ದೊಡ್ಡ ಪರದೆಯ ಮೇಲೆ ಮತ್ತೊಮ್ಮೆ ಒಂದಾಗುತ್ತಿದ್ದಾರೆ ವಿಜಯ್ ದೇವರಕೊಂಡ ಹಾಗು ನಟಿ ರಶ್ಮಿಕಾ ಮಂದಣ್ಣ ಅವರು

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಳ್ಳಲಿದ್ದಾರಂತೆ. ಈ ಸುದ್ದಿ ಇದೀಗ ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತೆಲುಗಿನ ಯಶಸ್ವಿ ತಾರಾ ಜೋಡಿ. ಈ ಜೋಡಿ ತೆಲುಗು ಸಿನಿ ಪ್ರೇಕ್ಷಕರನ್ನ ಸಖತ್ ಮೋಡಿ ಮಾಡಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗೀತಾ ಗೋವಿಂದಂ ಚಿತ್ರ ಸೂಪರ್ ಹಿಟ್ ಆದ ನಂತರ ಹೆಚ್ಚಾಗಿ ಜೊತೆಯಾಗಿ ಓಡಾಡುತ್ತಿದ್ದರು. ಇವರಿಬ್ಬರ ಬಗ್ಗೆ ಅನೇಕ ಬಾರಿ ಗಾಸಿಪ್ ಕೂಡ ಹರಿದಾಡಿತ್ತು. ಆದರೆ ಈ ಬಗ್ಗೆ ರಶ್ಮಿಕಾ ಮಂದಣ್ಣ ಆಗಲೀ ವಿಜಯ ದೇವರಕೊಂಡ ಆಗಲೀ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ರಶ್ಮಿಕಾ ಮಂದಣ್ಣ ವಿಜಯ್ ದೇವರ ಕೊಂಡ ಅ‌ಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಚಿತ್ರದ ಪೋಸ್ಟರ್ ವೊಂದನ್ನ ಶೇರ್ ಮಾಡಿಕೊಂಡಿದ್ದರು.

ಅಷ್ಟೇ ಅಲ್ಲದೆ ವಿಜಯ್ ದೇವರಕೊಂಡ ನನಗೆ ಸ್ಪೂರ್ತಿ ಅಂತಾನೂ ಬರೆದುಕೊಂಡಿದ್ರು. ರಶ್ಮಿಕಾ ಮಂದಣ್ಣ ಅವರ ಈ ಪೋಸ್ಟ್ ಸೋಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಇನ್ನು ಇದೀಗ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಹೌದು ಸೌತ್ ಸಿನಿರಂಗದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರು ನಿರ್ಮಾಣ ಮಾಡುತ್ತಿರುವ ಜನಗಣ ಮನ ಚಿತ್ರದಲ್ಲಿ ವಿಜಯ್ ದೇವರಕೊಂಡ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಈಗ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಹಾಡೊಂದರಲ್ಲಂತೆ. ಈ ಜನಗಣಮನ ಚಿತ್ರದಲ್ಲಿ ಸ್ಪೆಷಲ್ ಹಾಡೊಂದಿದೆಯಂತೆ.

ಇದರಲ್ಲಿ ವಿಜಯ್ ದೇವರಕೊಂಡ ಜೊತೆ ಹೆಜ್ಜೆ ಹಾಕಲು ರಶ್ಮಿಕಾ ಮಂದಣ್ಣ ಇರಲಿದ್ದಾರೆ ಎಂದು ಚಿತ್ರತಂಡದ ಮೂಲಗಳಿಂದ ತಿಳಿದುಬಂದಿದೆ. ಇದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಅಂತಾನೇ ಹೇಳಬಹುದು. ತಮ್ಮ ನೆಚ್ಚಿನ ನಟ ನಟಿ ಮತ್ತೆ ಕಾಣಿಸಿಕೊಳ್ಳಬೇಕು ಎಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದರು. ಇದೀಗ ಜನಗಣಮನ ಚಿತ್ರದ ಮೂಲಕ ಆ ಒಂದು ಆಸೆ ಈಡೇರುತ್ತಿದೆ. ಒಟ್ಟಾರೆಯಾಗಿ ರಶ್ಮಿಕಾ ಮಂದಣ್ಣ ಅವರಿಗೆ ಮತ್ತೆ ವಿಜಯ್ ದೇವರಕೊಂಡ ಅವರ ಜೊತೆ ತೆರೆ ಹಂಚಿಕೊಳ್ಳಲು ಅವಕಾಶ ಸಿಕ್ಕಿರುವುದರಿಂದ ಅವರಿಗೂ ಕೂಡ ಸಖತ್ ಖುಷಿಯಾಗಿದೆ.

%d bloggers like this: