ದೇವರಾಗಿ ತೆರೆಯ ಮೇಲೆ ಬರಲಿದ್ದಾರೆ ಪುನೀತ್ ರಾಜಕುಮಾರ್

ಎಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದಿಗೆ ನಮ್ಮನ್ನು ಅಗಲಿ 9 ತಿಂಗಳುಗಳು ಕಳೆದವು. ಆದರೆ ಅವರನ್ನು ನೆನೆಯದೆ ಜೀವನವೇ ಇಲ್ಲ ಎಂಬಂತಾಗಿದೆ. ಹೌದು ಪುನೀತ್ ರಾಜಕುಮಾರ್ ಅವರು ನಿಧನರಾದ ನಂತರ ಅವರನ್ನು ದೇವರಾಗಿ ಪೂಜಿಸುವ ಒಂದು ಪದ್ಧತಿಯೇ ಶುರುವಾದಂತಿದೆ. ಅಭಿಮಾನ ಇದೀಗ ಭಕ್ತಿಯ ರೂಪವಾಗಿ ಪರಿವರ್ತನೆಯಾಗಿದೆ. ಅಪ್ಪು ಅವರು ಕೊನೆ ಉಸಿರೆಳೆಯುವ ಮೊದಲು ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅದರಲ್ಲಿ ಲಕ್ಕಿ ಮ್ಯಾನ್ ಚಿತ್ರ ಕೂಡ ಒಂದು. ಹೌದು ಜೇಮ್ಸ್ ಚಿತ್ರ ಅವರು ಸಂಪೂರ್ಣವಾಗಿ ನಾಯಕನಾಗಿ ಕಾಣಿಸಿಕೊಂಡ ಕೊನೆಯ ಚಿತ್ರ ಆಗಿರಬಹುದು ಆದರೆ ಇನ್ನೂ ತೆರೆಕಾಣಬೇಕಾಗಿರುವ ಅವರು ಚಿಕ್ಕ ಪುಟ್ಟ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಹಲವು ಚಿತ್ರಗಳಿಗೆ.

ಲಕ್ಕಿ ಮ್ಯಾನ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಅವರು ನಾಯಕ ಮತ್ತು ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ದೇವರ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರಕಥೆಗೆ ಮುಖ್ಯ ತಿರುವನ್ನು ನೀಡುತ್ತಾರೆ. ಇದರ ಜೊತೆಗೆ ಪ್ರಭುದೇವ ಜೊತೆಗೆ ಅವರು ಮಾಡಿರುವ ನೃತ್ಯ ಈಗಾಗಲೇ ತುಂಬಾ ಸದ್ದು ಮಾಡಿದ್ದು ಚಿತ್ರಮಂದಿರಗಳಲ್ಲಿ ಅವರ ನೃತ್ಯವನ್ನು ಹಾಗೂ ಇಬ್ಬರು ಡ್ಯಾನ್ಸಿಂಗ್ಕ ಕಿಂಗ್ ಗಳ ಜುಗಲ್ ಬಂದಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಲಕ್ಕಿಮ್ಯಾನ್ ಚಿತ್ರತಂಡ ದೇವರು ಶೀಘ್ರವಾಗಿ ಬರಲಿದ್ದಾನೆ ಎಂದು ಹೇಳುವ ಮೂಲಕ ಚಿತ್ರದ ಬಿಡುಗಡೆಗೆ ಮುನ್ಸೂಚನೆ ನೀಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರದೇ ಧ್ವನಿ ಇದ್ದು ಅಭಿಮಾನಿಗಳು ಅವರನ್ನು ತೆರೆಯ ಮೇಲೆ ನೋಡಲು ಮತ್ತು ಅವರ ಧ್ವನಿ ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ.

%d bloggers like this: