ಧ್ರುವ ಸರ್ಜಾ ಅವರ ಹೊಸ ‘ಮಾರ್ಟಿನ್’ ಚಿತ್ರಕ್ಕೆ ನಟಿಯ ಆಯ್ಕೆ

ಕನ್ನಡದ ಯುವ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಪಿ ಅರ್ಜುನ್ ಅವರು ಇದೀಗ ಮಾರ್ಟಿನ್ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧೃವಸರ್ಜಾ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಈ ಮಾಸ್ ಚಿತ್ರಕ್ಕೆ ನಿರ್ಮಾಪಕ ಉದಯ್ ಕೆ.ಮೆಹ್ತಾ ಅವರು ಬಂಡವಾಳ ಹೂಡುತ್ತಿದ್ದಾರೆ. ಎಪಿ ಅರ್ಜುನ್ ಸಾರಥ್ಯದ ಈ ಮಾರ್ಟಿನ್ ಸಿನಿಮಾಗೂ ಮೊದಲು ಉದಯ್ ಕೆ.ಮೆಹ್ತಾ ಅವರು ಧೃವಸರ್ಜಾ ಜೊತೆ ದುಬಾರಿ ಎಂಬ ಚಿತ್ರವನ್ನು ಮಾಡಬೇಕಿತ್ತು. ಈ ದುಬಾರಿ ಚಿತ್ರಕ್ಕೆ ನಂದಕಿಶೋರ್ ಆಕ್ಷನ್ ಕಟ್ ಹೇಳಲು ಸಿದ್ದರಾಗಿದ್ದರು. ಆದರೆ ಈ ಸಿನಿಮಾ ಕಾರಾಣಾಂತರಗಳಿಂದ ನಿಂತಿದೆ.

ಇನ್ನು ಈ ಚಿತ್ರಕ್ಕೆ ಬ್ರೇಕ್ ಬಿದ್ದ ಕಾರಣ ನಟ ಧೃವಸರ್ಜಾ ಅವರು ಮಾರ್ಟಿನ್ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಮಾರ್ಟಿನ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ನಲ್ಲಿ ದೃವಸರ್ಜಾ ಬೇಡಿ ಹಾಕಿಕೊಂಡು ಖಡಕ್ ಲುಕ್ ನೀಡಿ ಪೋಸ್ ಕೊಟ್ಟಿದ್ದಾರೆ. ಮಾರ್ಟಿನ್ ಚಿತ್ರದ ಈ ಪೋಸ್ಟರ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇನ್ನು ಇತ್ತೀಚೆಗೆ ಮಾರ್ಟಿನ್ ಚಿತ್ರತಂಡ ಹೈದರಾಬಾದ್ ನಲ್ಲಿ ಒಂದಷ್ಟು ಚಿತ್ರೀಕರಣ ಕೂಡ ಮುಗಿಸಕೊಂಡಿದ್ದು, ಎರಡನೇ ಹಂತದ ಚಿತ್ರೀಕರಣವನ್ನ ಬೆಂಗಳೂರಿನಲ್ಲಿ ಇಟ್ಟುಕೊಂಡಿದೆ. ಇದೀಗ ಇದರ ನಡುವೆ ಮಾರ್ಟಿನ್ ಚಿತ್ರತಂಡಕ್ಕೆ ಹೀರೋಯಿನ್ ಎಂಟ್ರಿ ಆಗಿದೆ.

ಈ ಹಿಂದೆ ನಿರ್ಮಾಪಕ ಉದಯ್ ಕೆ.ಮೆಹ್ತಾ ಅವರು ಮಾರ್ಟಿನ್ ಚಿತ್ರದಲ್ಲಿ ಹೊಸ ಪ್ರತಿಭೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಈಗ ಮಾರ್ಟಿನ್ ಸಿನಿಮಾಗೆ ರಾಜ್ ವಿಷ್ಣು ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಆಯ್ಕೆ ಆಗಿದ್ದಾರೆ. ನಟಿ ವೈಭವಿ ಶಾಂಡಿಲ್ಯ ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಅಭಿನಯದ ರಾಜ್ ವಿಷ್ಣು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಇದರ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಅಭಿನಯದ ಗಾಳಿ ಪಟ2 ಚಿತ್ರದಲ್ಲಿಯೂ ಕೂಡ ವೈಭವಿ ನಟಿಸಿದ್ದಾರೆ. ಈಗ ಮಾರ್ಟಿನ್ ಚಿತ್ರದಲ್ಲಿ ಧೃವಸರ್ಜಾ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

%d bloggers like this: