ದುಬಾರಿ ಬೆಲೆಯ ಕಾರು ಖರೀದಿಸಿದ ಕನ್ನಡ ಕಿರುತೆರೆಯ ನಟಿ

ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೂಪರ್ ಹಿಟ್ ಧಾರಾವಾಹಿ ಎಂದರೆ ಅದು ರಾಮಾಚಾರಿ ಸೀರಿಯಲ್. ಇತ್ತೀಚಿಗಷ್ಟೇ ತನ್ನ ಪ್ರಸಾರವನ್ನು ಶುರುಮಾಡಿದ ರಾಮಾಚಾರಿ ಆರಂಭದಿಂದಲೂ ಸಾಕಷ್ಟು ಕುತೂಹಲಗಳಿಂದ ಜನರನ್ನು ಆಕರ್ಷಿಸುತ್ತಿದೆ. ಈಗಾಗಲೇ ಈ ಧಾರಾವಾಹಿಯ ಸನ್ನಿವೇಶಗಳು ಹಾಗೂ ತಿರುವುಗಳಿಂದ ಎಲ್ಲರ ಮನಗೆದ್ದಿರುವ ಈ ಧಾರಾವಾಹಿ ಟಿಆರ್ಪಿ ನಲ್ಲಿ ಟಾಪ್ ಸ್ಥಾನ ಗಿಟ್ಟಿಸಿಕೊಳ್ಳಲು ಓಡುತ್ತಿದೆ. ಸದ್ಯಕ್ಕೆ ಸುದ್ದಿಯಲ್ಲಿರುವ ವಿಷಯವೆಂದರೆ ರಾಮಾಚಾರಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಟಿ ಅಂಜಲಿ ಅವರ ಮನೆಗೆ ಹೊಸ ಗೆಸ್ಟ್ ಒಬ್ಬರ ಆಗಮನವಾಗಿದೆ. ರಾಮಾಚಾರಿ ಸೀರಿಯಲ್ನಲ್ಲಿ ನಾಯಕನಟನಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ರಾಮಾಚಾರಿಯ ತಾಯಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಅಂಜಲಿ. ಈ ಧಾರಾವಾಹಿಯಲ್ಲಿ ಒಬ್ಬ ಸಂಪ್ರದಾಯಸ್ಥ ಕುಟುಂಬದ ಮಹಿಳೆಯಾಗಿ ಕಾಣಿಸಿಕೊಂಡಿರುವ ಅಂಜಲಿ ಅವರು ತಮ್ಮ ರಿಯಲ್ ಲೈಫ್ ನಲ್ಲಿ ಸಕ್ಕತ್ ಬ್ಯೂಟಿಫುಲ್ ಹಾಗೂ ಚಾರ್ಮಿಂಗ್ ಲೇಡಿ ಆಗಿದ್ದಾರೆ.

ನಟಿ ಅಂಜಲಿ ಅವರ ಮನೆಗೆ ಯಾರು ಬಂದಿದ್ದಾರೆ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ ಎಂದು ಯೋಚಿಸುತ್ತಿದ್ದೀರಾ, ಮುಂದೆ ಓದಿ. ನೇತ್ರಾವತಿ ಹಾಗೂ ರಾಮಾಚಾರಿ ಧಾರಾವಾಹಿಗಳ ಮೂಲಕ ಎಲ್ಲೆಡೆ ಮಿಂಚುತ್ತಿರುವ ನಟಿ ಅಂಜಲಿ ಅವರು ಇತ್ತೀಚೆಗೆ ತಮ್ಮ ಮನೆಗೆ ಹೊಸ ಬ್ರ್ಯಾಂಡ್ ಕಾರೊಂದನ್ನು ಖರೀದಿಸಿದ್ದಾರೆ. ಹೌದು ಬಿಎಮ್ ಡಬ್ಲು ಎಕ್ಸ್1 ಎಂಬ ಕಾರನ್ನು ತಮ್ಮ ಮನೆಗೆ ಅಂಜಲಿ ಅವರು ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟಿ ಅಂಜಲಿ ಅವರು ತಮ್ಮ ಕಾರನ್ನು ಮನೆಗೆ ವೆಲ್ಕಮ್ ಮಾಡುವ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ತಮ್ಮ ಆಸೆಯಂತೆ ಒಂದು ಬ್ರಾಂಡ್ ಕಾರನ್ನು ಕೊಂಡುಕೊಂಡಿರುವ ನಟಿ ಅಂಜಲಿ ಅವರು ಸದ್ಯಕ್ಕೆ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

%d bloggers like this: