ದುಬೈಯಿಂದ ಬೆಂಗಳೂರಿಗೆ ಬಂತು ಎಂಟಿಬಿ ನಾಗರಾಜ್ ಅವರ ದುಬಾರಿ ಕಾರು ಬೆಲೆ ಎಷ್ಟು ಕೋಟಿ ಗೊತ್ತೆ

ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದ ರಾಜಕಾರಣಿ ಸಚಿವ ಎಂ ಟಿ ಬಿ ನಾಗರಾಜ್ ಅವರ ಮನೆಗೆ ದುಬಾರಿ ವಸ್ತು ಒಂದು ಬಂದಿದೆ, ಹೌದು ಕಳೆದ ವರ್ಷ ಎಂಟಿಬಿ ನಾಗರಾಜ್ ಅವರು ಬರೋಬ್ಬರಿ 12 ಕೋಟಿ ರೂಪಾಯಿ ಬೆಲೆಯ ರಾಲ್ಸ್ ರಾಯ್ಸ್ ಕಾರ್ ಅನ್ನು ಕೊಂಡು ಎಲ್ಲರೂ ಬೆರಗಾಗುವಂತೆ ಮಾಡಿದ್ದರು. ಬಿಳಿಬಣ್ಣದ ರಾಲ್ಸ್ ರಾಯ್ಸ್ ಎಂಬ ಬ್ರಿಟಿಷ್ ಕಂಪನಿ ಕಾರು ಎಂಟಿಬಿ ನಾಗರಾಜ್ ಅವರ ಮನೆ ಸೇರಿತ್ತು. ಈ ಕಾರನ್ನು ಭಾರತದಲ್ಲಿ ಮೊದಲು ಖರೀದಿ ಮಾಡಿದ್ದು ಇದೇ ಸಚಿವ ಎಂಟಿಬಿ ನಾಗರಾಜ್ ಅವರು.

ಈಗ ಇನ್ನೊಂದು ವಿಷಯವೇನೆಂದರೆ ಎಂಟಿಬಿ ನಾಗರಾಜ್ ಅವರ ಮನೆಗೆ ಮತ್ತೊಂದು ದುಬಾರಿ ಕಾರು ಎಂಟ್ರಿ ಯಾಗಿದ್ದು ಇದರ ಬೆಲೆ ಹಾಗೂ ವಿವರವನ್ನು ಕೆಳಗಡೆ ನೋಡಿರಿ. ಪ್ರತಿಷ್ಠಿತ ಇಟಲಿ ಕಂಪನಿ ಫೆರಾರಿ ಕಾರು ಇದಾಗಿದ್ದು ಇದರ ಹೆಸರು F8 ಟ್ರಿಬ್ಯೂಟೋ ಎಂದು. 2020 ರ ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ ಈ ಕಾರು ಬಿಡುಗಡೆಯಾಗಿದ್ದು ಈ ಕಾರ್ಯಕಾರಿ ಕಂಪನಿಯ ಪ್ರತಿಷ್ಠಿತ ಕಾರಾಗಿದೆ.

ಈ ಕಾರು ವಿಎಚ್ ಇಂಜಿನ್ ಹೊಂದಿದ್ದು ಕೇವಲ ಮೂರು ಸೆಕೆಂಡ್ 0-100 ಕಿಲೋಮೀಟರ್ ಚಲಿಸುತ್ತದೆ. ಈ ಕಾರು ನಾಗರಾಜ್ ಅವರು ದುಬೈನಿಂದ ತರಿಸಿಕೊಂಡಿದ್ದು ದುಬೈನಿಂದ ಮುಂಬೈ ಮೂಲದ ಫೆರಾರಿ ಶೋರೂಮ್ ಇಂದ ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ನೀಲಿಬಣ್ಣದ ಈ ಕಾರಿನ ಬೆಲೆ ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಆದರೆ ಬೇರೆ ದೇಶದಿಂದ ತರಿಸಿಕೊಂಡಿದ್ದ ರಿಂದ ಟ್ಯಾಕ್ಸ್ ಎಲ್ಲಾ ಸೇರಿಸಿ ಆರು ಕೋಟಿ ರೂಪಾಯಿಗಳು ಆಗಬಹುದು.

%d bloggers like this: