ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ನಟ ರಿಷಭ್ ಶೆಟ್ಟಿ ಅವರು

ಸ್ಯಾಂಡಲ್ ವುಡ್ ಬೆಲ್ ಬಾಟಮ್ ಹೀರೋ ಇದೀಗ ಐಷಾರಾಮಿ ಕಾರ್ ಖರೀದಿ ಮಾಡಿ ಭಾರಿ ಸುದ್ದಿ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪ್ರತಿಭೆ ಅನ್ನೋದು ಇದ್ದರೆ ಏನ್ ಬೇಕಾದ್ರು ಮಾಡ್ಬೋದು ಅನ್ನೋದನ್ನ ಸಾಧಿಸಿ ತೋರಿಸಿದವರಲ್ಲಿ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಒಬ್ಬರು. ರಿಷಬ್ ಶೆಟ್ಟಿ ಸದ್ಯಕ್ಕೆ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಇದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಿಷಬ್ ಶೆಟ್ಟಿ ಕಿರಿಕ್ ಪಾರ್ಟಿ ಚಿತ್ರ ನಿರ್ದೇಶನ ಮಾಡಿ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಾರೆ. ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ಬಿಗ್ ಸಕ್ಸಸ್ ಕಂಡ ರಿಷಬ್ ಶೆಟ್ಟಿ ಕಾಸ್ಟ್ಯುಮ್ ಡಿಸೈನರ್ ಆದ ಪ್ರಗತಿ ಶೆಟ್ಟಿ ಅವರನ್ನ ಪ್ರೀತಿಸಿ ಕುಟುಂಬದವರ ಸಮಕ್ಷಮದಲ್ಲಿ ಮದುವೆ ಆಗುತ್ತಾರೆ.

ತದ ನಂತರ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಕಾಸರಗೋಡು ಚಿತ್ರ ನಿರ್ದೇಶನಕ್ಕೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಹೀಗೆ ಜಯತೀರ್ಥ ಅವರ ಬೆಲ್ ಬಾಟಮ್ ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ ರಿಷಭ್ ಶೆಟ್ಟಿ ನಟನೆಯಲ್ಲಿಯೂ ಕೂಡ ಗೆದ್ದು ತಾನು ಸಕಲಾಕಲಾ ವಲ್ಲಭ ಅನ್ನೋದನ್ನ ನಿರೂಪಿಸಿಕೊಳ್ಳುತ್ತಾರೆ. ಬೆಲ್ ಬಾಟಮ್ ಚಿತ್ರದಲ್ಲಿ ನಾಯಕ ನಟರಾಗಿ ಯಶಸ್ಸು ಗಳಿಸಿದ ರಿಷಭ್ ಶೆಟ್ಟಿ ಇದಾದ ನಂತರ ಒಂದಷ್ಟು ಪ್ರಯೋಗಾತ್ಮಕ ಚಿತ್ರ ಮಾಡಿ ಸ್ಯಾಂಡಲ್ ವುಡ್ ವಿಭಿನ್ನ ನಿರ್ದೇಶಕ ಎಂದು ಹೆಸರು ಮಾಡುತ್ತಾರೆ. ಇದೀಗ ಹರಿ ಕಥೆ ಅಲ್ಲ ಗಿರಿ ಕಥೆ ಚಿತ್ರ ರಿಲೀಸ್ ಆಗಿದ್ದು ಜ್ಯೂನಿಯಲ್ ಮೊನಾಲಿಸಾ ಸಾಂಗ್ ಸಖತ್ ಸೂಪರ್ ಹಿಟ್ ಆಗಿದ್ದು, ಈ ಹಾಡಿನಲ್ಲಿ ರಿಷಭ್ ಶೆಟ್ಟಿ ಅವರ ತುಂಟತನ ತರ್ಲೆ ಸಖತ್ ಮೋಡಿ ಮಾಡಿ ಸಿನಿಮಾ ಕೂಡ ಸಿನಿ ಪ್ರೇಕ್ಷಕರನ್ನ ರಂಜಿಸಿದೆ.

ಈ ಚಿತ್ರದ ಸಕ್ಸಸ್ ಕಂಡ ಬೆನ್ನಲ್ಲೇ ರಿಷಭ್ ಶೆಟ್ಟಿ ಐಷಾರಾಮಿ ದುಬಾರಿ ಬೆಲೆಯ ಆಡಿ ಕ್ಯೂ ಸೆವೆನ್ ಕಾರನ್ನ ಖರೀದಿ ಮಾಡಿದ್ದಾರೆ. ಈ ಆಡಿ ಕ್ಯೂ ಸೆವೆನ್ ಕಾರು ಇದೀಗ ಸಿನಿಮಾ ಸೆಲೆಬ್ರಿಟಿಗಳ ಫೇವರೇಟ್ ಕಾರ್ ಆಗಿದೆ. ಈ ಕಾರಿನ ಬೆಲೆ ಬರೋಬ್ಬರಿ ಒಂದು ಕೋಟಿ. ಇನ್ನು ಆಡಿ ಕ್ಯೂ ಸೆವೆನ್ ಕಾರನ್ನ ಖರೀದಿ ಮಾಡಿರುವ ರಿಷಭ್ ಶೆಟ್ಟಿ ತಮ್ಮ ಮಡದಿ ಪ್ರಗತಿ ಶೆಟ್ಟಿ ಮತ್ತು ಇಬ್ಬರು ಮುದ್ದಾದ ಮಕ್ಕಳೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ರಿಷಭ್ ಅಭಿಮಾನಿಗಳು ಏನ್ ಶೆಟ್ರೇ ಹೊಸ ಕಾರು ಅನ್ನೋ ಒಂದಷ್ಟು ಚುಟುಕು ಹಾಸ್ಯದೊಂದಿಗೆ ವಿಶ್ ಮಾಡಿದ್ದಾರೆ. ಇನ್ನು ನಟ ಕಮ್ ನಿರ್ದೇಶಕ ರಿಷಭ್ ಶೆಟ್ಟಿ ಇದೀಗ ಕಾಂತಾರಾ, ಬೆಲ್ ಬಾಟಮ್2, ಮಹನಿಯರೇ ಮಹಿಳೆಯರೇ ಅಂತಹ ಒಂದಷ್ಟು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ.

%d bloggers like this: