ದುಬಾರಿ ಬೆಲೆಯ ಡ್ರೆಸ್ ನಲ್ಲಿ ಅಮೂಲ್ಯ ಅವರ ಕಾರ್ಯಕ್ರಮದಲ್ಲಿ ಮಿಂಚಿದ ರಾಧಿಕಾ ಪಂಡಿತ್ ಅವರು

ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಜೋಡಿ. ಹಲವು ಸಿನಿಮಾಗಳಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದ ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದರು. ಕೇವಲ ಪರದೆಯ ಹಿಂದಷ್ಟೇ ಅಲ್ಲದೆ ನಿಜ ಜೀವನದಲ್ಲೂ ಇವರಿಬ್ಬರ ಜೋಡಿ ತುಂಬಾ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದರು. ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾದ ನಂತರವಂತೂ ಈ ಜೋಡಿಗಳು ಮದುವೆಯಾಗುತ್ತಾರೆ ಎಂಬ ಸುದ್ದಿ ಸಕ್ಕತ್ ವೈರಲ್ ಆಗಿತ್ತು. ಆದರೆ ಎಲ್ಲಿಯೂ ಅಧಿಕೃತವಾಗಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಳ್ಳದ ಈ ಜೋಡಿ ಒಮ್ಮೆಲೆ ಎಂಗೇಜ್ಮೆಂಟ್ ಆಗುತ್ತಿರುವ ಸುದ್ದಿಯನ್ನು ತಿಳಿಸಿ ಎಲ್ಲರಿಗೂ ಶಾಕ್ ನೀಡಿದರು.

ರಾಧಿಕಾ ಪಂಡಿತ್ ಮದುವೆ ಹಾಗೂ ಮಕ್ಕಳ ನಂತರ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ರಾಧಿಕಾ ಅವರು ತಮ್ಮ ಹಾಗೂ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ರಾಧಿಕಾ ಅಷ್ಟು ದೊಡ್ಡ ನಟಿಯಾದರೂ, ನ್ಯಾಷನಲ್ ಹೀರೋ ಯಶ್ ಅವರ ಹೆಂಡತಿಯಾದರೂ, ಯಾವಾಗಲೂ ಸಿಂಪಲ್ ಅಂಡ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಯಶ್ ಅವರಿಗೆ ಸಿಂಪಲ್ ಆಗಿ ಇರುವುದೇ ಇಷ್ಟ ಎಂದು ಒಂದು ಸಂದರ್ಶನದಲ್ಲಿ ರಾಧಿಕಾ ಹೇಳಿಕೊಂಡಿದ್ದರು. ಇತ್ತೀಚೆಗೆ ರಾಧಿಕಾ ಪಂಡಿತ್ ಅವರ ಬಗ್ಗೆ ಒಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇತ್ತೀಚೆಗೆ ನಟಿ ಅಮೂಲ್ಯ ಅವರ ಸೀಮಂತ ಪಾರ್ಟಿಯಲ್ಲಿ ಭಾಗವಹಿಸಿದ್ದ ರಾಧಿಕಾ ಪಂಡಿತ್ ಅವರ ಡ್ರೆಸ್ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ.

ನಟಿಯರಾದ ಭಾರತಿ ವಿಷ್ಣುವರ್ಧನ್, ಸುಧಾರಾಣಿ, ಶೃತಿ, ಮಾಳವಿಕಾ ಅವಿನಾಶ್, ರಾಧಿಕಾ ಪಂಡಿತ್ ಎಲ್ಲರೂ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸೀಮಂತ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್ ಅವರು ಹಸಿರು ಬಣ್ಣದ ಮ್ಯಾಕ್ಸಿ ಡ್ರೆಸ್ ಒಂದನ್ನು ಧರಿಸಿದ್ದರು. ಇದೀಗ ಅವರು ಧರಿಸಿದ ಡ್ರೆಸ್ ಸುದ್ದಿಯಲ್ಲಿದೆ. ರಾಧಿಕಾ ಪಂಡಿತ್ ಅವರು ಧರಿಸಿದ ಡ್ರೆಸ್ನ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ. ಬಾಲಿವುಡ್ ನ ಫೇಮಸ್ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತ ಅವರು ರಾಧಿಕಾ ಪಂಡಿತ್ ಅವರ ಡ್ರೆಸ್ಸನ್ನು ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ. ಮಸಾಬಾ ಗುಪ್ತ ಅವರು ಬಾಲಿವುಡ್ ನಲ್ಲಿ ಅತಿ ಹೆಚ್ಚು ಫೇಮಸ್ ಆಗಿರುವ ಫ್ಯಾಶನ್ ಡಿಸೈನರ್ ಆಗಿದ್ದು, ಹೌಸ್ ಆಫ್ ಮಸಾಬಾ ಎಂಬ ಹೆಸರಿನ ಫ್ಯಾಷನ್ ಬ್ರಾಂಡ್ ಸಹ ಹೊಂದಿದ್ದಾರೆ. ಹೀಗಾಗಿ ರಾಧಿಕಾ ಪಂಡಿತ್ ಅವರು ಧರಿಸಿದ ಹಸಿರು ಬಣ್ಣದ ಈ ಮ್ಯಾಕ್ಸಿ ಡ್ರೆಸ್ ನ ಬೆಲೆ ಬರೋಬ್ಬರಿ 9,999 ರೂಪಾಯಿಗಳು.

%d bloggers like this: