ಸಾಮಾನ್ಯವಾಗಿ ನಟಿಯರಾಗಿ ಸಿನಿ ರಂಗದಲ್ಲಿ ಮಿಂಚಿ ಹೆಸರು ಗಳಿಸಿದ ಮೇಲೆ, ಹೊಸಬರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ನಿರ್ಮಾಣಕ್ಕೆ ನಟ ನಟಿಯರು ಇಳಿಯುತ್ತಾರೆ. ಆದರೆ ಇಲ್ಲೊಬ್ಬ ಕಿರುತೆರೆಯ ನಟಿ, ತಾನು ಬೆಳೆಯುತ್ತಿರುವಾಗಲೇ ಇನ್ನೊಬ್ಬರನ್ನು ಬೆಳೆಸಲು ಸಾಥ್ ನೀಡುತ್ತಿದ್ದಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಮೇಘ ಶೆಟ್ಟಿ ಅವರು ಹೊಸತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕಿರುತೆರೆಯಿಂದ ಬೆಳ್ಳಿಪರದೆಗೆ ಹಾರುವ ಮೊದಲೇ ಇಂತಹ ಸಾಹಸಕ್ಕೆ ಕೈ ಹಾಕಿರುವ ಮೊದಲ ನಟಿ ಇವರೇ ಎಂದು ಹೇಳಬಹುದು. ಅಲ್ಲದೆ ನಟಿಯಾಗಿ ಜೊತೆ ಜೊತೆಯಲಿ ಧಾರಾವಾಹಿ ಇವರ ಮೊದಲ ಧಾರಾವಾಹಿ. ಇದುವರೆಗೆ ಬೇರೆ ಯಾವ ಧಾರಾವಾಹಿಗಳಲ್ಲೂ ಮೇಘ ಶೆಟ್ಟಿಯವರು ಕಾಣಿಸಿಕೊಂಡಿಲ್ಲ.

ಇತ್ತ ಮೇಘಾ ಶೆಟ್ಟಿ ಅವರು ಸದ್ಯಕ್ಕೆ ನಿರ್ಮಾಪಕಿ ಆಗುವ ಕನಸಿನಲ್ಲಿ ತೇಲಾಡುತ್ತಿದ್ದಾರೆ. ನಟಿಯಾಗಿ ಯಶಸ್ಸು ಕಂಡಿರುವ ಮೇಘ ಶೆಟ್ಟಿ, ನಿರ್ಮಾಪಕಿಯಾಗಿ ಯಶಸ್ಸು ಕಾಣುತ್ತಾರಾ ಎಂಬ ಕುತೂಹಲ ಇದ್ದೇ ಇರುತ್ತದೆ. ಈ ವಿಷಯವನ್ನು ತಿಳಿದ ಇವರ ಅಭಿಮಾನಿಗಳು ಕೂಡ ಸಂತಸದಲ್ಲಿದ್ದಾರೆ. ಮೇಘಾ ಶೆಟ್ಟಿಯವರು ಧಾರಾವಾಹಿ ಮಾತ್ರವಲ್ಲದೆ ಒಂದು ಆಲ್ಬಮ್ ಸಾಂಗ್ ಕೂಡ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲೂ ಕೂಡ ಅಭಿನಯಿಸಿದ್ದಾರೆ. ಸದ್ಯಕ್ಕೆ ಜೊತೆ ಜೊತೆಯಲಿ ಧಾರಾವಾಹಿ ಹಲವಾರು ಟ್ವಿಸ್ಟ್ ಅಂಡ್ ಟರ್ನ್ ಗಳೊಂದಿಗೆ ಸಾಗುತ್ತಿದೆ. ಈ ಧಾರಾವಾಹಿಯ ಕಥೆ ದಿನೇ ದಿನೇ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ. ಧಾರಾವಾಹಿಯಂತೆ ಮೇಘ ಶೆಟ್ಟಿ ಅವರ ನಿಜ ಜೀವನದಲ್ಲೂ ಕೂಡ ನಿರ್ಮಾಪಕಿಯಾಗುವ ಗುರಿ.

ಅವರ ಜೀವನದ ದಿಕ್ಕನ್ನೇ ಬದಲಿಸಬಹುದಾ ಎಂದು ಕಾದು ನೋಡಬೇಕು. ಅಷ್ಟಕ್ಕೂ ಮೇಘಾ ಶೆಟ್ಟಿ ಅವರು ಯಾವುದಾದರೂ ಒಂದು ಸಿನಿಮಾಗೆ ನಿರ್ಮಾಣ ಮಾಡುತ್ತಿಲ್ಲ. ಬದಲಾಗಿ ಕೆಂಡಸಂಪಿಗೆ ಎಂಬ ಧಾರಾವಾಹಿಗೆ ನಿರ್ಮಾಣ ಮಾಡುತ್ತಿದ್ದಾರೆ. ಕೆಂಡಸಂಪಿಗೆ ಧಾರಾವಾಹಿಯಲ್ಲಿ ಮಿಡಲ್ ಕ್ಲಾಸ್ ಹುಡುಗಿಯೊಬ್ಬಳು ತನ್ನ ಸಹೋದರ ಸಹೋದರಿಯರು ಚೆನ್ನಾಗಿ ಇರಬೇಕು ಎಂದು ತನ್ನ ಇಡೀ ಜೀವನವನ್ನೇ ಅವರಿಗಾಗಿ ಮುಡಿಪಾಗಿಟ್ಟರುತ್ತಾಳೆ. ಅವಳಿಗಾಗಿ ಏನನ್ನೂ ಮಾಡಿಕೊಳ್ಳದಂತಹ ನಿಸ್ವಾರ್ಥ ಹುಡುಗಿಯ ಜೀವನದ ಕಥೆಯನ್ನು ಆಧಾರಿತ ಧಾರಾವಾಹಿಯೇ ಕೆಂಡಸಂಪಿಗೆ. ಈ ಮಹಿಳಾ ಪ್ರಧಾನ ಕಥೆ ಕಲರ್ಸ್ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿದೆ. ಒಬ್ಬ ಮಹಿಳೆಯಾಗಿ ಮಹಿಳಾ ಪ್ರಧಾನ ಧಾರಾವಾಹಿಗಳಿಗೆ ಮೇಘ ಶೆಟ್ಟಿಯವರು ನಿರ್ಮಾಪಕಿಯಾಗಿರುವುದು ಖುಷಿಯ ಸಂಗತಿ.