ಧರ್ಮಸ್ಥಳದ ಈ ಎತ್ತಿನಗಾಡಿ ನೋಡಿ ಬೆರಗಾದ ಮಹಿಂದ್ರಾ ಕಂಪನಿಯ ಮಾಲಿಕ

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪೋಸ್ಟ್ ಗಳು ವಿಶ್ವಾಸರ್ಹವಾಗಿರುವುದಿಲ್ಲ, ಇದು ಕೇವಲ ಯುವ ಸಮುದಾಯಗಳ ದಿಕ್ಕನ್ನು ತಪ್ಪುದಾರಿಗೆ ಎಳೆಯುತ್ತದೆ. ಅನಾವಶ್ಯಕವಾಗಿ ಸಮಯ ವ್ಯರ್ಥವಾಗುತ್ತದೆ ಎಂದು ಒಂದಷ್ಟು ಜನ ಸೋಷಿಯಲ್ ಮೀಡಿಯಾಗಳನ್ನು ಜರಿಯುವುದುಂಟು ಆದರೆ ಇದೇ ಸಾಮಾಜಿಕ ಜಾಲತಾಣದಿಂದಲೇ ಆಗಾಗ ಭಿನ್ನ, ವಿಭಿನ್ನ ಸ್ವಾರಸ್ಯಕರ ಸಂಗತಿಗಳು ತಿಳಿಯುವುದು. ಹೌದು ಇತ್ತೀಚಿಗೆ ಧರ್ಮಸ್ಥಳದಲ್ಲಿ ಒಂದು ಎತ್ತಿನಗಾಡಿಯೊಂದು ಸುದ್ದಿಯಾಗಿದೆ. ಇದು ಕೇವಲ ಎತ್ತಿನ ಗಾಡಿ ಆಗಿದ್ರೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಆ ಎತ್ತಿನ ಗಾಡಿಗೆ ಅಂಬಾಸಿಡರ್ ಕಾರಿನ ರೂಪ ಕೊಟ್ಟು ಅದನ್ನು ನಗರದಲ್ಲಿ ಚಲಾಯಿಸುತ್ತಿದ್ದದ್ದು ಎಲ್ಲರ ಕಣ್ಣಿಗೆ ಬಿದ್ದು ಆ ಪೋಟೋ ವೈರಲ್ ಆಗಿದೆ.

ಇದೀಗ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಆ ಫೋಟೋವನ್ನು ಫೋಸ್ಟ್ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಮಹಿಳೆಯೊಬ್ಬಳು ನಡೆಸುತ್ತಿದ್ದ ಮೊಬೈಲ್ ಕ್ಯಾಂಟೀನಿಗೆ ತನ್ನ ಆಟೋವನ್ನು ಮಹೀಂದ್ರಾ ಬೊಲೆರೋ ವಿನ್ಯಾಸ ನೀಡಿ ಆ ಆಟೋವನ್ನು ಆಕರ್ಷಕವಾಗಿ ಮಾಡಿ ಜನರನ್ನು ಸೆಳೆದಿದ್ದಲ್ಲದೆ ಆ ಸುದ್ದಿ ವೈರಲ್ ಆಗಿತ್ತು. ಇದೇ ವಿಚಾರವಾಗಿ ಆ ಮಹಿಳೆಯನ್ನು ಗುರುತಿಸಿ ಅವರಿಗೆ ಆನಂದ್ ಮಹೀಂದ್ರಾ ಅವರು ಶ್ಲಾಘಿಸಿ ನೂತನ ಮಹೀಂದ್ರಾ ಬೊಲೆರೋ ವಾಹನವನ್ನು ಉಡುಗೊರೆಯಾಗಿ ನೀಡಿದ್ದರು ಇದು ಕೂಡ ಅಂದಿನ ದಿನಗಳಲ್ಲಿ ಭಾರಿ ಮೆಚ್ಚುಗೆ ಪಡೆದಿತ್ತು.

ಇದೇ ರೀತಿಯಾಗಿ ಧರ್ಮಸ್ಥಳದ್ಲಲಿ ವ್ಯಕ್ತಿಯೊಬ್ಬ ಎತ್ತಿನ ಗಾಡಿಯನ್ನೆ ಅಂಬಾಸಿಡರ್ ರೂಪ ನೀಡಿದ್ದಾನೆ. ಈ ಗಾಡಿಯನ್ನು ಹಿಂಬಾಗದಿಂದ ನೋಡಿದರೆ ಥೇಟ್ ಅಂಬಾಸಿಡರ್ ಕಾರು ಹೋಗುತ್ತಿದ್ದೇನೋ ಎಂಬಂತೆ ಕಾಣುತ್ತದೆ. ಟಾಂಗಾದಂತಿರುವ ಈ ಅಂಬಾಸಿಡರ್ ಗಾಡಿಗೆ ಇಬ್ಬರು ಕೂರುವ ವ್ಯವಸ್ಥೆ ಕೂಡ ಇದೆ. ಖ್ಯಾತ ಉದ್ಯಮಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದು ಹೊಸ ವಿಚಾರಗಳ ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತಾರೆ. ಈ ಅಂಬಾಸಿಡರ್ ಕಾರಿನ ರೂಪದಲ್ಲಿರುವ ಎತ್ತಿನ ಗಾಡಿ ಕುರಿತು ಎಲಾನ್ ಮಾಸ್ಕ್ ಹಾಗೂ ಟೆಸ್ಲಾ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಲ್ಲ ಇಂಧನ ಆವಿಷ್ಕಾರದ ಬಗ್ಗೆ ಯೋಚನೆ ಮಾಡಿಲ್ಲರು. ಮಿಥೇನ್ ಬಗ್ಗೆ ಲೆಕ್ಕ ಹಾಕಿದರೆ ವಾಯು ಮಾಲಿನ್ಯ ಕಡಿಮೆಯಾಗಬಹುದು ಎಂಬ ವಿಚಾರವನ್ನು ಸ್ಪಷ್ಟತೆಯಿಂದ ಹೇಳಲಾಗುವುದಿಲ್ಲ ಎಂದು ಎತ್ತಿನ ಗಾಡಿಯ ವೀಡಿಯೋ ತುಣುಕಿನೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

%d bloggers like this: