ಡ್ರೋನ್ ಮೂಲಕ ತಾಳಿ, ಉಡುಪಿಯಲ್ಲೊಂದು ವಿಶೇಷ ಡ್ರೋನ್ ಮದುವೆ

ನಮ್ಮ ಹಿಂದೂ ಸಂಪ್ರದಾಯದಂತೆ ಸಾಮಾನ್ಯವಾಗಿ ಮದುವೆಯಲ್ಲಿ ಮಧುಮಗನಿಗೆ, ಪುರೋಹಿತರು ಮಂಗಳ ಸೂತ್ರವನ್ನು, ಕಲ್ಯಾಣ ಮಂಟಪದಲ್ಲಿ ನೆರೆದಿರುವ ಹಿತೈಷಿಗಳು, ಗುರು ಹಿರಿಯರು, ಸಂಬಂಧಿಕರ ಆಶೀರ್ವಾದ ಮಾಡಿಸಿ ತದನಂತರ ಪುರೋಹಿತರು ಆ ಮಂಗಳ ಸೂತ್ರಕ್ಕೆ ನಮಸ್ಕರಿಸಿ ಸಂಸ್ಕೃತದ ಶ್ಲೋಕವಾದ ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇತ್ರಂಬಕೇ ಗೌರಿ ನಾರಾಯಣೀ ನಮೋಸ್ತುತೇ ಎಂಬ ಶ್ಲೋಕದೊಂದಿಗೆ ಆಶೀರ್ವದಿಸಿ ವರನಿಗೆ ನೀಡಿ ವಧುವಿಗೆ ತಾಳಿ(ಮಂಗಳಸೂತ್ರ) ಕಟ್ಟಿಸುವುದು ನಮ್ಮ ಹಿಂದೂ ಸಂಪ್ರದಾಯ, ಪದ್ದತಿಯಾಗಿದೆ. ಆದರೆ, ಉಡುಪಿ ಜಿಲ್ಲೆಯ ಕಾರ್ಕಾಳ ತಾಲ್ಲೂಕಿನ ಮಿಯಾರ್ ನಲ್ಲಿ ವಿಚಿತ್ರವಾದ ವಿಶಿಷ್ಟ ಘಟನೆಯೊಂದು ನಡೆದಿದೆ.

ಹೌದು ಇದು ಮಧು ಮಗನ ಇಚ್ಚೆಯೋ ಅಥವಾ ಅಲ್ಲಿನ ಪದ್ದತಿಯೋ, ಇಲ್ಲಾ ಸಂಸ್ಕೃತಿಗೆ ವಿರೋಧವೋ ಸ್ಪಷ್ಟವಾಗಿ ತಿಳಿದಿಲ್ಲ. ಅಸಲಿಗೆ ಮಿಯಾರ್ ನಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ವರನಿಗೆ ಡ್ರೋಣ್ ಮೂಲಕ ಮಂಗಳ ಸೂತ್ರ ತಲುಪಿಸಿ ವಧುವಿಗೆ ತಾಳಿ ಕಟ್ಟಿಸುವ ಪ್ರಸಂಗ ನಡೆದಿದೆ. ಈ ವೀಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ. ದೈವಾಂಶದಂತೆ ಕಾಣುವ ಅರಿಶಿನದ ಕೊಂಬು ಸೇರಿಸಿ ತಯಾರಿಸಿರುವ ಮಂಗಳಸೂತ್ರದ ಮಹತ್ವ ಅರಿಯದೇ ಅದನ್ನು ಆಲಸ್ಯ ಮಾಡಿ ಮನರಂಜನೆಯ ವಸ್ತು ಎಂಬಂತೆ ನೊಡಿ ಮಂಗಳಸೂತ್ರವನ್ನು ಅಗೌರವಿಸಲಾಗಿದೆ ಎಂದು ಹಲವರು ಈ ಮದುವೆಯ ಕುಟುಂಬದವರನ್ನು ತರಾಟೆಗೆ ತೆಗೆದುಕೊಂಡರೆ ಇನ್ನು ಕೆಲವರು ಈ ವಿಶಿಷ್ಟ ಮದುವೆ ನೋಡಿ ಖುಷಿ ಪಟ್ಟಿದ್ದಾರೆ.

%d bloggers like this: