ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರು ಖರೀದಿಸಿದ ನಟ

ದುಬಾರಿ ಬೆಲೆಯ ಐಷಾರಾಮಿ ಮಿನಿ ಕೂಪರ್ ಕನ್ವರ್ಟಬಲ್ ಕಾರ್ ಖರೀದಿ ಮಾಡಿ ಸುದ್ದಿಯಾದ ಮಲೆಯಾಳಂ ಸ್ಟಾರ್ ನಟ, ಇತ್ತೀಚೆಗಿನ ದಿನ ಮಾನಗಳಲ್ಲಿ ಭಾರತೀಯ ಚಿತ್ರರಂಗದ ಬಹುತೇಕ ನಟ- ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಮದುವೆ ಸಮಾರಂ‌ಭ, ಫೋಟೋಶೂಟ್, ಪ್ರವಾಸಿ ತಾಣಗಳ ಭೇಟಿ ಮತ್ತು ತಮ್ಮ ವೈಯಕ್ತಿಕ ವಿಚಾರಗಳಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಅದರ ಜೊತೆಗೆ ಹೊಸ ಹೊಸ ಕಾರ್ ಖರೀದಿ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಇದೀಗ ಮಲೆಯಾಳಂ ಚಿತ್ರರಂಗದ ಸುಪ್ರಸಿದ್ದ ನಟ, ಕಮ್ ನಿರ್ಮಾಪಕ ಜೊಜು ಜಾರ್ಜ್ ಅವರು ಐಷಾರಾಮಿ ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

ಸಿನಿಮಾ ಸೆಲೆಬ್ರೆಟಿಗಳಿಗೆ ತಮ್ಮ ಲೈಫ್ ಸ್ಟೈಲ್ ಬಗ್ಗೆ ಬಹಳ ಅಭಿರುಚಿ ಇರುತ್ತದೆ. ಕೆಲವು ನಟರಿಗೆ ತಮ್ಮ ತಮ್ಮ ಸಿನಿಮಾಗಳ ಬಗ್ಗೆ ಫ್ಯಾಶನ್ ಇರುತ್ತದೆ. ಕೆಲವರಿಗೆ ಇಂಪೋರ್ಟೆಡ್ ಕಾರ್ ಗಳ ಬಗ್ಗೆ ಕ್ರೇಜ಼್ ಇರುತ್ತದೆ. ಅಂತೆಯೇ ಮಾಲಿವುಡ್ ಸ್ಟಾರ್ ನಟ ಕಮ್ ನಿರ್ಮಾಪಕ ಜೊಜು ಜಾರ್ಜ್ ಅವರಿಗೆ ಕಾರ್ ಕ್ರೇಜ಼್ ಸಖತ್ತಾಗೇ ಇದೆ. ಲಾಸ್ಟ್ ಇಯರ್ ನಟ ಜೊಜು ಜಾರ್ಜ್ ಅವರು ಲ್ಯಾಂಡ್ ರೋವರಿನ ಲೆಜೆಂಡರಿ ಡಿಫೆಂಡರ್ ಮತ್ತು ಟ್ರಯಾಂಪ್ ಸ್ಟ್ರೀಟ್ ಟ್ರಿಪಲ್ ಆರ್ ಮಾಡೆಲ್ ಖರೀದಿ ಮಾಡಿದ್ದರು. ಇದೀಗ ಹೊಸ ಮಿನಿ ಕೂಪರ್ ಜೆಸ್ಟಿ ಯೆಲ್ಲೋ ಎಸ್ ಕನ್ವರ್ಟಬಲ್ ಮಾಡೆಲ್ ಕಾರ್ ಖರೀದಿಸಿದ್ದಾರೆ.

ಬರೋಬ್ಬರಿ ಐವತ್ತೊಂಭತ್ತು ಲಕ್ಷ ರೂ ಮೌಲ್ಯದ ಈ ಕಾರ್ ಇತ್ತೀಚೆಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಏಕೆಂದರೆ ಅದಕ್ಕೆ ಪ್ರಮುಖ ಕಾರಣ ಅಂದರೆ ಈ ಮಿನಿ ಕೂಪರ್ ಕೇವಲ 7.1 ಸೆಕೆಂಡ್ ಗಳಲ್ಲಿ ನೂರು. ಕಿ.ಮೀ ವೇಗವನ್ನು ಪಡೆಯುತ್ತದೆ. ಈ ಕಾರಿನ ವಿಶೇಷತೆಯ ಫೀಚರ್ ಗಳನ್ನು ತಿಳಿಯುವುದಾದರೆ ಈ ಮಿನಿ ಕೂಪರ್ ಆಕರ್ಷಕ ಜ್ಯಾಕ್ ವಿನ್ಯಾಸವನ್ನೊಂದಿದೆ. ಕಾರಿನ ಹಿಂಭಾಗದಲ್ಲಿ ಏಪ್ರನ್ ನೂತನ ಲಂಬವಾಗಿ ಅಳವಡಿಸಲಾಗಿದ್ದು ಏರ್ ಇನ್ ಟೇಕ್ ಗಳನ್ನು ಏರೋ ಡೈನಾಮಿಕ್ಸ್ ಆಗಿದೆ. ಈ ಮಿನಿ ಕೂಪರ್ ಕನ್ವರ್ಟಬಲ್ ಒಳಭಾಗದಲ್ಲಿ ಬ್ಲ್ಯಾಕ್ ಪರ್ಲ್ ಲೈಟ್ ಚೆಕರ್ಡ್ ಮತ್ತು ಬ್ಲ್ಯಾಕ್ ಪರ್ಲ್ ಕಾರ್ಬನ್, ಬ್ಲ್ಯಾಕ್ ಅಪ್ಹೋಲ್ಸ್ಟರಿ ಆಯ್ಕೆಗಳಲ್ಲಿ ಬಟ್ಟೆ ಮತ್ತು ಲೆದರ್ ಆಯ್ಕೆಯಲ್ಲಿ ದೊರೆಯಲಿದೆ.

ಈ ಮಿನಿ ಕೂಪರ್ ನಲ್ಲಿ ಇನ್ಫೋಟೈನ್ ಮೆಂಟ್ ಕನೆಕ್ಟಿವಿಟಿ 8.8 ಇಂಚಿನ ಟಚ್ ಸ್ಕ್ರಿನ್ ಡಿಸ್ ಪ್ಲೇ ಹೊಂದಿದೆ‌. ಮಾಲಿವುಡ್ ರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಟ ಜೊಜು ಜಾರ್ಜ್ ಈ ಮಿನಿ ಕೂಪರ್ ಕಾರ್ ನ್ನು ಅವರ ಪತ್ನಿ ಅಬಾ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ಶೋ ರೂಂ ನಲ್ಲಿ ಈ ವಿಶೇಷ ಮಿನಿ ಕೂಪರ್ ಕಾರ್ ಕೀ ಅನ್ನು ನಟ ಜೊಜು ಜಾರ್ಜ್ ಮತ್ತು ಪತ್ನಿ ಅಬಾ, ಮಕ್ಕಳು ಜೊತೆ ಸೇರಿ ಪಡೆಯುತ್ತಿರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಜೊಜು ಜಾರ್ಜ್ ಅವರು ಪೀಸ್ ಎಂಬ ಮಲೆಯಾಳಂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

%d bloggers like this: