ಧನವೃದ್ಧಿಗೆ ಮನೆಗೆ ಬರುವ ಅತಿಥಿಗಳಿಗೆ ಇವುಗಳನ್ನು ದಾನ ಮಾಡಿ

ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ದಾನ ಧರ್ಮ ಮಾಡುವುದರಿಂದ ನಮ್ಮ ಸಂಕಷ್ಟಕಾಲದಲ್ಲಿ ನಾವು ಮಾಡಿದ ಸಣ್ಣ ಪುಟ್ಟ ಸತ್ಕಾರ್ಯಗಳು ಎಷ್ಟೋ ಪುಣ್ಯವನ್ನು ಲಭಿಸುತ್ತದೆ. ಆದರೆ ಇಂದಿನ ದಿನಮಾನಗಳಲ್ಲಿ ದಾನಧರ್ಮ ಅರ್ಥ ಕಳೆದುಕೊಂಡಿವೆ ಎಂದರೆ ತಪ್ಪಾಗಲಾರದು. ದೇವಸ್ಥಾನಕ್ಕೆ ಗಡಿಯಾರ ಕೊಟ್ಟು ತಮ್ಮ ಹೆಸರನ್ನು ಹಾಕಿಸಿಕೊಳ್ಳುವರು. ವೃದ್ದಾಶ್ರಮಕ್ಕೆ ಬೋರ್ಡ್ ಹಾಕಿಸಿ ಆ ಬೋರ್ಡ್ ನಲ್ಲಿ ತಮ್ಮ ಸಂಸ್ಥೆಯ ಹೆಸರನ್ನು ಪ್ರಚಾರ ಮಾಡಿಕೊಳ್ಳವರು ಹೀಗೆ ಎಲ್ಲಾ ಇದೇ ರೀತಿಯ ಮನಸ್ಥಿತಿಯವರು ಅಂತಲ್ಲ ಶೇಕಡಾವಾರು ನೋಡಿದರೆ ಸ್ವಾರ್ಥದ ಜೀವನ ನಡೆಸುತ್ತಿರುವವರೇ ಹೆಚ್ಚು.

ಇಂತಹ ಸಮಾಜ ವಾತಾವರಣದಲ್ಲಿ ಫಲಾಪೇಕ್ಷೆಯಿಲ್ಲದೆ ಯಾರೂ ಕೂಡ ಸಹಾಯ ಮಾಡುವುದಿಲ್ಲ. ಆದರೆ ನಮ್ಮ ಹಿರಿಯರು ಹೇಳಿಕೊಟ್ಟಂತಹ ಸಂಸ್ಕಾರ, ಸಂಪ್ರದಾಯ ನಿಯಮಗಳು ವೈಜ್ಞಾನಿಕವಾಗಿಯೂ ಇರುತ್ತವೆ. ನಾವು ಕೆಲವು ನಂಬಿಕೆಗಳನ್ನು ಮೂಢ ನಂಬಿಕೆಗಳಾಗಿ ಪರಿವರ್ತಿಸಿದ್ದೇವೆ ಅಷ್ಟೆ. ಎಷ್ಟೋ ವಿಷಯಗಳು ಕೆಲವು ಸಲ ನಮಗೆ ಪರಿಹಾರೋಪಾಯವಾದ ಮಾರ್ಗವೇ ಈ ದಾನಧರ್ಮದ ಸಂಸ್ಕಾರವಾಗಿದೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವ ಪ್ರಕಾರ ನಿಮ್ಮ ಕೈಯಲ್ಲಿ ಚಂಚಲೆಯಾದ ಲಕ್ಷ್ಮಿಯು ಸ್ಥಿರವಾಗಿ ನಿಲ್ಲುತ್ತಿಲ್ಲವೇ, ಆರ್ಥಿಕ ಸಮಸ್ಯೆ ನಿಮ್ಮನ್ನು ಬೆಂಬಿಡದೇ ಕಾಡುತ್ತಿದ್ದರೆ ಸರಳವಾಗಿ ಇಂತಹ ಸಮಸ್ಯೆಗಳಿಗೆ ದಾನ ಮಾಡುವುದರಿಂದ ದೋಷಮುಕ್ತರಾಗುತ್ತೀರಿ. ಯಾರಿಗೆ ದಾನಧರ್ಮ ನಿಮ್ಮಮನೆಯ ಮಕ್ಕಳು ಅಂದರೆ ಅಕ್ಕ ತಂಗಿಯ ಮಕ್ಕಳು ಬಂಧು ಬಳಗದವರ ಮಕ್ಕಳು ಹೀಗೆ ಯಾರೇ ನಿಮ್ಮ ಕುಟಂಬದ ಮಕ್ಕಳನ್ನು ತಿಂಗಳಿಗೊಮ್ಮೆ ಭೇಟಿಯಾಗಿ ಅವರಿಗೆ ಫಲತುಂಬಾ ಹಣ್ಣು ಹಂಪಲು, ವಸ್ತ್ರ ಅಥವಾ ಇತ್ಯಾದಿ ಅವರಿಗೆ ಇಷ್ಟವಾಗುವ ವಸ್ತುಗಳನ್ನು ದಾನವಾಗಿ, ಉಡುಗೊರೆಯಾಗಿ ನೀಡುತ್ತಾ ಬನ್ನಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಸುಧಾರಣೆ ಆಗುತ್ತವೆ.

%d bloggers like this: