ದೊಡ್ಡ ಮಟ್ಟದಲ್ಲಿ ಸೋಲು ಕಂಡ ಪ್ರಭಾಸ್ ಅವರ ರಾಧೆ ಶ್ಯಾಮ್ ಚಿತ್ರ, ಇಲ್ಲಿ ತನಕ ಗಳಿಸಿದ್ದೆಷ್ಟು ಗೊತ್ತೇ

ಬಾಹುಬಲಿ ಚಿತ್ರದ ಯಶಸ್ಸಿನ ನಂತರ ತೆಲುಗು ನಟ ಪ್ರಭಾಸ್ ಅವರ ಮಾರ್ಕೆಟ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿದೆ. ಇಡೀ ಭಾರತದಾದ್ಯಂತ ಪ್ರಭಾಸ್ ಅವರ ಹೆಸರು ಕೇಳಿ ಬರುತ್ತದೆ. ಅದೇ ರೀತಿ ಪ್ರಭಾಸ್ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದಾರೆ. ಇವರು ಮಾಡಿದ ಸಿನಿಮಾಗಳು ಫ್ಲಾಪ್ ಆಗುವುದು ಕಡಿಮೆ. ಇದೇ ಕಾರಣಕ್ಕೆ ನಿರ್ಮಾಪಕರು ಕೋಟಿ ಕೋಟಿ ಬಂಡವಾಳವನ್ನು ಪ್ರಭಾಸ್ ಅವರ ಮೇಲೆ ಸುರಿಯುತ್ತಾರೆ. ಏಕೆಂದರೆ ಇವರ ಸಿನಿಮಾಗಳಿಗೆ ಹಾಕಿದ ದುಡ್ಡು ವಾಪಸ್ ಬಂದೇ ಬರುತ್ತದೆ ಎಂಬ ಭರವಸೆ ಎಲ್ಲಾ ನಿರ್ದೇಶಕರು ಹಾಗೂ ನಿರ್ಮಾಪಕರಲ್ಲಿ ಇರುತ್ತದೆ. ಆದರೆ ಇತ್ತೀಚೆಗೆ ಪ್ರಭಾಸ್ ಹಾಗೂ ಪೂಜಾ ಹೆಗಡೆ ಒಟ್ಟಾಗಿ ನಟಿಸಿರುವ ರಾಧೇಶ್ಯಾಮ ಚಿತ್ರ ಎಲ್ಲ ಲೆಕ್ಕಾಚಾರವನ್ನು ಹುಸಿಗೊಳಿಸಿದೆ. ಹೌದು ರಾಧೇಶ್ಯಾಮ ಚಿತ್ರ ಮೊದಲಿನಿಂದಲೂ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಸಿನಿಮಾದ ಟ್ರೈಲರ್ ಹಾಗೂ ಪೋಸ್ಟರ್ ಗಳಿಂದ ಸಾಕಷ್ಟು ಕೂತೂಹಲವನ್ನು ಹುಟ್ಟುಹಾಕಿದ್ದ ಈ ಸಿನಿಮಾವನ್ನು ಪ್ರಭಾಸ್ ಅಭಿಮಾನಿಗಳು ಕಣ್ತುಂಬಿಕೊಳ್ಳಲು ಕಾದುಕುಳಿತಿದ್ದರು. ಆದರೆ ಚಿತ್ರ ಬಿಡುಗಡೆಯಾದ ನಂತರ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ ಸಾಕಷ್ಟು ಜನರ ರಿವ್ಯೂ ಕೆಳಮಟ್ಟದಲ್ಲಿತ್ತು. 300 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ರಾಧೇಶ್ಯಾಮ್ ಚಿತ್ರ ಮೊದಲ ದಿನ 80ಕೋಟಿ ರೂಪಾಯಿಯನ್ನು ಗಳಿಸಿತ್ತು. ಆದರೆ ಮೊದಲ ದಿನವೇ ಈ ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂ ಗಳು ಬಂದ ಕಾರಣದಿಂದ ಈ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿತು. ಬಾಹುಬಲಿ ಚಿತ್ರದ ಖ್ಯಾತಿಯ ನಂತರ ಇಡೀ ಭಾರತದಾದ್ಯಂತ ಮಾತ್ರವಲ್ಲದೆ ಇಂಟರ್ನ್ಯಾಷನಲ್ ಮಾರ್ಕೆಟ್ನಲ್ಲಿ ಪ್ರಭಾಸ್ ಅವರಿಗೆ ಹೆಸರು ಸಿಕ್ಕಿತ್ತು.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಭಾಸ್ ಅವರ ಚಿತ್ರಕ್ಕೆ ಎಷ್ಟೇ ಬಂಡವಾಳ ಹೂಡಿದರು ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ವಾಪಸ್ ಬಂದು ಬಿಡುತ್ತದೆ ಎನ್ನುವ ನಂಬಿಕೆ ನಿರ್ಮಾಪಕರಲ್ಲಿ ಇತ್ತು. ಆದರೆ ರಾಧೇಶ್ಯಾಮ ಚಿತ್ರಕ್ಕೆ 300 ಕೋಟಿ ಬಂಡವಾಳ ಹಾಕಿದ ಯುವಿ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ, ಹಾಕಿದ ದುಡ್ಡು ಕೂಡ ಕೈಗೆ ಬರುವ ಹಾಗೆ ಕಾಣಿಸುತ್ತಿಲ್ಲ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದೆ. ಸದ್ಯಕ್ಕೆ ನಿಧಾನಗತಿಯಲ್ಲಿ ಸಾಗುತ್ತಿರುವ ರಾಧೇಶ್ಯಾಮ ಚಿತ್ರ ಇಲ್ಲಿಯವರೆಗೆ ಒಟ್ಟು ಎರಡು 21 ಕೋಟಿ ರೂಪಾಯಿ ಗಳಿಸಿದೆ. ಬಹುಶಹ 300 ಕೋಟಿ ಕ್ಲಬ್ ಸೇರುವುದು ದೊಡ್ಡ ವಿಷಯವಾಗಿದೆ. ಏಕೆಂದರೆ ಇದೇ ತಿಂಗಳು 25ನೇ ತಾರೀಖು ಬಹುನಿರೀಕ್ಷಿತ ತ್ರಿಬಲ್ ಆರ್ ಚಿತ್ರ ತೆರೆಕಾಣಲಿದೆ. ತ್ರಿಬಲ್ ಆರ್ ಚಿತ್ರ ರಿಲೀಸ್ ಆದ ನಂತರ ರಾಧೇಶ್ಯಾಮ ಚಿತ್ರ ಕಾಲ್ಕಿಳಬೇಕಾಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈಗ ಸದ್ಯಕ್ಕೆ ಸುದ್ದಿಯಲ್ಲಿರುವ ವಿಷಯವೆಂದರೆ ನಟ ಪ್ರಭಾಸ್ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ತಮ್ಮ ರಿಯಲ್ ಲೈಫ್ ನಲ್ಲೂ ಕೂಡ ಹೀರೋ ಎಂಬುದು ಸಾಬೀತಾಗಿದೆ. ಹೌದು ಅದೇನೆಂದರೆ ರಾಧೇಶ್ಯಾಮ ಚಿತ್ರಕ್ಕೆ ನಟ ಪ್ರಭಾಸ್ ಅವರು ನೂರು ಕೋಟಿ ಸಂಭಾವನೆ ಪಡೆದಿದ್ದರಂತೆ. ಆದರೆ ಈ ಚಿತ್ರ ನಿರೀಕ್ಷೆಯಂತೆ ಕಲೆಕ್ಷನ್ ಮಾಡದ ಕಾರಣ ನಿರ್ಮಾಪಕರು ನಷ್ಟಕ್ಕೊಳಗಾಗಬಾರದೆಂದು ತಾವು ತೆಗೆದುಕೊಂಡ 100 ಕೋಟಿ ರೂಪಾಯಿಯಲ್ಲಿ 50 ಕೋಟಿ ರೂಪಾಯಿಯನ್ನು ನಿರ್ಮಾಪಕರಿಗೆ ವಾಪಸ್ ನೀಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ರಜನಿಕಾಂತ್ ಅವರು ಕೂಡ ತಮ್ಮ ಸಿನಿಮಾಗಳು ಸೋತಾಗ ಈ ರೀತಿ ನಿರ್ಮಾಪಕರ ಪರ ನಿಂತಿದ್ದರು ಎಂಬ ಸಾಕಷ್ಟು ಉದಾಹರಣೆಗಳಿವೆ.

%d bloggers like this: