ದುಬೈನ ಪ್ರತಿಷ್ಠಿತ ಗೋಲ್ಡನ್ ವೀಸಾ ಪಡೆದ ದಕ್ಷಿಣ ಭಾರತದ ನಟಿ

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೀನಾ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಫೇಮಸ್ ನಟಿ ಎನಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಮೀನಾ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟಿ. ಕನ್ನಡದಲ್ಲಿ ನಟಿ ಮೀನಾ ಹಾಗೂ ರವಿಚಂದ್ರನ್ ಜೋಡಿಯಾಗಿ ಅಭಿನಯಿಸಿರುವ ಎಲ್ಲಾ ಚಿತ್ರಗಳು ಭರ್ಜರಿ ಹಿಟ್ ಕಂಡಿವೆ. 1982ರಲ್ಲಿ ನವಯುಗ ಚಿತ್ರದಲ್ಲಿ ಬಾಲನಟಿಯಾಗಿ ತಮ್ಮ ಅಭಿನಯವನ್ನು ಶುರುಮಾಡಿದ ಮೀನಾ ಅವರು, ನೆಂಚಂಗಲ್ ಚಿತ್ರದ ಮೂಲಕ ತಮ್ಮ ಮೊದಲ ನಟನೆಯನ್ನು ಶುರುಮಾಡಿದರು.

ಮಲಯಾಳಂನಲ್ಲಿ ಮೀನಾ ಅವರ ಇತ್ತೀಚೆಗೆ ಬಿಡುಗಡೆಯಾದ ಬ್ರೋ ಡ್ಯಾಡಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಬ್ರೋ ಡ್ಯಾಡಿ ಚಿತ್ರದಲ್ಲಿ ನಟ ಮೋಹನ್ ಲಾಲ್ ಅವರ ಜೊತೆ ಮೀನಾ ನಟಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಮತ್ತು ಮೀನಾ ಜೊತೆಯಾಗಿ ನಟಿಸಿದ ಬಹುತೇಕ ಚಿತ್ರಗಳು ಹಿಟ್ ಆಗಿವೆ. ಬ್ರೋ ಡ್ಯಾಡಿ ಚಿತ್ರವು ಕೂಡ ತನ್ನ ಟೀಸರ್ ನಿಂದ ಅತಿ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಮೋಹನ್ ಲಾಲ್ ಮತ್ತು ಮೀನಾ ಅವರ ಕಾಂಬಿನೇಷನ್ನ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ಮಲಯಾಳಂ ಹಿಟ್ ಚಿತ್ರ ದೃಶ್ಯ ಚಿತ್ರದಲ್ಲೂ ಮೋಹನ್ ಲಾಲ್ ಅವರಿಗೆ ನಾಯಕಿಯಾಗಿ ಮೀನಾ ನಟಿಸಿದ್ದರು.

ಇನ್ನು ಮಲಯಾಳಂ ಮಾತ್ರವಲ್ಲದೆ ತೆಲುಗುವಿನ ದೃಶ್ಯಂ ಚಿತ್ರದಲ್ಲಿ ಮೀನಾ ನಟಿಸಿ ಸೈ ಎನಿಸಿಕೊಂಡಿದ್ದರು. ದೃಶ್ಯ ಚಿತ್ರವು ಕೇವಲ ಕನ್ನಡದಲ್ಲಿ ಮಾತ್ರ ವಲ್ಲದೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಮೂಡಿಬಂದಿದೆ. ತೆಲುಗುವಿನ ದೃಶ್ಯಂ ಚಿತ್ರದಲ್ಲಿ ಮೀನಾ ಅವರಿಗೆ ವೆಂಕಟೇಶ್ ಅವರು ಜೋಡಿಯಾಗಿ ನಟಿಸಿದ್ದರು. ಚಿತ್ರರಂಗದಲ್ಲಿ ಒಟ್ಟಾರೆ ಮೂವತ್ತು ವರ್ಷಗಳನ್ನು ಮೀನಾ ಪೂರೈಸಿದಂತಾಗಿದೆ. 30 ವರ್ಷಗಳ ನಂತರವೂ ತಮ್ಮದೇ ಆದ ಛಾಪನ್ನು ಮೀನಾ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿಗೆ ಮೀನಾ ಅವರು ಬೇರೊಂದು ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು ನಟಿ ಮೀನಾ ಅವರಿಗೆ ಯುಎಇ ಸರ್ಕಾರದಿಂದ ಪ್ರತಿಷ್ಠಿತ ಗೋಲ್ಡನ್ ವೀಸಾ ಸಿಕ್ಕಿದೆ.

ಈ ವಿಚಾರವನ್ನು ಖುದ್ದು ಮೀನಾ ಅವರೇ ಬಹಿರಂಗಪಡಿಸಿದ್ದು, ತಮಗೆ ಗೋಲ್ಡನ್ ವೀಸಾ ಸಿಕ್ಕಿದ್ದಕ್ಕಾಗಿ ಯುಎಇ ಸರ್ಕಾರಕ್ಕೆ ಧನ್ಯವಾದ ಹೇಳುವ ಮೂಲಕ, ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ದುಬೈ ಎಕ್ಸ್ಪೋದಲ್ಲಿ ಇತ್ತೀಚಿಗೆ ಮೀನಾ ಅವರು ಗೋಲ್ಡನ್ ವೀಸಾ ಪಡೆದುಕೊಂಡರು. ಯುಎಇ ಸರ್ಕಾರದಿಂದ ಗೋಲ್ಡನ್ ವೀಸಾ ಪಡೆಯುವುದರಿಂದ ಅರಬ್ ದೇಶಗಳಲ್ಲಿ ನೆಲೆಯೂರಲು, ಆಸ್ತಿ ಖರೀದಿಸಲು ಹಾಗೂ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ಅನುವುಮಾಡಿಕೊಡುತ್ತದೆ. ಇತ್ತೀಚೆಗೆ ತೆಲುಗು ನಟಿ ಕಾಜಲ್ ಅಗರ್ವಾಲ್, ಬಹುಭಾಷಾ ನಟಿ ಪ್ರಣೀತಾ, ಮೋಹನ್ ಲಾಲ್, ಮುಮ್ಮುಟ್ಟಿ, ಪೃಥ್ವಿರಾಜ್ ನಿವಿನ್ ಪೌಲಿ ಅಮಲಾ ಪೌಲ್ ಮುಂತಾದ ನಟ ನಟಿಯರು ಪ್ರತಿಷ್ಠಿತ ಗೋಲ್ಡನ್ ವೀಸಾ ಪಡೆದಿದ್ದಾರೆ.

%d bloggers like this: