಂತ್ ನಟಿಸುತ್ತಿದ್ದಾರೆ. ಗತ ವೈಭವ ಸಿನಿಮಾದಲ್ಲಿ ದುಶ್ಯಂತ್ ವಿ.ಎಫ್.ಎಕ್ಸ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಶಿಕಾ ರಂಗನಾಥ್ ಫೋರ್ಚುಗಲ್ ಮರ್ಚೆಂಟ್ ಮತ್ತು ದೇವಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗತ ವೈಭವ ಚಿತ್ರದ ಹೀರೋಯಿನ್ ಇಂಟ್ರಿಡ್ಯೂಸ್ ಪ್ರೋಮೋ ವೀಡಿಯೋದಲ್ಲಿ ನಟಿ ಆಶಿಕಾ ರಂಗನಾಥ್ ಅವರ ಬಳಿ ಸಿನಿಮಾ ಡೇಟ್ ಕೇಳಲು ನಿರ್ದೇಶಕ ಸಿಂಪಲ್ ಸುನಿ ಹೋದಾಗ ಸಂಭಾವನೆ ಕೇಳಿಯೇ ಚಿತ್ರ ಒಪ್ಕೋಬೇಕ್ ಅನ್ನೋ ಹಾಗೇ ದೃಶ್ಯ ಸನ್ನಿವೇಶ ಕಟ್ಟಿಕೊಟ್ಟು ಪ್ರೇಕ್ಷಕರಿಗೆ ಗತ ವೈಭವ ಚಿತ್ರದ ಒಂದಷ್ಟು ಹಿಂಟ್ ನೀಡಿದ್ದಾರೆ ಸುನಿ.

ಈಗಾಗಲೇ ಈ ಗತ ವೈಭವ ಚಿತ್ರದಲ್ಲಿ ಆಶಿಕಾ ರಂಗನಾಥ್ ಅವರ ಪಾತ್ರದ ರೂಪ ಹೇಗಿರಲಿದೆ ಅನ್ನೋದನ್ನ ರಿವೀಲ್ ಮಾಡಿದ್ದು, ಕನ್ನಡ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ. ಗತ ವೈಭವ ಸಿನಿಮಾವನ್ನು ಸುನಿ ಸಿನಿಮಾಸ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ, ಜುಡಾ ಸ್ಯಾಂಡಿ ಅವರ ರಾಗ ಸಂಯೋಜನೆ ಇರಲಿದೆ. ಮೂಲಗಳ ಪ್ರಕಾರ ಗತ ವೈಭವ ಸಿನಿಮಾದ ಶೇಕಡಾ ಮೂವತ್ತರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಟೀಮ್ ಸಜ್ಜಾಗುತ್ತಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಚುಟು ಚುಟು ಸಾಂಗ್ ನಲ್ಲಿ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ನಟಿ ಆಶಿಕಾ ರಂಗನಾಥ್ ಗತ ವೈಭವ ಸಿನಿಮಾದಲ್ಲಿ ಯಾವೆಲ್ಲಾ ರೀತಿಯ ಅವತಾರವೆತ್ತಿ ಪಡ್ಡೆ ಹುಡುಗರನ್ನ ಕುಣಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

%d bloggers like this: