ದೊಡ್ಡ ಮೊತ್ತದ ಆಫರ್ ತಿರಸ್ಕರಿಸಿದ ಅಪ್ಪು ಅವರ ಜೇಮ್ಸ್ ಚಿತ್ರತಂಡ, ಬಂದ ಆಫರ್ ಹಣ ಎಷ್ಟು ಗೊತ್ತೇ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರವನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜೇಮ್ಸ್ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ನಿಂದಲೇ ಥ್ರಿಲ್ ಆಗಿರುವ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು, ಸಿನಿಮಾ ನೋಡಲು ಕಾದು ಕುಳಿತಿದ್ದಾರೆ. ಜೇಮ್ಸ್ ಚಿತ್ರವು ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾದ್ದರಿಂದ ಈ ಚಿತ್ರದ ಮೇಲೆ ನಿರೀಕ್ಷೆಗಳು ನೂರೆಂಟಿವೆ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಜೇಮ್ಸ್ ಬಿಡುಗಡೆ ಆಗುತ್ತಿರುವುದರಿಂದ ಅಪ್ಪು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಪುನೀತ್ ಅವರ ಕೊನೆಯ ಸಿನಿಮಾವನ್ನು ಅವರ ಹುಟ್ಟುಹಬ್ಬದಂದು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಪಣತೊಟ್ಟಿತ್ತು.

ಈಗ ಆ ಸಮಯ ಬಂದಾಗಿದೆ. ಮಾರ್ಚ್ ಬಂದಾಗಿದೆ ಎಲ್ಲೆಲ್ಲೂ ಪುನೀತ್ ರಾಜಕುಮಾರ್ ಅಭಿನಯದ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದೆ. ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗುವುದಕ್ಕೂ ಮುನ್ನ ನಿರ್ದೇಶಕ ಬಹದ್ದೂರ್ ಚೇತನ್ ಅವರು ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಜೇಮ್ಸ್ ಚಿತ್ರದ ರಿಲೀಸ್ ಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇರುವುದರಿಂದ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಚಿತ್ರತಂಡವು ಭರ್ಜರಿ ತಯಾರಿ ನಡೆಸುತ್ತಿದೆ. ಈ ಹಿಂದೆ ಜೇಮ್ಸ್ ಸಿನಿಮಾದಿಂದ ಒಂದು ಸುದ್ದಿ ಹೊರಬಿದ್ದಿತ್ತು.

ಅದೇನೆಂದರೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಜೇಮ್ಸ್ ಚಿತ್ರವು ಯಾವ ಯಾವ ಸ್ಥಳಗಳಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿತ್ತು. ಹೌದು ಒಟ್ಟು 15 ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಈ ಮೂಲಕ ಪುನೀತ್ ಅವರ ಕೊನೆಯ ಸಿನಿಮಾವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸುವುದು ಜೇಮ್ಸ್ ಚಿತ್ರತಂಡದ ಉದ್ದೇಶ. ಜೇಮ್ಸ್ ಸಿನಿಮಾ ಜರ್ಮನಿ ಆಸ್ಟ್ರೇಲಿಯಾ, ಪೋಲ್ಯಾಂಡ್ ನೆದರ್ಲ್ಯಾಂಡ್, ಭಾರತ ಸೇರಿದಂತೆ 15 ದೇಶಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ವಿಷಯ ತಿಳಿದ ಅಭಿಮಾನಿಗಳ ಖುಷಿ ಹೆಚ್ಚಾಗಿದೆ. ಇದೀಗ ಜೇಮ್ಸ್ ಚಿತ್ರತಂಡದಿಂದ ಮತ್ತೊಂದು ಹೊಸ ಸುದ್ದಿ ಹೊರಬಿದ್ದಿದೆ. ಜೇಮ್ಸ್ ಸಿನೆಮಾ ಯಾವೆಲ್ಲಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎನ್ನುವ ಸಂಪೂರ್ಣ ಮಾಹಿತಿ ಬಿಡುಗಡೆಯಾಗಿದೆ.

ಜೇಮ್ಸ್ ಚಿತ್ರದ ಅಬ್ಬರ ಬಿಡುಗಡೆಗೂ ಮುನ್ನವೇ ಸಮುದ್ರದ ಅಲೆಯಂತೆ ಸಪ್ಪಳ ಮಾಡುತ್ತಿದೆ. ಜೇಮ್ಸ್ ಚಿತ್ರದ ತೂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿನಿಮಾ ವಿತರಕರು ಹೆಚ್ಚಿನ ಹಣ ನೀಡಿ ಜೇಮ್ಸ್ ಸಿನಿಮಾ ದಕ್ಕಿಸಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಹೀಗಾಗಿ ಜೇಮ್ಸ್ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ. ಮಾರ್ಚ್ 17 ಕ್ಕೆ ಜೇಮ್ಸ್ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ವಿತರಕರು ಸಿನಿಮಾಗಾಗಿ ಮುಗಿಬಿದ್ದಿದ್ದಾರೆ. ಜೇಮ್ಸ್ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130 ಕ್ಕೂ ಹೆಚ್ಚು ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಮಲ್ಟಿಫ್ಲೆಕ್ಸ್ ಗಳನ್ನು ಬಿಟ್ಟು ಕೇವಲ ಸಿಂಗಲ್ ಸ್ಕ್ರೀನ್ ನಲ್ಲಿಯೇ 130 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದೆ. ಬೆಂಗಳೂರು ಸೇರಿದಂತೆ ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ಉತ್ತರ ಕರ್ನಾಟಕ, ಶಿವಮೊಗ್ಗ ಸೇರಿದಂತೆ ಎಲ್ಲ ತಾಲೂಕುಗಳಲ್ಲೂ ಜೇಮ್ಸ್ ಚಿತ್ರ ರಿಲೀಸ್ ಆಗಲಿದೆ.

