ಧಿಡೀರನೆ n95 ಮಾಸ್ಕ ಬೇಡ ಅಂತ ಸರ್ಕಾರ ಆದೇಶಿಸಿದ್ದು ಯಾಕೆ, ಇಲ್ಲಿದೆ ನೋಡಿ ಉತ್ತರ

ಭಾರತವು ಸೇರಿ ವಿಶ್ವದಲ್ಲೆಡೆ ರುದ್ರನರ್ತನ ಮಾಡುತ್ತಿರುವ ಕೊರೋನಾದಿಂದ ಮುಕ್ತವಾಗಲು ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿದೆ. ಜನರು ಸರಕಾರದ ನಿಯಮಗಳನ್ನು ತಕ್ಕಮಟ್ಟಿಗೆ ಪರಿಪಾಲನೆಯನ್ನು ಕೂಡ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಕೇಂದ್ರ ಆರೋಗ್ಯ ಸಂಸ್ಥೆ ಒಂದು ಶಾಕಿಂಗ್ ಮಾಹಿತಿಯನ್ನು ಹೊರಗೆ ಹಾಕಿದೆ. ಅದೇನೆಂದರೆ ಕೆಲವು ದಿನಗಳ ಹಿಂದೆ ಸ್ವತಃ ಸರ್ಕಾರವೇ ಕೊರೋನಾದಿಂದ ರಕ್ಷಣೆ ಪಡೆಯಲು N95 ಮಾಸ್ಕ್ ಬಳಕೆಗೆ ಆದೇಶಿಸಿತ್ತು. ಅದರಂತೆ ಬಹುತೇಕ ಜನರು ಇದೇ ಮಾಸ್ಕನ್ನು ಉಪಯೋಗಿಸುತ್ತಿದ್ದರು. ಆದರೆ ಮೊನ್ನೆ ಕೇಂದ್ರ ಆರೋಗ್ಯ ಸಂಸ್ಥೆ ಇವುಗಳ ಬಳಕೆಯನ್ನು ಹಠಾತ್ತನೆ ನಿಷೇಧಿಸಿತು. ಅದು ಯಾಕೆ ಎಂಬ ಪ್ರಶ್ನೆಗಳು ಜನರಲ್ಲಿ ಮೂಡಿದವು.

ಅದಕ್ಕೆ ಕಾರಣ ಇಷ್ಟೇ. N95 ಮಾಸ್ಕನಲ್ಲಿ ಉಸಿರಾಟ ಕ್ರಿಯೆ ಸರಾಗವಾಗಲು ಒಂದು ಕವಾಟವನ್ನು ಅಂದರೆ ಬ್ರಿದಿಂಗ್ ವಾಲ್ವ ಅನ್ನು ಬಿಟ್ಟಿರುತ್ತಾರೆ. ಇದರಿಂದಲೇ ಈಗ ಸಮಸ್ಯೆ ಉದ್ಭವವಾಗಿದ್ದು. ಹೌದು ಈ ಕವಾಟ ಕೇವಲ ವಾತಾವರಣದಲ್ಲಿರುವ ಮಾಲಿನ್ಯವನ್ನು ತಡೆಗಟ್ಟುವುದೇ ಹೊರತು ವೈರಸ್ ಗಳನ್ನ ಅಲ್ಲ. ಅಂದರೆ ವೈರಾಣುಗಳು ಈ ಕವಾಟದಿಂದ ತಪ್ಪಿಸಿಕೊಳ್ಳುತ್ತವೆ. ಈ ಕವಾಟ ಉಸಿರನ್ನು ತೆಗೆದುಕೊಳ್ಳುವ ವೇಳೆ ಮಾತ್ರ ಗಾಳಿಯನ್ನು ಶುದ್ಧೀಕರಿಸುತ್ತದೆ ಹೊರತು ಉಸಿರು ಬಿಡುವ ವೇಳೆ ಅದು ಶುದ್ಧವಾಗಿರುವುದಿಲ್ಲ, ಹೀಗಾಗಿ ಇವುಗಳ ಬಳಕೆಯನ್ನು ಈಗ ನಿಷೇಧಿಸಲಾಗಿದೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಮಾಸ್ಕಗಳನ್ನ ಬಳಸುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ.

%d bloggers like this: