ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕನ್ನಡ ನಟಿ

2012ರಲ್ಲಿ ಹೊಸ ಹುಡುಗನಾಗಿ ಅದ್ದೂರಿ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ಧ್ರುವ ಸರ್ಜಾ ಅವರು ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ಎನಿಸಿಕೊಂಡರು. ಒಂದಾದಮೇಲೊಂದು ಹಿಟ್ ಸಿನಿಮಾಗಳನ್ನು ನೀಡಿ ಬಾಕ್ಸಾಫೀಸಿನಲ್ಲಿ ಹವಾ ಸೃಷ್ಟಿ ಮಾಡಿದವರು. ಅದ್ದೂರಿ ಸಿನಿಮಾ ತೆರೆಕಂಡು 12ವರ್ಷಗಳಾದಮೇಲೆ ಈ ಜೋಡಿ ಮತ್ತೆ ಒಂದಾಗುತ್ತಿದೆ. ಯಾವ ಜೋಡಿ ಒಂದಾಗುತ್ತಿದೆ ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ. ಅದ್ದೂರಿ, ಬಹದ್ದೂರ್, ಭರ್ಜರಿ, ಪೊಗರು ಚಿತ್ರಗಳ ನಂತರ ಧ್ರುವ ಅವರು ಮತ್ತೊಂದು ವಿಭಿನ್ನ ಅವತಾರದಲ್ಲಿ ನಮ್ಮೆಲ್ಲರನ್ನು ರಂಜಿಸಲು ಬರುತ್ತಿದ್ದಾರೆ. ಹೌದು ಪೊಗರು ಸಿನಿಮಾದ ಯಶಸ್ಸಿನ ನಂತರ ಧ್ರುವ ಸರ್ಜಾ ಅವರು ಮಾರ್ಟಿನ್ ಅವತಾರದಲ್ಲಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರಕ್ಕೆ ಎಪಿ ಅರ್ಜುನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಸಿನಿಮಾದಲ್ಲಿ ಅರ್ಜುನ್ ಮತ್ತು ಧ್ರುವ ಸರ್ಜಾ ಅವರ ಕಾಂಬಿನೇಷನ್ ಎಲ್ಲರಿಗೂ ಇಷ್ಟವಾಗಿತ್ತು. 12ವರ್ಷಗಳ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಧೂಳೆಬ್ಬಿಸಲಿದೆ. ಸಾಕಷ್ಟು ಅಳೆದು ತೂಗಿ ಅರ್ಜುನ್ ಅವರು ತಮ್ಮ ಬತ್ತಳಿಕೆಯಿಂದ ಮಾರ್ಟಿನ್ ಎಂಬ ಬಾಣವನ್ನು ತೆಗೆದು ಗೆದ್ದುಬಿಟ್ಟರು ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ. ಪೊಗರು ಸಿನಿಮಾದ ನಂತರ ಧ್ರುವ ಸರ್ಜಾ ಅವರು ಮತ್ತೆ ಯಾವ ಅವತಾರದಲ್ಲಿ ನಮ್ಮ ಮುಂದೆ ಬರಲಿದ್ದಾರೆ ಎಂಬ ಅವರ ಅಭಿಮಾನಿಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈಗಾಗಲೇ ಮಾರ್ಟಿನ್ ಅವತಾರದಲ್ಲಿ ಮಿಂಚುತ್ತಿರುವ ಧ್ರುವ ಸರ್ಜಾ ಅವರ ಗೆಟಪ್ ನೋಡಿ ಅವರ ಅಭಿಮಾನಿಗಳು ಖುಷ್ ಆಗಿದ್ದಾರೆ.

ಎಪಿ ಅರ್ಜುನ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಉದಯ್ ಮೆಹ್ತಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಮಾರ್ಟಿನ್ ಚಿತ್ರಕ್ಕೆ ನಟ ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈಗಾಗಲೇ ಅಭಿನಯಿಸಿ ಹೆಸರು ಮಾಡಿರುವ ಸುಕೃತ ವಾಗ್ಲೆ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಅಭಿನಯಿಸಿರುವ ಸುಕೃತ ಅವರು ಈ ಚಿತ್ರವನ್ನು ಒಪ್ಪಿಕೊಂಡಿರುವುದು ವಿಶೇಷ. ಏಕೆಂದರೆ ಇದೊಂದು ಕಮರ್ಷಿಯಲ್ ಚಿತ್ರ. ಇದರ ಬಗ್ಗೆ ಮಾತನಾಡಿದ ಸುಕೃತ ಅವರು ನಿರ್ಮಾಪಕ ಉದಯ್ ಮೆಹ್ತಾ ಅವರನ್ನು ಚಿತ್ರರಂಗದ ಆರಂಭದ ದಿನಗಳಿಂದಲೂ ನಾನು ಬಲ್ಲೆ. ಅವರ ಹೋಂ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿರುವುದು ನನಗೆ ಇನ್ನೂ ಖುಷಿ ತಂದಿದೆ. ಉದಯ್ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ.

ಅವರು ಕಲಾವಿದರಿಗೆ ಉತ್ತಮ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ನನಗೆ ವಿಭಿನ್ನ ಪಾತ್ರವನ್ನು ಕೊಡಲಾಗಿದೆ. ನಾನು ಈ ಹಿಂದೆ ಕೇಳದೆ ಇರುವ ಪಾತ್ರ ನನಗೆ ಸಿಕ್ಕಿರುವುದು ಖುಷಿಯ ಸಂಗತಿ ಎಂದು ಹೇಳುವುದರ ಮೂಲಕ ನಟಿ ಸುಕೃತ ಅವರು ತಮ್ಮ ಪಾತ್ರದ ಬಗ್ಗೆ ಇನ್ನಷ್ಟು ಕುತೂಹಲವನ್ನು ಮೂಡಿಸಿದ್ದಾರೆ. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಮಹಿಳಾ ಕಲಾವಿದರಿಗೆ ಹೆಚ್ಚು ಅವಕಾಶವಿರುವುದಿಲ್ಲ. ಆದರೆ ಇದು ಭಿನ್ನವಾಗಿದೆ ಎಂದಿರುವ ಸುಕೃತ ಅವರು ದ್ರುವ ನನಗೆ ಒಳ್ಳೆಯ ಸ್ನೇಹಿತ. ಅವರ ಜೊತೆ ಕೆಲಸ ಮಾಡುತ್ತಿರುವುದು ನನಗೆ ಖುಷಿ ಉಂಟುಮಾಡುತ್ತಿದೆ ಧ್ರುವ ನನಗೆ ಹಿಂದಿನಿಂದಲೂ ಗೊತ್ತು ಎಂದಿದ್ದಾರೆ.

ಮಾರ್ಟಿನ್ ಚಿತ್ರದ ಇತ್ತೀಚಿನ ಶೆಡ್ಯೂಲಿನ ಕೆಲವು ಭಾಗಗಳ ಚಿತ್ರೀಕರಣದಲ್ಲಿ ಈಗಾಗಲೇ ಸುಕೃತ ಅವರು ಭಾಗಿಯಾಗಿದ್ದಾರೆ. ಹೈದರಾಬಾದಿನಲ್ಲಿ ಚಿತ್ರೀಕರಣ ನಡೆದಿದ್ದು, ನಟಿ ಸುಕೃತ ಅವರ ಪಾತ್ರಕ್ಕೆ ಹೆಚ್ಚಿನ ತೂಕ ಇದೆ ಎಂದು ಹೇಳಿದ್ದಾರೆ. ಈಗಾಗಲೇ ಸುಕೃತ ಅವರು ಶೂಟಿಂಗ್ ಅನ್ನು ಸಹ ಮುಗಿಸಿದ್ದಾರೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಉಳಿದಿದೆ. ನಟಿ ಸುಕೃತ ಅವರು ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಕಾನೂನು ಪದವಿಯನ್ನು ಕೂಡ ಮುಗಿಸುತ್ತಿದ್ದಾರೆ. ವರ್ಷಕ್ಕೆ ದ್ರುವ ಅವರ ಕೇವಲ ಒಂದೇ ಸಿನಿಮಾ ರಿಲೀಸ್ ಆದರೂ ಧ್ರುವ ಸರ್ಜಾ ಅವರ ಸಿನಿಮಾಗಳು ವರ್ದಿ ಎನಿಸಿಕೊಳ್ಳುತ್ತವೆ. ಮಾರ್ಟಿನ್ ಚಿತ್ರವನ್ನು ನೋಡಲು ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಕಾಯುತ್ತಿದ್ದಾರೆ.

%d bloggers like this: