ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿ ಮಾಡಿದ ಕಿರುತೆರೆ ನಟ

ಕಿರುತೆರೆಯ ಖ್ಯಾತ ನಟ ಐಷಾರಾಮಿ ದುಬಾರಿ ಬೆಲೆಯ ಅಡಿ ಕ್ಯೂ 7.ಎಸ್.ಯು.ವಿ. ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಹೌದು ಇತ್ತೀಚೆಗೆ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕೀಯ ಗಣ್ಯ ವ್ಯಕ್ತಿಗಳ ಮಕ್ಕಳು ಹೊಸ ಹೊಸ ದುಬಾರಿ ಬೆಲೆಯ ಕಾರ್ ಖರೀದಿ ಮಾಡುವ ಸಾರ್ವಜನಿಕವಾಗಿ ಭಾರಿ ಸುದ್ದಿಯಾಗುತ್ತಿದ್ದಾರೆ. ಕಾರ್ ಕ್ರೇಜ಼್ ಎಂಬುದು ಇಂದಿನ ಅನೇಕ ಯುವ ನಟ- ನಟಿಯರಲ್ಲಿ ಬಹಳ ಹೆಚ್ಚಾಗಿ ಕಾಣಬಹುದಾಗಿದೆ. ಈಗಾಗಲೇ ಕನ್ನಡದ ಕಿರುತೆರೆಯ ಕಲಾವಿದರೇ ಭಾರಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನೇ ಖರೀದಿ ಮಾಡಿ ಭಾರತೀಯ ಚಿತ್ರರಂಗದ ಸ್ಟಾರ್ ನಟ-ನಟಿಯರೇ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಅದರಂತೆ ಇದೀಗ ಬಾಲಿವುಡ್ ಸಿನಿಮಾ ಮತ್ತು ಧಾರಾವಾಹಿಯ ಖ್ಯಾತ ನಟ ರಾಕೇಶ್ ಬಾಪಟ್ ಅವರು ಆಟೋ ಮೊಬೈಲ್ ಕ್ಷೇತ್ರದಲ್ಲಿ ಪ್ರತಿಷ್ಟಿತ ಕಾರ್ ಗಳಲ್ಲಿ ಒಂದಾಗಿರುವ ಆಡಿ ಕ್ಯೂ ಸೆವೆನ್ ಎಸ್.ಯು.ವಿ ಕಾರ್ ಖರೀದಿಸಿದ್ದಾರೆ‌. ಆದರೆ ಈ ಕಾರ್ ಹೊಸದಲ್ಲ. ಈಗಾಗಲೇ ಒಬ್ಬರು ಬಳಸಿ ಅನಿವಾರ್ಯ ಕಾರಣಗಳಿಂದ ಈ ದುಬಾರಿ ಕಾರ್ ಮಾರಾಟ ಮಾಡುತ್ತಿದ್ದ ಕಾರಣ ಇದೇ ಕಾರನ್ನ ನಟ ರಾಕೇಶ್ ಬಾಪಟ್ ಅವರು ಕೊಂಡು ಕೊಂಡಿದ್ದಾರೆ‌.ಈ ಆಡಿ ಕ್ಯೂ ಸೆವೆನ್ ಎಸ್.ಯು.ವಿ.ಕಾರ್ ಕಳೆದ ವರ್ಷದ ಮಾದರಿಯಾಗಿದೆ. ಹಿಂದಿಯ ಸಿನಿಮಾ ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಟ ರಾಕೇಶ್ ಬಾಪಟ್ ಅವರು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಟ ರಾಕೇಶ್ ಬಾಪಟ್ ಅವರು ಹೆಚ್ಚು ಸುದ್ದಿಯಾಗಿದ್ದರು. ಏಕೆಂದರೆ ಅದೇ ಶೋ ನಲ್ಲಿ ಸಹ ಸ್ಪರ್ಧಿಯಾಗಿದ್ದ ಶಮಿತಾ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ ಎಂದು ಈ ಜೋಡಿಯ ಬಗ್ಗೆ ಸಾಕಷ್ಟು ಸುದ್ದಿ ಆಗುತ್ತಿತ್ತು. ದೊಡ್ಮನೆಯಿಂದ ಹೊರ ಬಂದ ಬಳಿಕ ಈ ಜೋಡಿ ಮದುವೆ ಆಗಲಿದ್ದಾರೆ ಎನ್ನುವಷ್ಟರ ಮಟ್ಟಿಗೆ ಇವರಿಬ್ಬರ ಸುದ್ದಿಯಾಗಿದ್ದರು. ಇನ್ನು ನಟ ರಾಕೇಶ್ ಬಾಪಟ್ ಅವರು ಖರೀದಿ ಮಾಡಿರುವ ಈ ಆಡಿ ಕ್ಯೂ ಸೆವೆನ್ ಎಸ್.ಯು.ವಿ. ಕಾರನ್ನು ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ನಟಿ ಅಥಿಯಾ ಶೆಟ್ಟಿ ಕೂಡ ಖರೀದಿ ಮಾಡಿ ಸುದ್ದಿಯಾಗಿದ್ದರು.

ಈ ವರ್ಷ ಲಾಂಚ್ ಆಗಿರುವ ಆಡಿ ಕ್ಯೂ ಸೆವೆನ್ ಎಸ್.ಯು.ವಿ.ಕಾರಿನಲ್ಲಿ ಒಂದಷ್ಟು ಅಡ್ವಾನ್ಸ್ಡ್ ಫೀಚರ್ ಸೇರ್ಪಡೆ ಆಗುತ್ತದೆಯಂತೆ. ಈ ಕಾರಿನ ವೈಶಿಷ್ಟ್ಯತೆಯನ್ನ ತಿಳಿಯುವುದಾದರೆ 3.0 ಲೀಟರಿನ ಟ್ವಿನ್ ಟರ್ಬೋಚಾರ್ಜ್ಡ್, ಪೆಟ್ರೋಲ್ ಇಂಜಿನ್ ವ್ಯವಸ್ಥೆಯಿದ್ದು, 335 ಬಿ.ಹೆಚ್.ಪಿ. ಪವರ್ ಮತ್ತು 500 ಎನ್.ಎಮ್. ಟಾರ್ಕ್ ಅನ್ನು ಉತ್ಪಾದಿಸುವ ಕೆಪಾಸಿಟಿ ಹೊಂದಿದೆ. ಇದರಲ್ಲಿ 48 ವೋಲ್ಟ್ ಎಲಕ್ಟ್ರಿಕ್ ಮೋಟಾರು, ಲಿಥಿಯಂ, ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟನ್ರೇಟರ್ ಸ್ಟಾರ್ಟರ್ ಕೂಡ ಹೊಂದಿದೆಯಂತೆ. ಇನ್ನು ನಾಲ್ಕು ಮುಂಭಾಗದ ಸೀಟುಗಳಿಗೆ ಲಂಬೂರ್ ಸಂಪೂರ್ಟ್, ಪಾರ್ಕಿಂಗ್ ಅಸಿಸ್ಟ್ ಜೊತೆಗೆ ಕ್ರೂಸ್ ಕಂಟ್ರೋಲ್ ಪ್ಹೋರ್ ಜೋನ್ ಕಂಟ್ರೋಲ್, ಪವರ್ ಅಡ್ಜಸ್ಟ್ ಮೆಂಟ್, ಆಡಿ ಸೌಂಡ್ ಸಿಸ್ಟಮ್, ವೈರ್ ಲೆಸ್ ಚಾರ್ಜಿಂಗ್ ಆಡಿ ಪೋನ್ ಬಾಕ್ಸ್ ಮತ್ತು ಆಡಿ ಸ್ಮಾರ್ಟ್ ಫೋನ್ ಇಂಟರ್ ಫೇಸ್ ಸಿಸ್ಟಂ ಕೂಡ ಇದೆ. ಒಟ್ಟಾರೆಯಾಗಿ ಈ ಆಡಿ ಕ್ಯೂ ಸೆವೆನ್. ಎಸ್.ಯು.ವಿ. ಕಾರಿಗೆ ಅನೇಕ ಯುವ ನಟ-ನಟಿಯರು ಮನ ಸೋಲುತ್ತಿದ್ದಾರೆ.

%d bloggers like this: