ಕೊರೋನಾ ಸೋಂಕಿನ ಕಾರಣ ಇಡೀ ಜಗತ್ತು ಸ್ಥಬ್ಧವಾಗಿದೆ. ಇಡೀ ದೇಶದ ಕಾರ್ಯಚಟುವಟಿಕೆಗಳೆಲ್ಲಾ ಬಾಹ್ಯವಾಗಿ ಸಂಪೂರ್ಣವಾಗಿ ಬಂದ್ ಆಗಿವೆ. ಆದರೆ ದೇಶದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂದು ಬಹುತೇಕ ಕೆಲಸಗಳು ಮನೆಯಲ್ಲಿಯೇ ಅಂತರ್ಜಾಲ ಬಳಸಿ ಮಾಡಲ್ಪಡುತ್ತವೆ. ಇಂಥ ಸಂದರ್ಭದಲ್ಲಿ BSNL ದೇಶದ ಜನರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಹೌದು ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಪ್ಲಾನ್ C U L ಯೋಜನೆಯನ್ನು ದೇಶಕ್ಕೆ ಪರಿಚಯಿಸಿದೆ. ಈ ಮೂಲಕ ದಿನವೊಂದಕ್ಕೆ ಬರೋಬ್ಬರಿ 22 ಜಿಬಿ ಡಾಟಾವನ್ನು ನೀಡಲು ಸಜ್ಜಾಗಿದೆ, ಅದೂ ಸೆಕೆಂಡಿಗೆ 10mb ವೇಗದಲ್ಲಿ.
ಒಂದು ವೇಳೆ ದಿನವೊಂದಕ್ಕೆ ಡಾಟಾ ಅವಧಿಗೆ ಮುನ್ನವೇ ಖಾಲಿಯಾದರೂ ಕೂಡ ಈ ಸೆಕೆಂಡಿಗೆ 2 mb ವೇಗದಲ್ಲಿ ದಿನ ಮುಗಿಯುವವರೆಗೂ ನೀವು ಅಂತರ್ಜಾಲ ಬಳಸಬಹುದು. ಒಂದು ತಿಂಗಳಿಗೆ ಈ ಯೋಜನೆಯ ಮೊತ್ತ 1299 ರೂಪಾಯಿಗಳು ಮಾತ್ರ. ಈ ಯೋಜನೆಯನ್ನು ನೀವು ಒಂದು ವರ್ಷ ಎರಡು ವರ್ಷ ಅಥವಾ ಮೂರು ವರ್ಷಕ್ಕೂ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ನಿಮಗೆ ಒಂದು ಲ್ಯಾಂಡ್ ಲೈನ್ ಫೋನ್ ಸಹ ಲಭ್ಯವಿರುತ್ತದೆ. ಇಡೀ ದೇಶದ ಬಹುತೇಕ ಕೆಲಸ ಕಾರ್ಯಗಳು ಈಗ ಆನ್ಲೈನ್ ಮೂಲಕ ನಡೆಯುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಬಿಎಸ್ಎನ್ಎಲ್ ಈ ಒಂದು ಆಫರನ್ನು ನೀಡಿದ್ದು ಸ್ವಾಗತಾರ್ಹವಾಗಿದೆ.