ತೆಲುಗು ಚಿತ್ರರಂಗದ ಮಾಸ್ ನಾಯಕ, ಕ್ರೇಜಿ ಡ್ಯಾನ್ಸರ್ ಹಾಗೂ ಸೆನ್ಸೆಷನ್ ಸ್ಟಾರ್ ರವಿತೇಜ ಅವರ ವೃತ್ತಿ ಜೀವನದಲ್ಲಿ ದೊಡ್ಡ ಯುಟರ್ನ್ ಕೊಟ್ಟಿದ್ದು ಕ್ರ್ಯಾಕ್ ಸಿನಿಮಾ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳು, ಯಾವ ಪ್ರಚಾರವಿಲ್ಲದೆ, ಪ್ರಮೋಷನ್ ಇಲ್ಲದೆ ಕುಳಿತಿದ್ದ ಈ ನಟನಿಗೆ ಕೈಹಿಡಿದದ್ದು ಕ್ರ್ಯಾಕ್ ಸಿನಿಮಾ. ಒಂದು ಚಿತ್ರದ ಯಶಸ್ಸಿನ ನಂತರ ನಟ ಹಾಗೂ ನಟಿಯರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದೀಗ ರವಿತೇಜ ಅವರು ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿರುವ ವಿಚಾರ ಎಲ್ಲೆಡೆ ಚರ್ಚೆಗೆ ಆಸ್ಪದವಾಗಿದೆ. ಹೌದು ಕ್ರ್ಯಾಕ್ ಸಿನಿಮಾ ರವಿತೇಜ ಅವರಿಗೆ ಕೈತುಂಬ ಸಿನಿಮಾ ಆಫರ್ ಗಳು ಬರುವಂತೆ ಮಾಡಿದ್ದು, ಹೀಗಾಗಿ ರವಿತೇಜ ಅವರು ತಮ್ಮ ಮುಂದಿನ ಸಿನಿಮಾಗಳಿಗೆ ಸಂಭಾವನೆ ಹೆಚ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ.

ರವಿತೇಜ ಅವರು ಒಟ್ಟಾರೆ ಏಕಕಾಲಕ್ಕೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ತಮ್ಮ ಶೆಡ್ಯೂಲ್ ನ್ನು ಮ್ಯಾನೇಜ್ ಮಾಡಿಕೊಂಡು ಚಿತ್ರೀಕರಣ ಮಾಡುತ್ತಿದ್ದಾರೆ. ಕೈಯಲ್ಲಿ ತುಂಬಾ ಸಿನಿಮಾಗಳ ಆಫರ್ ಗಳು ಇರುವುದರಿಂದ ಕಡಿಮೆ ಸಮಯದಲ್ಲಿ ಚಿತ್ರೀಕರಣವನ್ನು ಮುಗಿಸುತ್ತಿದ್ದಾರೆ ಎಂದು ರವಿತೇಜ ಅವರ ತಂಡದವರು ಹೇಳಿದ್ದಾರೆ. ನಿರ್ಮಾಪಕರಿಗೆ ಕಾಲ್ಶೀಟ್ ಕೊಡುವುದಕ್ಕೂ ಆಗದಿರುವಷ್ಟರಮಟ್ಟಿಗೆ ರವಿತೇಜ ಅವರು ಬಿಸಿಯಾಗಿದ್ದಾರೆ. ಸದ್ಯಕ್ಕೆ ಶರತ್ ಅವರು ನಿರ್ದೇಶನ ಮಾಡುತ್ತಿರುವ ರಾಮರಾವ್ ಆನ್ ಡ್ಯೂಟಿ ಸಿನಿಮಾದಲ್ಲಿ ರವಿತೇಜ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಸದ್ಯಕ್ಕೆ ಫುಲ್ ಪೇಮೆಂಟ್ ಕೇಳಿಲ್ಲ. ಬದಲಿಗೆ ದಿನದ ಪೇಮೆಂಟ್ ಮಾತನಾಡಿದ್ದಾರಂತೆ. ಹೌದು ರವಿತೇಜ ಅವರು ದಿನಕ್ಕೆ 50ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದಾರೆ.



ಈ ಬಗ್ಗೆ ಹಲವಾರು ಖಾಸಗಿ ಚಾನೆಲ್ ಗಳು ಸುದ್ದಿ ಮಾಡಿದ್ದವು. ಇವರ ಪೇಮೆಂಟ್ ವಿಚಾರ ವೈರಲ್ ಆಗುತ್ತಿದ್ದಂತೆ ಹಲವಾರು ಕಾಮೆಂಟ್ಗಳು ಬರುತ್ತಿವೆ. ಕೆಲವು ಜನರು ರವಿತೇಜ ಅವರಿಗೆ ಅಷ್ಟು ಪೇಮೆಂಟ್ ಕಡಿಮೆಯೇ. ಬಜಾರ್ ನಲ್ಲಿ ಫೇಮಸ್ ಇದ್ದಾಗ ನಟರು ಕೋಟಿ ಕೋಟಿ ಸಂಭಾವನೆಯನ್ನು ಪಡೆದೇ ಪಡೆಯುತ್ತಾರೆ ಎಂದು ಹಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ರವಿತೇಜ ಅವರು ನಟ ಪ್ರಭಾಸ್ ಅವರ ಸಂಭಾವನೆಯನ್ನು ಕೂಡ ಮೀರಿಸಬಹುದು ಎಂದು ಕಮೆಂಟ್ ಮಾಡಿದ್ದಾರೆ. ರಾಮರಾವ್ ಸಿನಿಮಾವನ್ನು 20ರಿಂದ 25 ದಿನಗಳಲ್ಲಿ ಮುಗಿಸಿ ಕೊಡುವುದಾಗಿ ನಟ ರವಿತೇಜ ಮಾತು ಕೊಟ್ಟಿದ್ದು, ದಿನಕ್ಕೆ ಇವರ ಸಂಭಾವನೆ ಐವತ್ತು ಲಕ್ಷ ಎಂದರೆ ಈ ಸಿನಿಮಾದ ಚಿತ್ರೀಕರಣ ಮುಗಿಯುವಷ್ಟರಲ್ಲಿ ರವಿತೇಜ ಅವರು ಸುಮಾರು ಹತ್ತರಿಂದ ಹನ್ನೆರಡು ಕೋಟಿ ಸಂಭಾವನೆ ಪಡೆದಂತಾಗುತ್ತದೆ. ಈ ಹಿಂದೆ ಕ್ರ್ಯಾಕ್ ಸಿನಿಮಾ ಹಿಟ್ ಆಗುತ್ತದೆ ಎನ್ನುವ ನಂಬಿಕೆಯಿಲ್ಲದೆ ಕಡಿಮೆ ಸಂಭಾವನೆ ಪಡೆದು ಕೊಂಡಿದ್ದರಂತೆ.



ಆದರೆ ಸಿನಿಮಾ ಬಾಕ್ಸಾಫೀಸ್ ನಲ್ಲಿ ಮೊದಲ ವಾರವೇ ಕಲೆಕ್ಷನ್ ಹೆಚ್ಚಾಗುತ್ತಿದ್ದಂತೆ ಸಂಭಾವನೆಯನ್ನು 15 ರಿಂದ 18ಕೋಟಿಗೆ ಏರಿಸಿದ್ದಾರೆ ಎಂದು ಟಾಲಿವುಡ್ ಮಂದಿ ಮಾತನಾಡಿಕೊಂಡಿದ್ದರು. ಇದನ್ನು ತಿಳಿದ ನೆಟ್ಟಿಗರು ಸಿನಿಮಾ ಬಿಗ್ ಬಜೆಟ್ ಆಗುವುದಕ್ಕೆ ಈ ನಟನ ಡಿಮ್ಯಾಂಡ್ ಒಂದೇ ಸಾಕು ಎನ್ನುತ್ತಿದ್ದಾರೆ. ಇನ್ನು ರಾಮರಾವ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಶರತ್ ಅವರಿಗೆ ಇದು ಮೊದಲ ಸಿನಿಮಾ ಆಗಿರುವುದರಿಂದ ರವಿತೇಜ ಅವರು ಶರತ್ ಅವರಿಗೆ ತುಂಬಾ ಕೋ ಆಪರೇಟ್ ಮಾಡುತ್ತಿದ್ದಾರೆ. ಸುಧಾಕರ್ ಚೇರುಕುರಿ ಮತ್ತು ಆರ್ಟಿ ಟೀಮ್ ವರ್ಕ್ ಸಂಸ್ಥೆ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಾಮಾನ್ಯವಾಗಿ ಒಂದು ಸಿನಿಮಾಗೆ ನಟರು ಸಂಭಾವನೆಯನ್ನು ಮಾತನಾಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ ದಿನದ ಲೆಕ್ಕದಲ್ಲಿ ಸಂಭಾವನೆಯನ್ನು ನೀಡಲಾಗುತ್ತಿದೆ. ಆದರೆ ಇವೆಲ್ಲವೂ ಹೊಸದಾಗಿರುವ ಕಾರಣ ರವಿತೇಜ ಅವರು ಬೇಗನೆ ಶೂಟಿಂಗ್ ಮುಗಿಸಿ ಕೊಡುವುದಾಗಿ ಹೇಳಿದ್ದಾರಂತೆ.