ದುಬಾರಿ ಬೆಲೆಯ ಐಷಾರಾಮಿ ಕಾರಿನ ಮಾಲೀಕನಾದ ಆರ್ಸಿಬಿ ವೇಗಿ ಸಿರಾಜ್

ತಂದೆ ಆಟೋ ಚಾಲಕ, ಮಗ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ! ತನ್ನ ಪ್ರತಿಭೆಯಿಂದ ಗೆದ್ದು ಬಿಎಂಡಬ್ಲು ಕಾರ್ ಖರೀದಿ. ಹೌದು ಇತ್ತೀಚೆಗೆ ಭಾರತ ಆಸ್ಟ್ರೇಲಿಯಾ ವಿರುದ್ದ ನಡೆದ ಟೆಸ್ಟ್ ಕ್ರಿಕೆಟ್ ನಲ್ಲಿ ಅಮೋಘವಾದ ವಿಜಯ ಸಾಧಿಸಿ, ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೊಹಮ್ಮದ್ ಸಿರಾಜ್ ಇದೀಗ ದೇಶದಾದ್ಯಂತ ಅಪಾರ ಜನ ಮನ್ನಣೆ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಡೆಯುವಾಗ ಸಿರಾಜ್ ಅವರ ತಂದೆ ನಿಧನರಾದರು, ಆದರೂ ಕೂಡ ಕೊನೆಯ ಬಾರಿಗೆ ತಂದೆಯ ಮುಖವನ್ನು ನೋಡದೇ, ತನ್ನ ತಂದೆಯ ಕನಸನ್ನು ನನಸು ಮಾಡಲು ಗಬ್ಬಾ ಮೈದಾನದಲ್ಲಿ ಹೋರಾಡಿದರು. ಅದರಂತೆ ಎಲ್ಲಾ ಯುವ ಆಟಗಾರರ ಪರಿಶ್ರಮದಿಂದಾಗಿ ಭಾರತವು, ಬಲಿಷ್ಠ ತಂಡವಾಗಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ವಿಜಯಭೇರಿ ಸಾಧಿಸಿ ಇತಿಹಾಸ ನಿರ್ಮಾಣ ಮಾಡಿತು.

ಇದೀಗ ಮೊಹಮ್ಮದ್ ಸಿರಾಜ್ ಸುದ್ದಿಯಾಗಿರುವುದು ಬರೋಬ್ಬರಿ 70 ಲಕ್ಷ ಮೌಲ್ಯದ ಬಿಎಂಡಬ್ಲು ಕಾರು ಖರೀದಿ ಮಾಡುವ ಮೂಲಕ, ಹೌದು ಸ್ಟಾರ್ ಕ್ರಿಕೆಟಿಗ ಒಬ್ಬ ಬಿಎಂಡಬ್ಲು ಕಾರು ಖರೀದಿ ಮಾಡುವುದು ಸರ್ವೇ ಸಾಮಾನ್ಯ ಇದರಲ್ಲಿ ವಿಶೇಷ ಏನಿದೆ ಎಂದು ಹೇಳಬಹುದು ಆದರೆ ಮೊಹಮ್ಮದ್ ಸಿರಾಜ್ ಸ್ಥಿತಿವಂತರ ಕುಟುಂಬದಿಂದ ಬಂದವರಲ್ಲ, ಅವರು ಬಡ ಕುಟುಂಬದಲ್ಲಿ ಅರಳಿದ ಪ್ರತಿಭೆ. ಕಡು ಕಷ್ಟಗಳ ಕುಲುಮೆಯಲ್ಲಿ ಬೆಂದು, ಬೆಂಕಿಯ ಕಿಡಿಯಲ್ಲಿ ಮಿಂಚಿದಂತೆ ಸಿರಾಜ್ ತನ್ನ ಪ್ರತಿಭೆಯ ಮೂಲಕ ಇಂದು ದೇಶಾದಾದ್ಯಂತ ಮನೆ ಮಾತಾಗಿದ್ದಾರೆ. ಸಿರಾಜ್ ಅವರ ತಂದೆ ಸಾಮಾನ್ಯ ಆಟೋ ಚಾಲಕ ಎಂಬುದು ಗಮನಾರ್ಹವಾದ ವಿಷಯವಾಗಿದೆ.

ಕೇವಲ ಒಬ್ಬ ಆಟೋ ಚಾಲಕ ಮಗ ಇಂದು ಕ್ರಿಕೆಟ್ ಕ್ಷೇತ್ರದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದಲ್ಲದೆ, ಭಾರತ ತಂಡವನ್ನು ಗೆಲ್ಲುಸುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಅಭಿನಂದನಾರ್ಹ ಎಂದು ಹೇಳಬಹುದಾಗಿದೆ. ಕೆಸರಲ್ಲಿ ಕಮಲದ ಹೂವು ಅರಳುವ ಹಾಗೇ ಮೊಹಮ್ಮದ್ ಸಿರಾಜ್ ಬಡ ಕುಟುಂಬದಲ್ಲಿ ಜನಿಸಿ ಇಂದು ಐಷರಾಮಿ ಕಾರನ್ನು ಖರೀದಿಸಿ, ಆದರ್ಶಮಯ ಬದುಕನ್ನು ರೂಪಿಸಿಕೊಂಡಿರುವುದು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

%d bloggers like this: