ಇಂಡಿಯನ್ ಸೂಪರ್ ಲೀಗ್ ಪುಟ್ ಬಾಲ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಒಡಿಶಾ! ಎರಡು ತಂಡಗಳ ನಡುವೆ ಜಿದ್ದಾ ಜಿದ್ದಿ ರೋಚಕ ಪಂದ್ಯಗಳು ನಡೆಯುವುದು ಕೇವಲ ಕ್ರಿಕೆಟ್ ನಲ್ಲಿ ಮಾತ್ರವಲ್ಲ. ಪುಟ್ ಬಾಲ್ ಪಂದ್ಯಾವಳಿಗಳಲ್ಲಿಯೂ ಕೂಡ ಅದಕ್ಕಿಂತ ದುಪ್ಪಟ್ಟು ರೋಚಕವಾಗಿ ನಡೆಯುತ್ತವೆ ಇಂದು ಇತ್ತೀಚೆಗೆ ನಡೆದ ಒಡಿಶಾ ಮತ್ತು ಈಸ್ಟ್ ಬೆಂಗಾಲ್ ತಂಡಗಳು ಸಾಬೀತು ಮಾಡಿವೆ. ಈ ಇಂಡಿಯನ್ ಸೂಪರ್ ಲೀಗ್ ಪುಟ್ ಬಾಲ್ ಪಂದ್ಯ ಎರಡು ತಂಡಗಳು ಕೂಡ ಗೋಲ್ ಗಳ ಮೇಲೆ ಗೋಲ್ ಬಾರಿಸುತ್ತಾ ನೋಡುಗರನ್ನು ಕುರ್ಚಿಯ ತುತ್ತ ತುದಿಗೆ ಕೂರಿಸುವಂತೆ ಭಾರಿ ಪೈಪೋಟಿಯ ಕೊಟ್ಟು ಒಡಿಶಾ ತಂಡ ವಿಜಯ ಸಾಧಿಸಿದೆ.

ಒಡಿಶಾ ಮತ್ತು ಈಸ್ಟ್ ಬೆಂಗಾಲ್ ನಡುವೆ ನಡೆದ ಈ ಪಂದ್ಯದಲ್ಲಿ ಒಟ್ಟು ಹತ್ತು ಗೋಲ್ ಗಳು ದಾಖಲಾಗಿದೆ. ಪಂದ್ಯ ಆರಂಭದಲ್ಲಿ ಈಸ್ಟ್ ಬೆಂಗಾಲ್ ತಂಡ ಕೇವಲ ಹದಿಮೂರೇ ನಿಮಿಷದಲ್ಲಿ ಖಾತೆ ತೆರೆಯುವ ಮೂಲಕ ಉತ್ತಮವಾಗಿ ಪ್ರದರ್ಶನ ತೋರಿತು. ತದ ನಂತರ ಒಡಿಶಾ ಎಫ್ಸಿ ತಂಡ ಕೂಡ ಬಹುಬೇಗ ಎಚ್ಚರಗೊಂಡು ರೋಡಾಸ್ ಅವರು ಮೊದಲ ಗೋಲು ಗಳಿಸಿದರು. ಮತ್ತೆ ನಲವತ್ತು ನಿಮಿಷಗಳು ಆಗುವ ಸಮಯಕ್ಕೆ ರೋಡಾಸ್ ಅವರೇ ಮತ್ತೇ ಮತ್ತೊಂದು ಗೋಲು ದಾಖಲಿಸಿದರು. ಇವರ ನಂತರ ಜಾವಿ ಹೆಚ್ ಕೂಡ ಮೂರನೇ ಗೋಲು ಬಾರಿಸಿ ಒಡಿಶಾ ತಂಡಕ್ಕೆ ಪ್ರಬಲರಾಗಿ ಗುರುತಿಸಿಕೊಂಡರು. ಈ ಮೂಲಕ ಮೊದಲ ಸುತ್ತಿನಲ್ಲಿ ಒಡಿಶಾ ತಂಡ ಈಸ್ಟ್ ಬೆಂಗಾಲ್ ತಂಡದ ವಿರುದ್ದ 3-1 ಅಂತರದಿಂದ ಮುನ್ನಡೆ ಸಾಧಿಸಿತು.



ತದ ನಂತರದಲ್ಲಿ ನಿರಂತರವಾಗಿ ಒಡಿಶಾ ತಂಡದ ಎರಿಡೈ ಅವರು ನಾಲ್ಕನೇ ಗೋಲು ಗಳಿಸಿದರು. ಇದಾದ ಬಳಿಕ ಈಸ್ಟ್ ಬೆಂಗಾಲ್ ತಂಡದ ಸೆಂಬೋಯ್ ಅವರು ಗೋಲು ಮಾಡುವ ಮೂಲಕ ತಮ್ಮ ತಂಡಕ್ಕೆ ಎರಡನೇ ಗೋಲು ದಾಖಲಿಸಿದರು. ಹೀಗೆ ನಿರಂತರವಾಗಿ ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿದ ವಿನಿತ್ ರೈ ನಾಯಕತ್ವದ ಒಡಿಶಾ ತಂಡ ಈಸ್ಟ್ ಬೆಂಗಾಲ್ ತಂಡದ ವಿರುದ್ದ 6-4 ಅಂತರದಿಂದ ವಿಜಯ ಸಾಧಿಸಿತು. ಈಸ್ಟ್ ಬೆಂಗಾಲ್ ತಂಡದಲ್ಲಿ ಸುವಮ್ ಸೇನ್, ಜಾಯ್ನರ್ ಲೌರೆಂಕೊ, ಹೀರಾ ಮೊಂಡಲ್, ರಾಜು ಗಾಯಕ್ವಾಡ್, ನಾಯಕರಾದ ಫ್ರಾಂಜೋ ಪ್ರೈಸ್, ಬಿಕಾಶ್ ಜೈರು, ಅಮೀರ್ ಡೆರ್ವಿಸೆವಿಕ್, ಮೊಹಮ್ಮದ್ ರಫೀಕ್, ಡ್ಯಾರೆನ್ ಸಿಡೊಯೆಲ್, ನವೊರೆಮ್ ಸಿಂಗ್ ಜೊತೆಗೆ ಆಂಟೋನಿಯೊ ಪೆರೊಸೆವಿಕ್ ತಂಡದಲ್ಲಿದ್ದರು.