ದುಬಾರಿ ಬೆಲೆಯ ಬಿಎಂಡಬ್ಲು ಕಾರು ಖರೀದಿಸಿದ ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ

ಬಿಗ್ ಬಾಸ್ ಲಕ್ಕಿ ಕಂಟೆಸ್ಟೆಂಟ್ ಕನಸಿನ ಕಾರ್ ಖರೀದಿ ಮಾಡಿ ಫುಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ ಕಾರ್ ಕ್ರೇಜ಼್ ಎಷ್ಟರ ಮಟ್ಟಗೆ ರಂಗೇರಿದೆ ಅಂದರೆ ಸಿನಿಮಾ ಸ್ಟಾರ್ ಗಳಿರಲಿ ಕಿರುತೆರೆಯ ಕಲಾವಿದರು ನಾವು ಕೂಡ ಯಾರಿಗೂ ಕಡಿಮೆ ಏನಿಲ್ಲ ಅಂತ ದುಬಾರಿ ಬೆಲೆಯ ಐಷಾರಾಮಿ ಕಾರ್ ಖರೀದಿಸಿ ಭಾರಿ ಸುದ್ದಿ ಆಗುತ್ತಿದ್ದಾರೆ. ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಆ ಪ್ರತಿಭೆ ಗುರುತಿಸಿ ಅವಕಾಶ ನೀಡುವ ಉದಾತ್ತ ಪ್ರತಿಭೆಗಳ ಕೊರತೆ ಖಂಡಿತಾ ಇದೆ. ಕೆಲವರಿಗೆ ಪ್ರತಿಭೆ ಇದ್ದರು ಕೂಡ ಸೂಕ್ತವಾದ ವೇದಿಕೆ ದೊರೆಯದೆ ಎಲೆಮರೆ ಕಾಯಿಯಂತೆ ಬಹುತೇಕ ಪ್ರತಿಭಾವಂತರ ಪ್ರತಿಭೆ ತೆರೆ ಮರೆಯಲ್ಲಿಯೇ ಉಳಿದು ಬಿಡುತ್ತವೆ. ಕೆಲವರು ಮಾತ್ರ ತಮ್ಮ ಪ್ರತಿಭೆಗೆ ತಾವೇ ಅವಕಾಶ ವೇದಿಕೆ ಸೃಷ್ಟಿಸಿಕೊಂಡು ಮುಖ್ಯ ವಾಹಿನಿಗೆ ಬರುತ್ತಾರೆ. ಅಂತಹ ಪ್ರತಿಭೆಗಳಲ್ಲಿ ಬ್ರೋ ಗೌಡ ಉರುಫ್ ಶಮಂತ್ ಕೂಡ ಒಬ್ಬರು.

ಸಿನಿಮಾ ಲೋಕದಲ್ಲಿ ಮಿಂಚಬೇಕು ಎಂಬ ಮಹಾದಾಸೆ ಹೊತ್ತು ಅವಕಾಶಕ್ಕಾಗಿ ತುಡಿಯುತ್ತಿದ್ದಾಗ ಉತ್ತಮ ವೇದಿಕೆಯಾಗಿ ಸೋಶಿಯಲ್ ಮೀಡಿಯಾಗಳನ್ನೇ ಸದುಪಯೋಗಿಸಿಕೊಂಡು ತನ್ನ ಗಾಯನ, ಸಾಹಿತ್ಯದ ಪ್ರತಿಭೆ ಮೂಲಕ ಜನಪ್ರಿಯತೆ ಗಳಿಸಿದವರು ಶಮಂತ್ ಬ್ರೋ ಗೌಡ. ಶಮಂತ್ ಅವರ ಬಾ ಗುರು ಎಂಬ ಆಲ್ಬಂ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದೇ ತಡ ಬಿಗ್ ಬಾಸ್ ಹೋಗುವ ಎಲ್ಲಾ ಲಕ್ಷಣಗಳು ಇವರಲ್ಲಿ ಕಾಣಿಸಿತು. ಅದರಂತೆ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಮಂತ್ ಬ್ರೋ ಗೌಡ ಆರಂಭದ ವಾರದಿಂದಾನೇ ಎಲ್ಲರ ಟಾರ್ಗೆಟ್ ಆದರು. ಆದರು ಕೂಡ ಅದೃಷ್ಟ ಎಂಬುದು ಇವರ ಕೈ ಹಿಡಿದಿತ್ತು.

ಆರಂಭದ ಎರಡು ವಾರಗಳ ಕಾಲ ನಿರಂತರವಾಗಿ ಕ್ಯಾಪ್ಟನ್ ಆಗುವ ಮೂಲಕ ಎಲಿಮಿನೇಶನ್ ಇಂದ ಬಚಾವ್ ಆಗುತ್ತಲೇ ಬರೋಬ್ಬರಿ ನೂರು ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದರು. ಬಿಗ್ ಬಾಸ್ ಮನೆಯೊಳೆಗೆ ಇದ್ದಷ್ಟು ದಿನಗಳ ಕಾಲ ತನ್ನ ಸಾಹಿತ್ಯ, ಹಾಡಿನ ಮೂಲಕ ಎಲ್ಲರನ್ನ ರಂಜಿಸುತ್ತಿದ್ದರು. ಇವರಲ್ಲಿರುವ ಪ್ರತಿಭೆ ಇವರನ್ನ ಇಂದು ಅನೇಕ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಂತೆ ಮಾಡಿದೆ. ಇತ್ತೀಚೆಗೆ ತಾನೇ ಜನ್ಮದಿನ ಆಚರಿಸಿಕೊಂಡ ಶಮಂತ್ ಬ್ರೋ ಗೌಡ ಇದೀಗ ಬಿ.ಎಂ.ಡಬ್ಲ್ಯೂ ಕಾರ್ ಖರೀದಿಸಿ ಸುದ್ದಿಯಲ್ಲಿದ್ದಾರೆ.

ಶಮಂತ್ ಅವರು ಈ ಕಾರಿನ ಬೆಲೆ ಎಲ್ಲಿಯೂ ಬಹಿರಂಗ ಪಡಿಸಿಲ್ಲವಾದರೂ ಈ ಕಾರಿನ ಬೆಲೆ ಸುಮಾರು ಐವತ್ತು ಲಕ್ಷದಷ್ಟಿದೆ. ಶಮಂತ್ ಅವರಿಗೆ ಬಾಲ್ಯದಿಂದಾನೂ ಕಾರ್ ಖರೀದಿ ಸಬೇಕು ಎಂಬ ಆಸೆ ಇತ್ತಂತೆ. ಅದರಂತೆ ಅವರು ತಮ್ಮ ಪುಸ್ತಕದ ಕೊನೆಯ ಹಾಳೆಯಲ್ಲಿ ತನ್ನ ನೆಚ್ಚಿನ ಕನಸಿನ ಕಾರ್ ಚಿತ್ರ ಬಿಡಿಸಿಕೊಂಡಿದ್ದರಂತೆ. ಇದೀಗ ತನ್ನ ಕನಸಿನ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರ್ ಖರೀದಿ ಮಾಡಿರುವುದಕ್ಕೆ ಸಂತೋಷವಾಗಿದೆಯಂತೆ. ಇನ್ನು ಶಮಂತ್ ಬ್ರೋ ಗೌಡ ಅವರು ವೆಬ್ ಸೀರೀಸ್ ಮಾಡುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದ್ದಾರಂತೆ.

%d bloggers like this: