ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿ ಮಾಡಿದ ಭಾರತೀಯ ಚಿತ್ರರಂಗದ ಸುಪ್ರಸಿದ್ದ ಗಾಯಕ

ಇತ್ತೀಚೆಗೆ ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ಸ್ ಸೇರಿದಂತೆ ಕನ್ನಡದ ಸಿನಿಮಾ ಮತ್ತು ಧಾರಾವಾಹಿಯ ನಟ ನಟಿಯರು ಹೊಸ ಹೊಸ ಕಾರ್ ಕೊಂಡುಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಅದರಂತೆ ಇದೀಗ ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಗುಜರಾತಿ, ಮರಾಠಿ, ಬೆಂಗಾಲಿ ಸೇರಿದಂತೆ ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳ ಸಿನಿಮಾಗಳಲ್ಲಿ ತಮ್ಮ ಸುಮಧುರ ಕಂಠದಿಂದ ಹಾಡಿ ಜನಪ್ರಿಯತೆಯ ಜೊತೆಗೆ ಬಹು ಬೇಡಿಕೆಯ ಗಾಯಕರಾಗಿರುವ ಸೋನು ನಿಗಮ್ ಕೂಡ ನೂತನ ಕಿಯಾ ಕಾರ್ನಿವಲ್ ಕಾರು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಶೈನ್ ಆಗುತ್ತಿರುವ ಪ್ರಮುಖ ಕಾರ್ ಗಳಲ್ಲಿ ಕಿಯಾ ಕಂಪನಿಯ ಕಾರುಗಳು ಮೊದಲಿನ ಸ್ಥಾನದಲ್ಲಿ ನಿಲುತ್ತವೆ.

ಗಾಯಕ ಸೋನು ನಿಗಮ್ ಖರೀದಿ ಮಾಡಿರುವ ಕಿಯಾ ಕಾರ್ನಿವಲ್ ಎಂಪಿವಿಯ ಆರಂಭಿಕ ಶೋರೂಂ ಬೆಲೆಯು 24.95 ಲಕ್ಷ ರೂಪಾಯಿ ಹೊಂದಿದ್ದಾಗಿದೆ. ಈ ನೂತನ ಕಿಯಾ ಕಾರ್ನಿವಲ್ ಕಾರು ವಿಐಪಿ ಏಳು ಸೀಟುಗಳ ಆವೃತ್ತಿಯನ್ನೊಂದಿದೆ. ಈ ಕಿಯಾ ಕಾರ್ನಿವಲ್ ಕಾರಿಗೆ 2021ರ ವರ್ಷದಲ್ಲಿ ಹೊಸ ರೂಪ ವಿನ್ಯಾಸ ಕೊಟ್ಟು ಗ್ರಾಹಕರಿಗೆ ಆಕರ್ಷಕವಾಗಿರುವಂತೆ ಟಚ್ ನೀಡಿದ್ದಾರೆ. ಕಿಯಾ ಕಾರ್ನಿವಲ್ ಎಂಪಿವಿಯು8 ಇಂಚಿನ ಇನ್ಫೋಟೈನ್ ಮೆಂಟ್, ಒಟಿಎ ಮ್ಯಾಪ್ ಅಪ್ ಡೇಟ್, ಯುವಿಒ ಸಪೋರ್ಟ್. ಇಸಿಎಂ ಮಿರರ್ ಹೊಂದಿದೆ. ಇನ್ನು ಎಲ್ಲಾ ರೀತಿಯಲ್ಲಿಯೂ ಅಡ್ವಾನ್ಸ್ ಆಗಿರುವ ಈ ಕಿಯಾ ಕಾರ್ನಿವಲ್ ಕಾರು ಲಿಮೋಸಿನ್ ಪ್ಲಸ್ ಮಾದರಿಯು ಹರ್ಮನ್ ಕಾರ್ಡನ್ ಪ್ರೀಮಿಯಂ 8ಸ್ಪೀಕರ್ ಆಡಿಯೋ ಸಿಸ್ಟಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10ವೇ ಪವರ್ ಡ್ರೈವರ್ ಸೀಟ್ ಒಳಗೊಂಡಿದೆ.

%d bloggers like this: