ವಿವಾದದ ನಗೆಪಾಟಿಲಿಗೆ ಗುರಿಯಾದ ಬೆಂಗಾಲಿ ಧಾರವಾಹಿ ದೃಶ್ಯ ಹೌದು ಈ ಸಿನಿಮಾ ಮತ್ತು ಧಾರವಾಹಿಗಳ ದೃಶ್ಯಗಳಲ್ಲಿ ಬಳಸುವ ಸಾಧನ, ಸಲಕರಣೆಗಳು, ವಸ್ತುಗಳು ಸತ್ಯಕ್ಕೆ ದೂರವಾದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇಲ್ಲೊಂದು ಬೆಂಗಾಲಿ ಸೀರಿಯಲ್ “ಕೃಷ್ಣಕೋಲಿ” ದೃಶ್ಯದಲ್ಲಿ ಬಳಸಿದ ವಾಷ್ ಸ್ಟ್ರಬ್ಬರ್ ವೈದ್ಯಕೀಯ ಸಂಧರ್ಭದಲ್ಲಿ ಬಳಸುವ ಹೃದಯಬಡಿತವನ್ನು ಸಹಜಸ್ಥಿತಿಗೆ ತರಲು ಬಳಸುವ ಡೆಫಿಬ್ರಿಲೇಟರ್ ರೂಪದಲ್ಲಿದ್ದು ಇದನ್ನು ವೈದ್ಯರೊಬ್ಬರು ಬೆಡ್ ಮೇಲೆ ಮಲಗಿರುವ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವ ದೃಶ್ಯದಲ್ಲಿ ಸ್ಟ್ರಬ್ಬರ್ ಬಳಸಿರುವುದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ.

ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅದು ಡೆಫಿಬ್ರಿಲೇಟರ್ ಅಲ್ಲ ಅದು ವಾಷಿಂಗ್ ಸ್ಟ್ರಬ್ಬರ್ ಅಂತ ಗೊತ್ತಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.ಆದರೆ ಇದರ ಪೂರ್ವಪರ ಉದ್ದೇಶ ಅರಿಯದ ಎಷ್ಟೋ ವ್ಯಕ್ತಿಗಳು ಇದನ್ನು ನಕರಾತ್ಮಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ದೃಶ್ಯದ ನಿಜವಾದ ಉದ್ದೇಶವೇನೆಂದರೆ ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ 19ನ ಕುರಿತು ಜಾಗೃತಿ ಮೂಡಿಸುವಂತಹ ದೃಶ್ಯವೊಂದಿತ್ತು ತದನಂತರ ಇದರ ಅರಿತವರು ಈ ಧಾರವಾಹಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.