ನಿಮಗೆಲ್ಲಾ ಗೊತ್ತಿರುವ ಹಾಗೆ ಈವರ್ಷ ಅಮೇರಿಕಾ ದೇಶಕ್ಕೆ ಮುಖ್ಯವಾದ ವರ್ಷ ಯಾಕೆಂದರೆ ಇದೆ ವರ್ಷ ಅಮೆರಿಕಾದ ರಾಜಕೀಯ ಬದಲಾವಣೆ ಆಗಿರುವ ವರ್ಷ. ಕಳೆದ ನಾಲ್ಕು ವರ್ಷದಿಂದ ಅಮೇರಿಕಾ ಅಧ್ಯಕ್ಷನಾಗಿ ಕೆಲಸ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ಹಾಗು ಬರಾಕ್ ಒಬಾಮ ಅವರ ಆಳ್ವಿಕೆಯಲ್ಲಿ ಡೆಮಾಕ್ರೆಟಿಕ್ ಪಾರ್ಟಿಯಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದ ಜೋ ಬೈಡೆನ್ ಅವರ ನಡುವೆ ಅಧ್ಯಕ್ಷ ಕುರ್ಚಿಗಾಗಿ ಸೆಣಸಾಟ ನಡೆದಿತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಬೈಡೆನ್ ಅವರು ದೊಡ್ಡ ಮಟ್ಟದಲ್ಲಿ ಗೆದ್ದು ಹೊಸ ಅಮೇರಿಕಾ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅಮೇರಿಕಾ ಚುನಾವಣೆಯೇ ಒಂದು ವಿಚಿತ್ರ ಅದನ್ನು ಅರ್ಥ ಮಾಡಿಕೊಳ್ಳಲು ಬೇರೆ ದೇಶದವರಿಗೆ ತುಂಬಾ ಕಷ್ಟ ಆದರೂ ಸಾರಾಂಶ ಹೇಳಬೇಕೆಂದರೆ ಬೈಡೆನ್ ಹಾಗು ಟ್ರಂಪ್ ಅವರಿಗೆ ಗೆಲ್ಲಲು 220 ಎಲೆಕ್ಟೊರಲ್ ಮತಗಳು ಬೇಕಿದ್ದವು, ಡೊನಾಲ್ಡ್ ಟ್ರಂಪ್ ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಲ್ಲಿ ತುಂಬಿತ್ತು ಆದರೆ ಬೈಡೆನ್ ಅವರು ಬರೋಬ್ಬರಿ ಮುನ್ನೂರಕ್ಕೂ ಅಧಿಕ ಮತ ಪಡೆದು ಭರ್ಜರಿ ಜಯಭೇರಿ ಗಳಿಸಿದರು. ಚುನಾವಣೆಯ ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿದ್ದ ಡೊನಾಲ್ಡ್ ಟ್ರಂಪ್ ಅವರು ಮರು ಮತ ಎಣಿಕೆಗೆ ಆಗ್ರಹಿಸಿದ್ದಾರೆ.

ಈ ನಡುವೆ ವೈಟ್ ಹೌಸನ್ನು ತೊರೆಯಲು ಟ್ರಂಪ್ ಅವರು ಹಠ ಮಾಡುತ್ತಿದ್ದು ಬೈಡೆನ್ ಗೆದ್ದಿದ್ದಾರೆ ಎಂದು ಖಾತ್ರಿಯಾದ ಮೇಲೆಯೇ ವೈಟ್ ಹೌಸ್ ಬಿಡುವುದಾಗಿ ಹೇಳಿದ್ದಾರೆ. ಈಗ ಇನ್ನೊಂದು ಕುತೂಹಲ ಅಂಶ ತಿಳಿದಿದ್ದು ನಿನ್ನೆ ನಡೆದ ಮರು ಮತ ಎಣಿಕೆಯಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆಯಾಗಿದೆ. ತಾವೇ ಮರುಮತ ಎಣಿಕೆಗೆ ಆಗ್ರಹಿಸಿ ಮತಗಳನ್ನು ಕಳೆದುಕೊಂಡಂತಾಗಿದೆ. ಹೌದು ಅಮೆರಿಕಾದ ಮಿಲ್ವಾಕಿ ನಗರದಲ್ಲಿ ಬೈಡೆನ್ ಅವರಿಗೆ ಮೊದಲಿಗಿಂತ 132ಮತಗಳು ಹೆಚ್ಚಿಗೆ ಬಂದಿದ್ದು ಟ್ರಂಪ್ ಅವರ ಮತ ಗಳಿಕೆಯಲ್ಲಿ 132ಮತಗಳು ಜಾರಿವೆ, ಈಬಗ್ಗೆ ಅಲ್ಲಿನ ಚುನಾವಣಾ ಆಯೋಗ ಅಧಿಕೃತವಾಗಿ ಹೇಳಿದ್ದು ಬೈಡೆನ್ ಅವರ ಗೆಲುವನ್ನು ಖಚಿತಪಡಿಸಿದೆ. ನಿನ್ನೆ ಮರುಮತ ಎಣಿಕೆ ಆಗಿರುವ ಈ ಮಿಲ್ವಾಕಿ ಕ್ಷೇತ್ರದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಐವತ್ತಕ್ಕಿಂತ ಕಡಿಮೆ ಪ್ರತಿಶತಃ ಮತಗಳು ಬಂದಿದ್ದು ಈ ಕ್ಷೇತ್ರದಲ್ಲಿ ಬೈಡೆನ್ ಅವರು ಭರ್ಜರಿಯಾಗಿ ವಿಜಯ ಸಾಧಿಸಿದ್ದಾರೆ.