ಜೇಮ್ಸ್ ಚಿತ್ರವು ಮಾರ್ಚ್ 17 ಕ್ಕೆ ಬಿಡುಗಡೆಯಾಗುತ್ತಿರುವುದರಿಂದ, ಬೇರೆ ಯಾವ ಸಿನಿಮಾಗಳು ಅಂದು ರಿಲೀಸ್ ಆಗದೆ ಇರುವುದರಿಂದ ಜೇಮ್ಸ್ ಚಿತ್ರಕ್ಕೆ ಯಾವುದೇ ಪೈಪೋಟಿ ಇಲ್ಲ. ಜೇಮ್ಸ್ ಚಿತ್ರ ಬಿಡುಗಡೆಗೂ ಒಂದು ವಾರ ಮುನ್ನ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಧೆ ಶ್ಯಾಮ್ ಬಿಡುಗಡೆಯಾಗುತ್ತಿದೆ. ಜೇಮ್ಸ್ ಬಿಡುಗಡೆಯಾದ ಒಂದು ವಾರದ ನಂತರ ತ್ರಿಬಲ್ ಆರ್ ಸಿನಿಮಾ ಬಿಡುಗಡೆ ಆಗುತ್ತಿದೆ. ಹೀಗಾಗಿ ಮೊದಲ ವಾರ ಜೇಮ್ಸ್ ಕನ್ನಡದಲ್ಲಿ ಹೊಸ ದಾಖಲೆಯನ್ನೇ ಬರೆಯಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದಾರೆ. ಜೇಮ್ಸ್ ಚಿತ್ರಕ್ಕಾಗಿ ಬಿಕೆಟಿ ಬರೋಬ್ಬರಿ 12 ಕೋಟಿ ಆಫರ್ ನೀಡಲಾಗಿತ್ತು. ಕೇವಲ ಬೆಂಗಳೂರು ತುಮಕೂರು ಮತ್ತು ಕೋಲಾರ ಈ ಮೂರು ಪ್ರದೇಶಗಳ ವಿತರಣೆ ಸೇರಿ 12 ಕೋಟಿ ಆಫರ್ ಮಾಡಲಾಗಿತ್ತು.

ಆದರೆ ಈ ಸಿನಿಮಾದ ನಿರ್ಮಾಪಕ ಕಿಶೋರ್ ಈ ಆಫರ್ ತಿರಸ್ಕರಿಸುತ್ತಿದ್ದಾರೆ. ಅಪ್ಪು ಅವರು ನಮ್ಮೊಂದಿಗಿಲ್ಲ ಆದರೆ ಅಪ್ಪು ಅರ್ಧಕ್ಕೆ ಬಿಟ್ಟುಹೋದ ಜೇಮ್ಸ್ ಚಿತ್ರಕ್ಕೆ ಯಾವುದೇ ಮೋಸ ಆಗುವುದಿಲ್ಲ. ಅಪ್ಪು ಈ ಚಿತ್ರದ ಬೆನ್ನಿಗೆ ನಿಲ್ಲುತ್ತಾರೆ. ಅಪ್ಪು ಅವರನ್ನು ಕಳೆದುಕೊಂಡ ಕರುನಾಡು ಜೇಮ್ಸ್ ಚಿತ್ರದ ಮೂಲಕ ಅವರನ್ನು ನೋಡಲು ಕಾತುರದಿಂದ ಕಾಯುತ್ತಿದೆ. ಸಹಸ್ರಾರು ಕನ್ನಡಿಗರು ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾವನ್ನು ನೋಡಬೇಕು ಎಂದು ಮಿಡಿಯುತ್ತಿದೆ. ವಿಶ್ವದಾದ್ಯಂತ ಜೇಮ್ಸ್ ಸಿನಿಮಾವನ್ನು ಜನ ನೋಡುತ್ತಾರೆ ಎನ್ನುವ ನಿರೀಕ್ಷೆ ನಿರ್ಮಾಪಕರಿಗೆ ಇದೆ. ಇದೇ ಕಾರಣಕ್ಕೆ ಅಷ್ಟು ದೊಡ್ಡ ಆಫರನ್ನು ನಿರ್ಮಾಪಕರು ತಿರಸ್ಕರಿಸಿದ್ದಾರೆ.

%d bloggers like this: