ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ರೀತಿಯ ವಸ್ತುಗಳನ್ನು ಇಟ್ಟರೆ ನಿಮಗೆ ಕಷ್ಟಗಳು ಕಟ್ಟಿಟ್ಟ ಬುತ್ತಿಯಾಗಿದೆ, ಹೌದು ಮನುಷ್ಯನಿಗೆ ಹೃದಯ ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯ ಮನೆಯ ದೇವರ ಕೋಣೆಗೆ ಇದೆ. ಇಂತಹ ಪವಿತ್ರವಾದ ದೆವರಕೋಣೆಯಲ್ಲಿ ನಿಮಗೆ ಗೊತ್ತಿಲ್ಲದೆ ಇಡುವ ದೇವರ ವಿಗ್ರಹಗಳು, ಪೋಟೋಗಳು ನಿಮ್ಮನ್ನು ಸಂಕಷ್ಠಕ್ಕೆ ತಳ್ಳುತ್ತವೆ. ಹಾಗದರೆ ಯಾವ ಫೊಟೋಗಳನ್ನು ನೀವು ದೇವರ ಕೋಣೆಯಲ್ಲಿ ಇಡಬಾರದು, ಒಂದು ವೇಳೆ ಇಟ್ಟರೆ ಯಾವ ನಿಯಮವನ್ನು ಅನುಸರಿಸಬೇಕು ಎಂಬುದನ್ನು ತಿಳಿದಿರಬೇಕು.

ದೇವರಿಗೆ ಪೂಜೆಯ ಸಮಯದಲ್ಲಿ ಅಲಂಕಾರ ಮಾಡುವಾಗ ಹೂವನ್ನು ದೇವರಿಗೆ ಅರ್ಪಿಸುತ್ತೇವೆ ಮತ್ತು ಹೂವಿನಿಂದ ದೇವರ ಫೋಟೋಗಳನ್ನು ಅಲಂಕರಿಸುತ್ತೇವೆ. ಆದರೆ ಇದನ್ನು ಮರುದಿನವೂ ಸಹ ಹಾಗೆ ಬಿಡುತ್ತೇವೆ ಇದು ದೋಷ ಬರುವುದಕ್ಕೆ ಕಾರಣವಾಗುತ್ತದೆ. ಒಣಗಿದ ಹೂವು ಯಾವುದೇ ಕಾರಣಕ್ಕೂ ದೇವರ ಫೋಟೋಗಳ ಮೇಲೆ ಇರಬಾರದು, ಅದನ್ನು ಮರುದಿನವೇ ತೆಗೆದು ಹೊಸ ಹೂವನ್ನು ಹಾಕಬೇಕು. ಇನ್ನು ನೀವು ತೀರ್ಥಕ್ಷೇತ್ರಗಳಿಗೆ ಹೋದಾಗ ಅಲ್ಲಿಂದ ಯಾವುದಾದರು ದೇವರ ವಿಗ್ರಹ, ಫೋಟೋಗಳನ್ನು ತರುವುದಾದರೆ ನಿಮಗೆ ಅದೃಷ್ಟ ತರುವ, ಮನಃಶಾಂತಿ ದೊರೆಯುವ ದೇವರ ಫೋಟೋಗಳನ್ನು ತರಬೇಕಾಗುತ್ತದೆ.

ನೀವು ಉಗ್ರ ಸ್ವರೂಪ ದೇವರ ಫೋಟೋಗಳನ್ನು ಮತ್ತು ದೇವರ ವಿಗ್ರಹಗಳನ್ನು ತರುವುದಾದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನೀವು ಬ್ರಹ್ಮಚರ್ಯ ಆಚರಿಸಬೇಕು, ಮಾಂಸಹಾರ ಸೇವಿಸಬಾರದು, ನೈವೇದ್ಯಗಳನ್ನು ಇಟ್ಟು ವಿಶೇಷ ಪೂಜೆ ಮಾಡವುದು ಕಡ್ಡಾಯವಾಗಿರುತ್ತದೆ. ನೀವು ದೇವರ ಕೋಣೆಯಲ್ಲಿ ವಿಗ್ರಹಗಳನ್ನು ಇಟ್ಟು ಈ ನಿಯಮಗಳನ್ನುಪಾಲಿಸದೇ ಇದ್ದಲ್ಲಿ ಮನೆಯಲ್ಲಿ ಅಶಾಂತಿ, ಸತಿ ಪತಿಗಳ ನಡವೆ ಕಲಹ, ಅನಾರೋಗ್ಯ ದಂತಹ ದೋಷಗಳು ನಿಮ್ಮನ್ನು ಕಾಡುತ್ತವೆ, ಆದ್ದರಿಂದ ದೇವರ ಕೋಣೆಯಲ್ಲಿ ದೇವರ ಫೋಟೋಗಳನ್ನು ಮಾತ್ರ ಇಟ್ಟು ಪೂಜೆ ಸಲ್ಲಿಸಿದರೆ ಒಳಿತು ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.